ಕಳೆದ ಮೂರು ದಿನಗಳಿಂದ ರಸ್ತೆ ಮಧ್ಯವೇ ಕೆಟ್ಟು ನಿಂತ ಬಸ್: ಬಸ್ ತೆರವಿಗೂ ರಾಮಲಿಂಗಾರೆಡ್ಡಿಯವರೇ ಹೇಳಬೇಕೆ?
ಆಪ್ತ ನ್ಯೂಸ್ ಹೊನ್ನಾವರ:
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಒಂದು ಕಳೆದ ಮೂರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಬಾಳ - ಹಿರೇಬೈಲ್ ಮಾರ್ಗದ ಮಧ್ಯೆ ಕೆಟ್ಟು ನಿಂತಿದೆ. ಇದರಿಂದಾಗಿ ಈ ಭಾಗದ ರಸ್ತೆ ಸಂಚಾರ ನಿಲ್ಲುವಂತಾಗಿದೆ. ಬಸ್ ತೆರವುಗೊಳಿಸುವುದು ಹಾಗೂ ಬಸ್ ರಿಪೇರಿ ಮಾಡುವುದಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಬೇಕಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆ. ಈ ಕುರಿತಂತೆ ರವಿ ಶಿವರಾಮ್ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಇದೀಗ ಸದ್ದು ಮಾಡುತ್ತಿದೆ. ರಸ್ತೆಯಲ್ಲಿ ನಿಂತ ಬಸ್ ತೆರವು ಮಾಡಿಸುವ ಸಂಬಂಧ ಬಸ್ ಡಿಪೋ ಮ್ಯಾನೇಜರ್ ಸ್ಪಂದಿಸದ ಕಾರಣ ಸಾರಿಗೆ ಸಚಿವರಿಗೆ ಪೋನ್ ಮಾಡಬೇಕಾಗಿ ಬಂದಂತಹ ಸನ್ನಿವೇಶವನ್ನು ಅವರು ತಮ್ಮ ಫೇಸ್‌ಬುಕ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.
ಹೊನ್ನಾವರ ತಾಲೂಕಿನ ಗುಂಡಬಾಳ - ಹಿರೇಬೈಲ್ ಮಾರ್ಗದಲ್ಲಿ ರಸ್ತೆ ಮಧ್ಯೆ ಕೆಟ್ಟು ನಿಂತಿರುವುದರಿಂದ ರೋಡ್ ಬ್ಲಾಕ್ ಆಗಿದೆ. ಶಾಲೆ ಕಾಲೇಜು ಹೋಗುವ ಮಕ್ಕಳು ಸಿಟಿಗೆ ಓಡಾಡುವ ಜನರ ಗೋಳು ಕೇಳೊರಿಲ್ಲ ಎನ್ನುವಂತಾಗಿದೆ. ಸ್ಥಳೀಯರು ಬಸ್ ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸುವಂತೆ ಕುಮಟಾ ಡಿಪೊ ಮ್ಯಾನೇಜರ್ ಗೆ ಕರೆ ಮಾಡಿದರೆ, ಎರಡು ಸಾರಿ ಪೋನ್ ಎತ್ತಿಲ್ಲ. ಮೂರನೇ ಸಾರಿ \ಕರೆ ಮಾಡಿದಾಗ ಮೀಟಿಂಗ್'ಲ್ಲಿ ಇದ್ದೇನೆ ಎಂದು ಸಬೂಬು ಹೇಳಿದ್ದಾರೆ.
ಈ ವಿಷಯದ ಕುರಿತು ಏನು ಮಾಡಬೇಕೆಂದು ತಿಳಿಯದೇ ಸ್ಥಳೀಯರು ರವಿ ಶಿವರಾಮ್ ಅವರ ಬಳಿ ವಿಷಯ ತಿಳಿಸಿದರು. ಅವರು ಮಾಡುವ ಪ್ರಯತ್ನವನ್ನು ಮಾಡಿದರು. ಕೊನೆಗೆ ಬೇರೆ ದಾರಿ ಕಾಣದೆ ನೇರವಾಗಿ ಸಾರಿಗೆ ಸಚಿವರಾರ ರಾಮಲಿಂಗ ರೆಡ್ಡಿಯವರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅವರು ತಕ್ಷಣ ಯಾರಿಗೆ ಹೇಳಬೇಕೊ ಹೇಳಿ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಮಾತು ಹೇಳಿದರು. ಕ್ರಮ ಆಮೇಲೆ ನೋಡೊಣ ಸರ್ ಮೊದಲು ಇದೊಂದು ಬಸ್ ತಗೆದು ದಾರಿ ಕ್ಲಿಯರ್ ಮಾಡಿಕೊಡಿ ಎಂದು ರವಿ ಶಿವರಾಮ್ ಅವರು ವಿನಂತಿ ಮಾಡಿಕೊಂಡಿದ್ದಾರೆ.
