ಚಿಮನಳ್ಳಿಯ ವೆಂಕಟ್ರಮಣ ಅನಂತ ಭಟ್ಟ ತೋಟ್ಮನೆ ನಿಧನ

ಆಪ್ತ ನ್ಯೂಸ್ ಯಲ್ಲಾಪುರ:
ತಾಲೂಕಿನ ಚಿಮನಳ್ಳಿಯ ವೆಂಕಟ್ರಮಣ ಅನಂತ ಭಟ್ಟ ತೋಟ್ಮನೆ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಅವರು ಸಾಹಿತಿ ಕೇಶವ ಭಟ್ಟ ಬೆಂಗಳೂರು, ಉದ್ಯಮಿ ಶಂಕರ ಭಟ್ಟ ಸೇರಿದಂತೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಅವರು ಪಂಚಾಯತ ಸದಸ್ಯರಾಗಿ, ಯಕ್ಷಗಾನ ಕಲಾ ಸಂಘಟಕರಾಗಿ, ಕಲಾವಿದರಾಗಿ, ವಿವಿಧ ದೇವಸ್ಥಾನಗಳ ಮೊಕ್ತೆಸರರಾಗಿ ಕಾರ್ಯನಿರ್ವಹಿಸಿದ್ದರು.
ಇವರ ರಚನೆಯ ಭಜನಾವಳಿ ಪ್ರಕಟಗೊಂಡಿವೆ. ಸುಧಾಮ ಚರಿತ, ಶಬರಿ ರಾಮಾಯಣ, ಭೀಷ್ಮ ಪ್ರಪಂಚ ಎಂಬ ಪ್ರಸಂಗ ರಚಿಸಿದ್ದಾರೆ. ಚಿಮನಳ್ಳಿ ಚರಿತ್ರೆ, ಗ್ರಹಪ್ರವೇಶ ಕಾದಂಬರಿ ರಚಿಸಿದ್ದರು.
What's Your Reaction?






