ಕಳೆದ ಆರು ವರ್ಷದಿಂದ ಮಂಜೂರಿ ಪ್ರಕ್ರಿಯೆ ತಟಸ್ಥ: ಅರಣ್ಯ ಹಕ್ಕು ಕಾಯಿದೆಗೆ ಗ್ರಹಣ  - ರವೀಂದ್ರ ನಾಯ್ಕ

Nov 6, 2025 - 17:03
 0  56
ಕಳೆದ ಆರು ವರ್ಷದಿಂದ ಮಂಜೂರಿ ಪ್ರಕ್ರಿಯೆ ತಟಸ್ಥ: ಅರಣ್ಯ ಹಕ್ಕು ಕಾಯಿದೆಗೆ ಗ್ರಹಣ  - ರವೀಂದ್ರ ನಾಯ್ಕ

ಆಪ್ತ ನ್ಯೂಸ್ ಹೊನ್ನಾವರ:

ರಾಷ್ಟ್ರದಲ್ಲಿ ಅರಣ್ಯವಾಸಿಗಳಿಗೆ ಕಾನೂನಾತ್ಮಕ ಸಾಗುವಳಿ ಹಕ್ಕು  ನೀಡುವ ಉದ್ದೇಶದಿಂದ ಜಾರಿಗೆ ಬಂದಿರುವ ಅರಣ್ಯ ಹಕ್ಕು ಕಾಯಿದೆಗೆ ಕಳೆದ ಆರು ವರ್ಷಗಳಿಂದ  ತಾಂತ್ರೀಕ ದೋಷದಿಂದ ತಟಸ್ಥವಾಗಿದ್ದು, ಕಾಯಿದೆ ಜಾರಿಗೆ ಬಂದು ೧೭ ವರ್ಷದಿಂದ ಪ್ರಗತಿಯಲ್ಲಿ ಗ್ರಹಣ ಹಿಡಿದಂತಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಹೊನ್ನಾವರ ತಾಲೂಕಿನ ನಾಮಧಾರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಮಟ್ಟದ ಗ್ರೀನ್ ಕಾರ್ಡ ಪ್ರಮುಖರ ಕಾನೂನಾತ್ಮಕ ತರಭೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಹೇಳಿದರು.
ಸಾಮಾಜಿಕ ನ್ಯಾಯ ಮತ್ತು ಆಹಾರ ಧಾನ್ಯ ಉತ್ಪತ್ತಿ ಉದ್ದೇಶದಿಂದ ಕಾನೂನು ಮತ್ತು ನಿಯಮಾವಳಿ ಜಾರಿಗೆ ಬಂದು ಹದಿನೇಳು ವರ್ಷಗಳಾದವು. ಆದರೆ, ಕಾನೂನಾತ್ಮಕ ಸಮಸ್ಯೆ ಜಾರಿಯಲ್ಲಿ ಪರಿಪೂರ್ಣ ಕಾನೂನು ಕೊರತೆ ಮೂರು ತಲೆಮಾರಿನ ದಾಖಲೆಗಳಿಗೆ ಆಗ್ರಹ ಕಳೆದ ಆರು ವರ್ಷದಿಂದ ಉಪ ವಿಭಾಗ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿಗಳಿಗೆ ತಾಲೂಕಾ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರ ಕೊರತೆಯಿಂದ ಕಾಯಿದೆ ಅನುಷ್ಠಾನಕ್ಕೆ ಹಿನಂಡೆಯಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಶೇ.೩ ರಷ್ಟು ಅರಣ್ಯವಾಸಿಗಳ ಅರ್ಜಿಗಳಿಗೆ ಸಾಗುವಳಿ ಹಕ್ಕು ದೊರತಿದ್ದು, ಶೇ.೮೮ ರಷ್ಟು ಅರ್ಜಿಗಳು ಕಾನೂನತ್ಮಕ ತಾಂತ್ರಿಕ ದೋಷದಿಂದ ಅರ್ಜಿಗಳು ತಿರಸ್ಕಾರವಾಗಿದೆ. ಸುಪ್ರೀಂ ಕೊರ್ಟನಲ್ಲಿ ಅರಣ್ಯವಾಸಿಗಳು ಒಕ್ಕಲೆಬ್ಬಿಸುವ ಭೀತಿಯನ್ನು ಎದುರಿಸುತ್ತಿದ್ದಾರೆ. ಒಟ್ಟಾರೆಯಾಗಿ  ಅರಣ್ಯವಾಸಿಗಳಿಗೆ ಆಶ್ರಯವಾಗಬೇಕಾದ ಅರಣ್ಯ ಹಕ್ಕು ಕಾಯಿದೆಗೆ ಗ್ರಹಣ ಹಿಡಿದಂತಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಈ ಸಂಧರ್ಭದಲ್ಲಿ ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ ಸ್ವಾಗತ ಮಾಡಿದರು, ನಗರಾಧ್ಯಕ್ಷ ಸುರೇಶ ನಾಯ್ಕ ವಂದಿಸಿದರು. ರಾಮ ಮರಾಠಿ, ಸುರೇಶ ನಾಯ್ಕ ನಗರಬಸ್ತೀಕೇರಿ, ಶಾಂತಿ ಗೌಡ ಕಡ್ಲೇ, ಜನಾರ್ದನ್ ಚಂದಾವರ, ಜೋನ್ ಓಡ್ತಾ, ಹರೀಶ್ಚಂದ್ರ ಅನಂತವಾಡಿ, ಥೋಮಸ್ ಮಾಗೋಡ್, ರಜಾಕ್, ದಾವೂದ್ ಸಾಬ, ಚಂದ್ರಹಾಸ ನಾಯ್ಕ, ವಿನೋದ ಯಲಕೊಟಗಿ, ಮಾದೇವ ಮರಾಠಿ, ಅನಿತಾ ಲೋಫೀಸ್, ಗಣೇಶ ನಾಯ್ಕ ಹೊದಕೆ ಶಿರೂರು, ಸಂತಾನ್ ಪಿಂಠೋ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.


ಹದಿನೇಳು ವರ್ಷದಲ್ಲಿ ಮಂಜೂರಿ ಪ್ರಗತಿ ಕುಂಟಿತ:
      ಹಿತಾಸಕ್ತಿ ಕೊರತೆ ಅನುಷ್ಠಾನದಲ್ಲಿ ಕಾನೂನಿನ ಅಜ್ಞಾನ ಮತ್ತು ಅರಣ್ಯ ಹಕ್ಕು ಸಮಿತಿಗಳಲ್ಲಿ ಗೋಂದಲಗಳಿAದ ಕಾಯಿದೆ ಅನುಷ್ಠಾನದಲ್ಲಿ ಕುಂಟಿತವಾಗಿದೆ. ಈ ಹಿನ್ನಲೆಯಲ್ಲಿ ಅರಣ್ಯವಾಸಿಗಳಲ್ಲಿ ಜಾಗೃತೆ ಮೂಡಿಸುತ್ತಾ ಸರ್ಕಾರದ ಮೇಲೆ ಮಂಜೂರಿಗೆ ಒತ್ತಡ ಇರುವ ಕಾರ್ಯ ಕಳೆದ ಮೂರು ದಶಕಗಳಿಂದ ಹೋರಾಟಗಾರರ ವೇದಿಕೆ  ಗಂಭೀರ ಕಾರ್ಯವನ್ನ ರಾಜ್ಯದಲ್ಲಿ ಮಾಡಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0