ಡಿಸೆಂಬರ್ 6: ‘ನಮ್ಮನೆ ಹಬ್ಬ’ ಸಂಭ್ರಮ

“ನಮ್ಮನೆ ಹಬ್ಬಕ್ಕೆ ಈ ಬಾರಿ 14ರ ಸಂಭ್ರಮ. ಎಲ್ಲರೂ ಒಂದೇ ಮನೆಯವರಂತೆ ಸಾಂಸ್ಕೃತಿಕ ದಿಬ್ಬಣದಲ್ಲಿ ಸೇರಿ ಸಂಭ್ರಮಿಸುವುದೇ ನಮ್ಮ ಆಶಯ. ಬಂದ ಎಲ್ಲರಿಗೂ ಇದು ‘ನಮ್ಮನೆ ಹಬ್ಬ’ — ಮನಸ್ಸು ಕಟ್ಟುವ ಹಬ್ಬ.” - ಕವಯತ್ರಿ ಗಾಯತ್ರೀ ರಾಘವೇಂದ್ರ

Nov 14, 2025 - 15:28
 0  47
ಡಿಸೆಂಬರ್ 6: ‘ನಮ್ಮನೆ ಹಬ್ಬ’ ಸಂಭ್ರಮ

🎉 14ನೇ ವರ್ಷದ ‘ನಮ್ಮನೆ ಹಬ್ಬ’ – ವಿಶೇಷತೆಗಳು

  • ⏱️ ಸಮಯಪಾಲನೆಗೆ ಆದ್ಯತೆ ಪಡೆದ ಹಬ್ಬ

  • 🎶 ಶ್ರೀ ಶ್ರೀಧರರ ಭಜನಾಮೃತ ಗಾಯನ

  • 🎭 ತುಳಸಿ ಹೆಗಡೆ ಪ್ರಸ್ತುತಿಯ ನೂತನ ರೂಪಕ ‘ವಂದೇ ಗೋವಿಂದಮ್’ ಲೋಕಾರ್ಪಣೆ

  • 🎬 ದೊಡ್ಡಣ್ಣ – ಬಿ. ಜಯಶ್ರೀ ಅಭಿನಯ ಲೋಕದ ಅತಿಥಿಗಳು

  • 🏡 ಹಳ್ಳಿ ಮನೆ ಅಂಗಳದಂತೆ ಎಲ್ಲರಿಗೂ ಸೇರುವ ಸಾಂಸ್ಕೃತಿಕ ಮಿಲನ

  • 🌾 ನೆಲಮೂಲದ ಸಂಸ್ಕೃತಿ ಪ್ರತಿಬಿಂಬಿಸುವ ದಿಬ್ಬಣ

****

ಚಿತ್ರನಟ ದೊಡ್ಡಣ್ಣ ಚಾಲನೆ; ‘ವಂದೇ ಗೋವಿಂದಮ್’ ಯಕ್ಷ ರೂಪಕ ಲೋಕಾರ್ಪಣೆ

****

ಆಪ್ತ ನ್ಯೂಸ್ ಶಿರಸಿ:

ರಾಜ್ಯದ ವಿಶಿಷ್ಟತೆಯನ್ನು ತೋರುವ ನಮ್ಮನೆ ಹಬ್ಬ ಈ ಬಾರಿ ಡಿಸೆಂಬರ್ 6, ಶನಿವಾರ ಸಂಜೆ 5 ಗಂಟೆಯಿಂದ, ತಾಲೂಕಿನ ಬೆಟ್ಟಕೊಪ್ಪದ ನಮ್ಮನೆ ವೇದಿಕೆಯಲ್ಲಿ ಭವ್ಯವಾಗಿ ನೆರವೇರಲಿದೆ. ವಿಶ್ವಶಾಂತಿ ಸೇವಾ ಟ್ರಸ್ಟ್ ಆಯೋಜಿಸಿರುವ ಈ ಹಬ್ಬದಲ್ಲಿ ಸಾಂಸ್ಕೃತಿಕ ವೈವಿಧ್ಯ, ಯಕ್ಷಗಾನ ನೃತ್ಯ ರೂಪಕ, ಭಜನಾಂಜಲಿ, ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಜರುಗಲಿವೆ.

ಭಜನಾಮೃತ

ಸಂಜೆ 5 ಗಂಟೆಗೆ ಶ್ರೀ ಶ್ರೀಧರರ ‘ಭಜನಾಮೃತ’ ಕಾರ್ಯಕ್ರಮದಿಂದ ಸಂಭ್ರಮಕ್ಕೆ ಚಾಲನೆ ಸಿಗಲಿದೆ. ಪ್ರಸಿದ್ಧ ಗಾಯಕ ವಿಶ್ವೇಶ್ವರ ಖರ್ವಾ ಭಜನೆ ಸಲ್ಲಿಸಲಿದ್ದು,
ಗುರುರಾಜ ಆಡುಕಳ (ತಬಲಾ) ಮತ್ತು ಅಜಯ್ ವರ್ಗಾಸ್ (ಹಾರ್ಮೋನಿಯಂ) ಸಂಗೀತ ಸಹಕಾರ ನೀಡಲಿದ್ದಾರೆ.

