ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ : ಜಿಲ್ಲಾದ್ಯಂತ ಅರ್ಜಿ ಸಲ್ಲಿಸಿದ ಕ್ಷೇತ್ರಕ್ಕೆ ವಿಚಾರಣೆ ಸ್ಥಗಿತ
ಆಪ್ತ ನ್ಯೂಸ್ ಹೊನ್ನಾವರ:
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಸಂಬಂಧಿಸಿ ಅರಣ್ಯ ಇಲಾಖೆಯ ಪ್ರಾಧಿಕಾರದಿಂದ ಜರುಗುತ್ತಿರುವ ವಿಚಾರಣೆ ಪ್ರಕ್ರಿಯೆ ಅರಣ್ಯವಾಸಿಯ ಅರ್ಜಿ ಸಲ್ಲಿಸಿದ ಕ್ಷೇತ್ರಕ್ಕೆ ಸ್ಥಗಿತಗೊಳಿಸುವ ಕಾರ್ಯ ಜರುಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಹರ್ಷ ವ್ಯಕ್ತಪಡಿಸಿದೆ.
ಜಿಲ್ಲಾ ಸಂಚಾಲಕ ಮಹೇಶ ನಾಯ್ಕ ಕಾನಳ್ಳಿ ಮತ್ತು ರಾಮ ಮರಾಠಿ ಯಲಕೊಟಗಿ ನೇತೃತ್ವದಲ್ಲಿ ಹೋರಾಟಗಾರರ ನಿಯೋಗವು ಸ್ಥಳೀಯ ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಅವರನ್ನು ಅವರ ಕಛೇರಿಯಲ್ಲಿ ಬೇಟಿ ಆದ ನಂತರ ಅವರು ಮೇಲಿನಂತೆ ಹೇಳಿದರು.
ಹೋರಾಟಗಾರರ ವೇದಿಕೆಯು ನ.೧೧ ರಂದು ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ ಹಿರೇಲಾಲ ಅವರೊಂದಿಗೆ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರೊಂದಿಗೆ ಸಮಾಲೋಚನಾ ಸಭೆ ಜರುಗಿದ ನಂತರ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಮೇಲೆ ಒಕ್ಕಲೆಬ್ಬಿಸುವ ಪ್ರಕ್ರಿಯೆ ಸ್ಥಗಿತಗೊಳಿಸುವುದಾಗಿ ಜಿಲ್ಲೆಯ ಹಿರಿಯ ಅಧಿಕಾರಿ ಸಮಕ್ಷಮದಲ್ಲಿ ಘೋಷಣೆ ಮಾಡಲಾಗಿತ್ತು. ಅದರಂತೆ, ಇಂದು ಹೊನ್ನಾವರ ಮತ್ತು ಜಿಲ್ಲೆಯ ಎಲ್ಲಾ ವಿಚಾರಣಾ ಪ್ರಾಧಿಕಾರದ ಮಾಹಿತಿ ಪಡೆಯಲಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂದೇಶದ ಅಡಿಯಲ್ಲಿ ಸರ್ಕಾರದ ಮುಂದಿನ ಆದೇಶದವರೆಗೂ ವಿಚಾರಣಾ ಪ್ರಾಧಿಕಾರದ ವಿಚಾರಣೆಯನ್ನ ಸ್ದಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿಯೋಗದಲ್ಲಿ ವಿನೋದ ನಾಯ್ಕ ಯಲಕೊಟಗಿ. ಸುರೇಶ ನಾಯ್ಕ ನಗರಬಸ್ತೀಕೇರಿ, ಸಂಕೇತ (ಬೆಂಕಿ) ನಾಯ್ಕ, ಅನಿತಾ ಲೋಫೀಸ್ ಮುಗ್ವಾ, ಜನಾರ್ದನ್ ಚಂದಾವರ, ಗಣೇಶ ನಾಯ್ಕ ಚಂದಾವರ, ಹೇಮಲತಾ ನಾಯ್ಕ ಅರೆಅಂಗಡಿ, ಕಾರ್ತಿಕ್ ನಾಯ್ಕ ಉಪ್ಪಾಣಿ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.
ಗೇರಸೊಪ್ಪ ವಲಯ ಅರಣ್ಯಾಧಿಕಾರಿ ಕಾರ್ತಿಕ ಉಪಸ್ಥಿತರಿದ್ದರು.
ಆತಂಕಕ್ಕೆ ಅವಕಾಶವಿಲ್ಲ:
ಈ ಹಿನ್ನಲೆಯಲ್ಲಿ ಜಿಲ್ಲಾದ್ಯಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ಮಂಜೂರಿ ಪ್ರಕ್ರಿಯೆಯು ಮುಗಿವುವರೆಗೂ ಅರಣ್ಯವಾಸಿಗಳು ಒಕ್ಕಲೆಬ್ಬಿಸುವ ಆತಂಕವಿಲ್ಲದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಭಿನಂದನೆಗಳು:
ಕಾನೂನುಬಾಹಿರವಾಗಿ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಸ್ಪಂದಿಸಿದ ಸಿಸಿಎಫ್ ಹಿರೇಲಾಲ, ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಮ್ ಎನ್, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಗದೀಶ್ ನಾಯ್ಕ, ಶಿರಸಿ ಉಪ ವಿಭಾಗ ಅಧಿಕಾರಿ ಕು.ಕಾವ್ಯಾರಾಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋದೀಪ್ ಸೂರ್ಯವಂಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಇವರಿಗೆ ತುರ್ತು ಪರಿಹಾರ ಒದಗಿಸುವುದಕ್ಕೆ ಹೋರಾಟಗಾರರ ವೇದಿಕೆಯು ಅಭಿನಂದನೆ ಸಲ್ಲಿಸಿದೆ ಎಂದು ಸಂಚಾಲಯಕರಾದ ಮಹೇಶ ನಾಯ್ಕ, ರಾಮ ಮರಾಠಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



