ಮುತ್ತಿನಕೆರೆ ವೆಂಕಟರಮಣ ದೇವರಿಗೆ ದೀಪೋತ್ಸವ ಸೇವೆ
ಆಪ್ತ ನ್ಯೂಸ್ ಸೋಂದಾ:
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಸುಧಾಪುರ ಕ್ಷೇತ್ರದ ಪುರಾತನ ದೇಗುಲ ಮುತ್ತಿನಕೆರೆ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಚತುರ್ದಶಿ ನಿಮಿತ್ತ ಭಕ್ತಾದಿಗಳಿಂದ ವಿಶೇಷ ಪೂಜಾ ಕೈಂಕರ್ಯ ನಡೆಸಲಾಯಿತು.
ನ. ೪ರ ಮಂಗಳವಾರ ಮುಂಜಾನೆ ೯ ಘಂಟೆಯಿಂದ ದೇವರಿಗೆ ೧೦೮ ಅಷ್ಟೋತ್ತರ ನಾಮ, ಶ್ರೀಸೂಕ್ತ, ಪುರುಷ ಸೂಕ್ತ, ಫಲ-ಪಂಚಾಮೃತಾಭಿಷೇಕ, ಕುಂಕುಮಾರ್ಚನೆಯೊAದಿಗೆ, ಭಕ್ತರಿಂದ ಸಂಕಲ್ಪ ಪೂಜೆ ಮಾಡಿಸಿ ಪೂರ್ವಾಹ್ನ ೧೨ ಘಂಟೆಗೆ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿತರಣಾ ಮಾಡಿದ್ದು. ಸಂಜೆ ೬-೩೦ ರಿಂದಾ ವಾಜಗದ್ದೆ ಭಗಿನೀಯರು ಮತ್ತು ಮಾತೃ ಮಂಡಳಿ ಸೋಂದಾ ಕಸಬಾ ಇವರಿಂದ ಭಜನೆ- ಶ್ರೀಮದ್ ಭಗವದ್ಗೀತಾ ಪಠಣ ಮಾಡಿ ದೇವರಿಗೆ ದೀಪೋತ್ಸವದೊಂದಿಗೆ ಮಹಾ ಮಂಗಳಾರತಿಯನ್ನು ಭಕ್ತಾದಿಗಳ ಸುಮ್ಮುಖದಲ್ಲಿ ನೆರವೇರಿಸಲಾಯಿತು.
ಇಂದಿನ ಧಾರ್ಮಿಕ ಕಾರ್ಯಕ್ರಮದ ಯಜಮಾನಿಕೆಯನ್ನು ವಾಜಗದ್ದೆ ಅಶೋಕ ಹೆಗಡೆ ದಂಪತಿಗಳು ವಹಿಸಿದ್ದು ಧಾರ್ಮಿಕ ವಿಧಿ-ವಿಧಾನಗಳನ್ನು ನಿತ್ಯ ಪೂಜಾ ಗೌರವ ಅರ್ಚಕ ಪ್ರಸನ್ನ ಹೆಗಡೆ ಹಾಗೂ ರಾಮಚಂದ್ರ ಶಾಸ್ತಿçಗಳು ಕೋಣೆಸರ ಇವರು ನೆರವೇರಿಸಿದರು. ಗೌರವ ಅರ್ಚಕರಾದ ಶಿವರಾಮ ಹೆಗಡೆ, ಗಣಪತಿ ಹೆಗಡೆ, ರಾಘವ ಹೆಗಡೆ ವಾಜಗದ್ದೆ ಮತ್ತು ಜಾಗೃತ ವೇದಿಕೆಯ ಸದಸ್ಯರು ಊರ ನಾಗರೀಕರು-ಭಕ್ತಾದಿಗಳ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
1
Wow
1



