ಜೋಯಿಡಾ ತಾಲೂಕಿನಾದ್ಯಂತ ಗೋ ಪೂಜೆಯ ಸಂಭ್ರಮ

Oct 22, 2025 - 19:35
 0  28
ಜೋಯಿಡಾ ತಾಲೂಕಿನಾದ್ಯಂತ ಗೋ ಪೂಜೆಯ ಸಂಭ್ರಮ

ಆಪ್ತ ನ್ಯೂಸ್ ಜೋಯಿಡಾ:
ತಾಲೂಕಿನ ರಾಮನಗರ ಹಾಗೂ ಜೋಯಿಡಾ ಜಿಲ್ಲಾ ಪಂಚಾಯತ ವ್ಯಾಪ್ತಿಯ ಪಂಚಾಯತದ ಎಲ್ಲಾ ಗ್ರಾಮಗಳಲ್ಲಿ ಗೋ ಪೂಜೆಯ, ಬಲಿ ಪೂಜೆಯ, ದೀಪಾವಳಿ ಪಾಡ್ಯದ ಸಂಭ್ರಮ ಎಲ್ಲಡೇ ಕಂಡು ಬಂದಿತು.
ಕೊಟ್ಟಿಗೆಯಲ್ಲಿ ದನಕರುಗಳನ್ನು ಬಗೆಬಗೆಯ ಹೂವುಗಳಿಂದ, ವಿಶೇಷವಾಗಿ ಗೊಂಡೆ ಹೂವುಗಳ ಶೃಂಗಾರ, ರಂಗೋಲಿಯ ಅಲಂಕಾರ, ಹೊಸ ಹಗ್ಗ, ಪೂಜೆಯ ಸಾಮಗ್ರಿಯೊಂದಿಗೆ ಶುಭ ಮುಹೂರ್ತದಲ್ಲಿ ಪೂಜೆಯೊಂದಿಗೆ, ಆರತಿಯನ್ನು ಎತ್ತಿ ಎಲ್ಲರಿಗೂ ಶುಭವಾಗಲಿ ಎಂದು ಪರಮ ಪೂಜನೀಯ ಗೋ ಮಾತೆಯಲ್ಲಿ ಬೇಡಿಕೊಂಡರು.
ಜೊತೆಗೆ ಅವಲಕ್ಕಿ,ತೆಂಗಿನಕಾಯಿ,ಇನ್ನಿತರ ತಿಂಡಿಗಳನ್ನು ಕೊರಳಲ್ಲಿ ಕಟ್ಟಿ ದನಕರುಗಳನ್ನು ಬಿಡುವುದು, ನಂತರ ಸಂಜೆಯ ವೇಳೆ ಕೊಟ್ಟಿಗೆಗೆ ಬಂದ ದನಕರುಗಳನ್ನು ಆರತಿ ಎತ್ತಿ ಕೊಟ್ಟಿಗೆಯ ಒಳಗೆ ಕರೆದುಕೊಂಡು ಹಬ್ಬದ ನಿಮಿತ್ತ ಮಾಡಿದ ವಿಶೇಷ ಭೋಜನವನ್ನು ನೀಡುವುದು ಸಂಪ್ರದಾಯ.
ಗಾಂಗೋಡಾ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಸುಬ್ರಾಯ ಹೆಗಡೆ ತಮ್ಮ ಮನೆಯ ಕೊಟ್ಟಿಗೆಯಲ್ಲಿ ಗೋವನ್ನು ಶೃಂಗರಿಸಿ ತಮ್ಮ ಕುಟುಂಬದ ಸದಸ್ಯರ ಜೊತೆ ಪೂಜೆಯನ್ನು ಮಾಡಿದ ಚಿತ್ರ.

**********

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0