ಸಿಪಿಐ ಮಂಜುನಾಥರವರಿಗೆ ಡಿವೈಎಸ್ಪಿ ಹುದ್ದೆಗೆ ಬಡ್ತಿ

ಆಪ್ತ ನ್ಯೂಸ್ ಶಿರಸಿ:
ಶಿರಸಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ರವರಿಗೆ ಸರಕಾರ DySP ಹುದ್ದೆಗೆ ಪದೋನ್ನತಿ ನೀಡಿ ಆದೇಶಿಸಿದೆ.
ಸದ್ಯ ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಅತ್ಯಂತ ದಕ್ಷ -ಶಿಸ್ತಿನ ಅಧಿಕಾರಿಯಾಗಿದ್ದಾರೆ. ಅವರ ಕಾರ್ಯದಕ್ಷತೆ ಅರಿತ ಸರಕಾರ ಮಂಜುನಾಥ್ ರವರನ್ನು ಧರ್ಮಸ್ಥಳ ಪ್ರಕರಣ ವಿಚಾರಣೆಗೆ ರಚಿಸಿದ ಎಸ್ಐಟಿ ತಂಡದಲ್ಲಿ ಅವರನ್ನು ಸೇರ್ಪಡೆ ಮಾಡಿತ್ತು.
ಎಸ್ಐಟಿ ತಂಡದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಮಂಜುನಾಥ್ ರವರು ಅಲ್ಲೂ ಕೂಡ ಪ್ರಮುಖ ತನಿಖಾ ಅಧಿಕಾರಿಯಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವಿವಾದಗಳನ್ನು ಮೆಟ್ಟಿ ನಿಲ್ಲುವ ಮಂಜುನಾಥರ ಕಾರ್ಯದಕ್ಷತೆಯ ನ್ನು ಗುರುತಿಸಿ ಸರಕಾರ ಹಾಗೂ ಪೊಲೀಸ್ ಇಲಾಖೆ ಅವರಿಗೆ ಡಿವೈಎಸ್ಪಿ ಹುದ್ದೆಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ.
What's Your Reaction?