ಇದು ಬಹಳ ಚಿಕ್ಕ ವಿಷಯ ನಿಮಗಲ್ಲಾ ಹೇಳುವಂತದಲ್ಲ. ಆದರೆ ಮೂರು ದಿನ ಕಳೆದರು ಅಧಿಕಾರಿಗಳು ಏನು ಮಾಡಿಲ್ಲ ಎಂದು ಊರಿನ ಜನರು ಹೇಳಿದ ಮೇಲೆ ನಿಮಗೆ ಹೇಳಬೇಕಾಯಿತು ಸರ್ ಎಂದು ರವಿ ಶಿವರಾಮ್ ಸಾರಿಗೆ ಸಚಿವರಿಗೆ ತಿಳಿಸಿದರು.
ಸಚಿವರು ಕರೆ ಮಾಡಿ ಇಟ್ಟ ತಕ್ಷಣ ಕುಮಟಾ ಡಿಪೊ ಮ್ಯಾನೇಜರ್ ಕರೆ ಮಾಡಿದರು. ನಮ್ಮಲ್ಲಿ ಕ್ರೇನ್ ಇಲ್ಲ. ಹೀಗಾಗಿ ಬಸ್ ತೆರವು ಮಾಡಲು ಆಗಲಿಲ್ಲ ಎಂದು ಸಬುಬು ಹೇಳಿದರು.! ಸಾವಿರ ಕುಟುಂಬ ವಾಸ ಇರುವ ಊರು, ಪ್ರತಿದಿನ ನೂರಾರು ಜನರು ಓಡಾಡುವ ಜನರು, ಕಾಲೇಜು ಹೈಸ್ಕೂಲ್ ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ಸಮಸ್ಯೆ ಆಗಿದ್ದರು ಅದನ್ನು ಇಷ್ಟು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳಿಗೆ ಏನಾದರೂ ಸಾರ್ವಜನಿಕರ ಸೇವೆಯ ಬಗ್ಗೆ ಅರಿವು ಇಲ್ಲವೇ?
ಸಾರಿಗೆ ಶಿಕ್ಷಣ ಆರೋಗ್ಯ ಕಾರ್ಮಿಕ ಇಲಾಖೆಗಳೆಲ್ಲಾ ಲಾಭಕ್ಕೆ ಇರುವ ವ್ಯವಸ್ಥೆ ಅಲ್ಲ. ಜನರ ಮೂತಭೂತ ಹಕ್ಕನ್ನು ಈಡೇರಿಸಲು ಪೂರೈಸಲು ಇರುವ ಇಲಾಖೆ. ಅಂತಹ ಇಲಾಖೆ ಅದರ ಸಿಬ್ಬಂದಿ ಇಷ್ಟು ನಿರ್ಲಕ್ಷ್ಯ ಮಾಡಿದರೆ ಅವರ ಮೇಲೆ ಯಾವ ಕ್ರಮ ಆಗಬೇಕು? ಇಂದು ರೋಡ್ ಕ್ಲಿಯರ್ ಮಾಡುವ ಭರವಸೆ ನೀಡಿದ್ದಾರೆ ನೋಡೊಣ.
ಹೊನ್ನಾವರದ ಗುಂಡಬಾಳದಂತಹ ಅಪ್ಪಟ ಗ್ರಾಮೀಣ ಭಾಗದಲ್ಲಿ ಕೆಟ್ಟು ನಿಂತ ಬಸ್ ತೆರವಿಗೂ ಸಾರಿಗೆ ಸಚಿವರ ಪೋನ್ ಕೆಲಸ ಮಾಡಬೇಕೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಫೇಸ್ ಬುಕ್ ಪೋಸ್ಟ್ ಲಿಂಕ್ ಇಲ್ಲಿದೆ ನೋಡಿ
https://www.facebook.com/share/1EonB6AdeA/
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



