ನಾಳೆ ಶಿರಸಿಯಲ್ಲಿ ಎದೆ ತುಂಬಿ ಹಾಡುವೆನು ಸೀಜನ್ -3

Oct 25, 2025 - 08:30
 0  38
ನಾಳೆ ಶಿರಸಿಯಲ್ಲಿ ಎದೆ ತುಂಬಿ ಹಾಡುವೆನು ಸೀಜನ್ -3

ಆಪ್ತ ನ್ಯೂಸ್ ಶಿರಸಿ:

ಅಕ್ಟೋಬರ್ ೨೬ ಭಾನುವಾರದಂದು ಶಿರಸಿಯ ಟಿ.ಆರ್.ಸಿ. ಸಭಾಭವನದಲ್ಲಿ ಚಲನಚಿತ್ರ ಸಂಗೀತಾಸಕ್ತರಿಗೆ ಒಂದು ಸುಂದರ ಸುಮಧುರ ಕಾರ್ಯಕ್ರಮವನ್ನು ನೋಡುವ ಹಾಗೂ ಕೇಳುವ ಸದಾವಕಾಶವನ್ನು ಜನನಿ ಸಂಸ್ಥೆಯು ಕಲ್ಪಿಸಿಕೊಡಲಿದೆ.
ರೇಖಾ ದಿನೇಶ ಹಾಗೂ ಹಾಡುವ ಗೂಡಿನ ಗಣೇಶ ಕೂರ್ಸೆ ಇವರ ಸಹಕಾರದೊಂದಿಗೆ ನಡೆಯುತ್ತಿರುವ  ಈ ಕಾರ್ಯಕ್ರಮವು ಭಾನುವಾರ ಬೆಳಿಗ್ಗೆ ೧೦ ಘಂಟೆಯಿಂದ ಸಂಸ್ಥೆಯು ಹಿರಿಯ, ಕಿರಿಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ, ನಾಡಗೀತೆ, ಕನ್ನಡ ಹಾಗೂ ಹಿಂದಿ ಚಲನಚಿತ್ರಗಳನ್ನು ಹಾಡಲಿದ್ದಾರೆ.  ಬೆಳಗಿನ ಅವಧಿಯಲ್ಲಿ ಪುಟ್ಟ ಮಕ್ಕಳು ಮಧ್ಯಾಹ್ನ ೩ ಘಂಟೆಯ ನಂತರ ಕರೋಕೆ ಕಲಾವಿಧರುಗಳು ಚಿತ್ರಗೀತೆಗಳನ್ನು ಹಾಡಲಿದ್ದಾರೆ. 
ಕಾರ್ಯಕ್ರಮದ ಅಂಗವಾಗಿ ಅಮೃತಾ ಪೈ ಇವರ ನೃತ್ಯ ಕೂಡಾ ನಡೆಯಲಿದೆ. ಸಂಜೆ ೭ ಘಂಟೆಗೆ ದೀಪ ಪ್ರಜ್ವಲನೆಯನ್ನು ಖ್ಯಾತ ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಹಾಗೂ ಜನಪ್ರಿಯ ಚಲನಚಿತ್ರ  ತಾರೆ ಪದ್ಮಾವಾಸಂತಿ  ದೀಪ ಬೆಳಗಿಸಿ ಶುಭ ಕೋರಲಿದ್ದಾರೆ.
ಕಾರ್ಯಕ್ರಮ ನಿರೂಪಣೆಯನ್ನು ಪ್ರಿಯಾಂಕಾ ಪರಮಾನಂದ ಹೆಗಡೆ, ಪ್ರವೀಣ ಕಾಮತ್, ಸುಮನಾ ಹೆಗಡೆ, ರೇಖಾ ಭಟ್, ಸಂತೋಷ ಶೇಟ ಇವರುಗಳು ನಡೆಸಿಕೊಡಲಿದ್ದಾರೆ ಎಂದು ಜನನಿ ಸಂಸ್ಥೆಯ ದಿನೇಶ ಹೆಗಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಈ ಕಾರ್ಯಕ್ರಮಕ್ಕೆ ಆಸಕ್ತರು, ಸ್ತೋತ್ರುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಲು ಕೋರಲಾಗಿದೆ. 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0