ಆರತಿ ಬೈಲ್ ಘಟ್ಟದಲ್ಲಿ ಉರುಳಿಬಿದ್ದ ಸಿಮೆಂಟ್ ಲಾರಿ

ಆಪ್ತ ನ್ಯೂಸ್ ಯಲ್ಲಾಪುರ:
ಸಿಮೆಂಟು ತುಂಬಿದ ಲಾರಿಯೊಂದು ರಾ.ಹೆದ್ದಾರಿ ೬೩ ರ ಆರತಿಬೈಲ್ ಬಳಿಯ ಅಪಾಯಕಾರಿ ತಿರುವಿನಲ್ಲಿ ಶನಿವಾರ ಬೆಳಗಿನ ಜಾವ ಕಂದಕಕ್ಕೆ ಬಿದ್ದಿದೆ.
ಹುಬ್ಬಳ್ಳಿ ಕಡೆಯಿಂದ ಸಿಮೆಂಟ ಚೀಲಗಳನ್ನು ತುಂಬಿಕೊಂಡು ಅಂಕೋಲಾ ಕಡೆ ಹೊರಟಿದ್ದ ಲಾರಿ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಕಾಲಿಗೆ ಅಲ್ಪ ಸ್ವಲ್ಪ ಪೆಟ್ಟಾಗಿದೆ.
What's Your Reaction?






