ಶಿಕ್ಷಕಿ ಮನೆಯಲ್ಲಿ ಏಳು ಲಕ್ಷಕ್ಕಿಂತ ಹೆಚ್ಚಿನ ವಸ್ತುಗಳ ಕಳ್ಳತನ

ಆಪ್ತ ನ್ಯೂಸ್ ಶಿರಸಿ:
ಶಿಕ್ಷಕಿ ಮನೆಯಲ್ಲಿ ಇಲ್ಲದ ಸಂದರ್ಭ ನೋಡಿ, ಮನೆಯಲ್ಲಿನ ವಸ್ತುಗಳನ್ನು ಕಳ್ಳರು ಕದ್ದುಕೊಂಡು ಹೋದ ಘಟನೆ ಶಿರಸಿ ನಗರದ ಮಾರಿಕಾಂಬಾ ನಗರದಲ್ಲಿ ನಡೆದಿದೆ.
ಮಾರಿಕಾಂಬಾ ನಗರದ ರಮಾ ಎಂಬ ಶಿಕ್ಷಕಿ ಸಿದ್ಧಾಪುರದಲ್ಲಿರುವ ತಮ್ಮದೇ ಒಡೆತನದ ರೆಸಾರ್ಟ್ ಗೆ ಹೋಗಿದ್ದರು. ಇದೆ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆಯ ಬಾಗಿಲು ಮುರಿದು ಹಣ, ಒಡವೆ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಕಳ್ಳರು, ಮನೆಯ ಬೆಡ್ ರೂಮ್ ನ ಕಪಾಟಿನಲ್ಲಿದ್ದ 48 ಸಾವಿರ ರೂ ನಗದು, 7. ಲಕ್ಷ ಮೌಲ್ಯದ ಬಂಗಾರದ ಆಭರಣ, 50 ಸಾವಿರ ಮೌಲ್ಯದ 500 ಗ್ರಾಮ್ ನ ಬೆಳ್ಳಿಯ ತಟ್ಟೆಯನ್ನು ಕದ್ದು ಪರಾರಿಯಾಗಿದ್ದಾರೆ. ಶಿರಸಿ ಶಹರ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.
What's Your Reaction?






