ಜನಗಣತಿ ಪೂರ್ವಭಾವಿಯಾಗಿ ಮೇಲ್ವಿಚಾರಕರಿಗೆ ತರಬೇತಿ
ಆಪ್ತ ನ್ಯೂಸ್ ಜೋಯಿಡಾ:
ಜನಗಣತಿ 2027 ರ ಪ್ರಾಯೋಗಿಕ ಪೂರ್ವ ಪರೀಕ್ಷೆ ಅಂಗವಾಗಿ , ಕರ್ನಾಟಕದಲ್ಲಿ ಆಯ್ದ ಮೂರು ತಾಲೂಕುಗಳಲ್ಲಿ ಪೂರ್ವ ಪರೀಕ್ಷೆ ಮನೆ ಪಟ್ಟಿ ಕಾರ್ಯವನ್ನು ಪ್ರಾಯೋಗಿಕವಾಗಿ ಇದೇ ದಿನಾಂಕ 10.11.2025. ರಿಂದ 30.11.2025 ರವರೆಗೆ ನಡೆಸಲಾಗುತ್ತಿದೆ. ಅದರಲ್ಲಿ ಜೋಯಿಡಾ ತಾಲೂಕು ಒಂದು( ಗುಂಡ್ಲುಪೇಟೆ, ಬಿಬಿಎಂಪಿ ಒಂದು ವಾರ್ಡ) ಜೋಯಿಡಾದ 46 ಗ್ರಾಮಗಳ 68 ಬ್ಲಾಕ್ ಗಳಲ್ಲಿ ನಡೆಸಲಾಗುತ್ತಿದೆ. ಒಟ್ಟು 71 ಗಣತಿದಾರರು, 13 ಮೇಲ್ವಿಚಾರಕರಿಗೆ ತರಬೇತಿಯನ್ನು ದಿ. 4.11.25 ರಿಂದ 6.11.25 ರವರೆಗೆ ನೀಡಲಾಗಿದೆ.
ಈ ಪ್ರಯೋಗ ಭಾರತದಲ್ಲಿ ಮೊದಲ ಡಿಜಿಟಲ್ ಜನಗಣತಿ ನಡೆಸುವಲ್ಲಿ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ಇದಾಗಿದ್ದು, ಸೀಮಿತ ನೆಟ್ವರ್ಕ್ ಇರುವ ಸ್ಥಳಗಳಲ್ಲಿ ಡಿಜಿಟಲ್ ಆ್ಯಪ್ ಕಾರ್ಯನಿರ್ವಹಣೆ,ದಕ್ಷತೆ ಅರಿಯುವುದು ಈ ಪ್ರಾಯೋಗಿಕ ಪರೀಕ್ಷೆಯ ಉದ್ದೇಶವಾಗಿದೆ.ಈ ಪೂರ್ವ ಪರೀಕ್ಷೆ ವೇಳೆ ಸಂಗ್ರಹಿಸಲಾದ ಮಾಹಿತಿಯು ಸಂಪೂರ್ಣ ವ್ಯವಸ್ಥೆಯ ಮೌಲ್ಯಮಾಪನ ಉದ್ದೇಶಕ್ಕಷ್ಟೇ ಇರುತ್ತದೆ. ಅಧಿಕೃತ ಜನಗಣತಿ ಮಾಹಿತಿ ಸಂಗ್ರಹ ಭಾಗವಾಗಿರುವುದಿಲ್ಲ ಹಾಗೂ ಸಾರ್ವಜನಿಕ ಭಾಗವಹಿಸುವಿಕೆ ಉತ್ತೇಜಿಸಲು ಈ ಕ್ರಮ ಆಗಿರಲಿದೆ. ಎಂದು ತಹಸೀಲ್ದಾರ್ ಮಂಜುನಾಥ್ ಮುನ್ನೊಳ್ಳಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