‘ವಂದೇ ಗೋವಿಂದಮ್’ — ನೂತನ ಯಕ್ಷ ರೂಪಕ ಲೋಕಾರ್ಪಣೆ

ಸಂಜೆ 6.05ಕ್ಕೆ ಗೋವುಗಳ ಮಹತ್ವ ಸಾರುವ ಕಥಾಭಾಗ ಒಳಗೊಂಡ, ವಿಶ್ವಶಾಂತಿ ಸರಣಿಯ 11ನೇ ನೂತನ ಯಕ್ಷ ನೃತ್ಯ ರೂಪಕ ‘ವಂದೇ ಗೋವಿಂದಮ್’ ಮೊದಲ ಪ್ರದರ್ಶನದ ಮೂಲಕ ಲೋಕಾರ್ಪಣೆಯಾಗಲಿದೆ.

ಈ ರೂಪಕಕ್ಕೆ—

  • ಕಥೆ: ಪಾರ್ಥಿಸುಬ್ಬ ಪ್ರಶಸ್ತಿ ಪುರಸ್ಕೃತ ಕಬ್ಬಿನಾಲೆ ವಸಂತ ಭಾರಧ್ವಾಜ

  • ಪ್ರಸ್ತುತಿ: ದಾಖಲೆ ಸಾಧನೆಗೈದ ಯುವ ಯಕ್ಷಗಾನ ಕಲಾವಿದೆ ಕು. ತುಳಸಿ ಹೆಗಡೆ

  • ಮೂಲ ಕಲ್ಪನೆ: ಚಿಂತಕ ರಮೇಶ್ ಹೆಗಡೆ ಹಳೆಕಾನಗೋಡು

  • ನೃತ್ಯ ನಿರ್ದೇಶನ: ಹಿರಿಯ ಕಲಾವಿದ ವಿನಾಯಕ ಹೆಗಡೆ ಕಲಗದ್ದೆ

  • ಗದ್ಯ ಸಾಹಿತ್ಯ: ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ

  • ಹಿನ್ನೆಲೆ ಧ್ವನಿ: ಡಾ. ಶ್ರೀಪಾದ ಭಟ್

  • ತಾಳಾಭ್ಯಾಸ: ಜಿ.ಎಸ್. ಭಟ್

  • ಧ್ವನಿ ಗ್ರಹಣ: ಉದಯ ಪೂರಾರಿ

ರಂಗಭೂಮಿಯಲ್ಲಿ—

  • ಭಾಗವತ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೊಳಗಿ ಕೇಶವ ಹೆಗಡೆ

  • ಮದ್ದಲೆ: ಶಂಕರ ಭಾಗವತ (ಯಲ್ಲಾಪುರ)

  • ಚಂಡೆ: ವಿಘ್ನೇಶ್ವರ ಗೌಡ (ಕೆಸರಕೊಪ್ಪ)

  • ಪ್ರಸಾಧನ: ವೆಂಕಟೇಶ ಬೊಗ್ರಿಮಕ್ಕಿ

ಪ್ರಶಸ್ತಿ ಪ್ರದಾನ – ಸನ್ಮಾನ ಸಂಭ್ರಮ

ಸಂಜೆ 7.25ಕ್ಕೆ ನಮ್ಮನೆ ಹಬ್ಬದ ಅಧಿಕೃತ ಉದ್ಘಾಟನೆ, ದಿನದರ್ಶಿಕೆ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರಸಿದ್ಧ ಚಿತ್ರ ನಟ ಎಸ್. ದೊಡ್ಡಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸನ್ಮಾನಗಳು ಮಾಡಲಿದ್ದಾರೆ.

ಈ ವರ್ಷ ನೀಡಲಿರುವ ಪ್ರಶಸ್ತಿಗಳು—

  • ನಮ್ಮನೆ ಪ್ರಶಸ್ತಿ: ಹಿರಿಯ ರಂಗಕಲಾವಿದೆ ಬಿ. ಜಯಶ್ರೀ

  • ನಮ್ಮನೆ ಪ್ರಶಸ್ತಿ: ವೈದ್ಯಕೀಯ–ರಾಸಾಯನಿಕ ಸಂಶೋಧನೆಯಲ್ಲಿ ವಿಶಿಷ್ಟ ಕೊಡುಗೆ ನೀಡಿದ ರಾಮನಂದ ಹೆಗಡೆ

  • ನಮ್ಮನೆ ಕಿಶೋರ್ ಪುರಸ್ಕಾರ: ಯುವ ಪ್ರತಿಭೆ ತೆಜಸ್ವಿ ಗಾಂವಕರ

ಕಾರ್ಯಕ್ರಮಕ್ಕೆ ಟ್ರಸ್ಟ್ ಅಧ್ಯಕ್ಷ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾರ್ಯದರ್ಶಿ, ಕವಯಿತ್ರಿ ಗಾಯತ್ರೀ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0