ಮಾಜಿ ಗ್ರಾಪಂ ಅಧ್ಯಕ್ಷೆ ಗೀತಾ ಬೋವಿ ಇನ್ನಿಲ್ಲ

Nov 2, 2025 - 09:38
Nov 2, 2025 - 09:40
 0  127
ಮಾಜಿ ಗ್ರಾಪಂ ಅಧ್ಯಕ್ಷೆ ಗೀತಾ ಬೋವಿ ಇನ್ನಿಲ್ಲ

ಆಪ್ತ ನ್ಯೂಸ್ ಶಿರಸಿ:

ತಾಲೂಕಿನ ಇಟಗುಳಿ ಗ್ರಾಪಂ ಮಾಜಿ ಅದ್ಯಕ್ಷರು ಹಾಗು ಹಾಲಿ ಸದಸ್ಯರೂ ಆಗಿದ್ದ ಕು.ಗೀತಾ ಬೋವಿ ಇಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಕೆಲ ಸಮಯದಿಂದ ಅನಾರೋಗ್ಯಕ್ಕೊಳಗಾಗಿದ್ದರು.  ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದರು. ಆದರೆ ಇಂದು ಬೆಳಗಿನ ಜಾವ ಎಕಾಎಕಿ ಹೃದಯ ಸ್ಥಂಬನಗೊಂಡು ನಿಧನರಾದರು.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಅವರು ಶಾಸಕ ಭೀಮಣ್ಣ ನಾಯ್ಕರವರ ಕಟ್ಟಾ ಅಭಿಮಾನಿಯಾಗಿದ್ದ ಅವರು ತಮ್ಮ ರಾಜಕಾರಣದಿಂದಲೇ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿ ಇಟಗುಳಿ ಪಂಚಾಯತಿ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿದ್ದರು.

ಸಂತಾಪ ಗೀತಾ ಭೋವಿ ನಿಧನಕ್ಕೆ ಶಾಸಕ ಭೀಮಣ್ಣ ಟಿ ನಾಯ್ಕ ಸಂತಾಪ ವ್ಯಕ್ತಪಡಿಸಿ ಗೀತಾ ಭೋವಿ ನಿಧನದಿಂದ ಪಕ್ಷ ಒರ್ವ ನಿಷ್ಠಾವಂತ ಕಾರ್ಯಕರ್ತಳನ್ನು ಕಳೆದುಕೊಂಡು ಬಡವಾಗಿದೆ.ಅವರು ಪಕ್ಷಕ್ಕೆ ಕೊಟ್ಟ ಸೇವೆ ಮತ್ತು ಜನರಿಗೆ ಕೊಟ್ಟ ಸೇವೆ ಮಾತ್ರ ಯಾರೂ ಕೂಡಾ ಮರೆಯುವಂತದಲ್ಲ.ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲೆಂದು ತಿಳಿಸಿದ್ದಾರೆ.

ಉಷಾ ಹೆಗಡೆ ಸಂತಾಪ
ಗೀತಾ ಭೋವಿ ಅವರ ಆಕಸ್ಮಿಕ ನಿಧನವು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಸಮಾಜಮುಖಿ ಚಿಂತನೆ, ಸ್ನೇಹದ ಮನೋಭಾವ ಹೊಂದಿದವರಾಗಿದ್ದ ಅವರು ಜನಪ್ರತಿನಿಧಿಯಾಗಿ ಮಾಡಿದ ಸೇವೆ ಶ್ಲಾಘನೀಯ. ಅವರ ಅಗಲಿಕೆ ಅಪಾರ ನಷ್ಟವಾಗಿದ್ದು, ಈ ದುಃಖದ ಕ್ಷಣದಲ್ಲಿ ಅವರ ಕುಟುಂಬದವರು ನೋವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇವೆ. ಗೀತಾ ಭೋವಿ ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಶಿರಸಿ ಗ್ರಾಮೀಣ ಮಂಡಲದ ಅಧ್ಯಕ್ಷೆ ಉಷಾ ಹೆಗಡೆ ಸಂತಾಪ ಕೋರಿದ್ದಾರೆ

ಅರ್ಜುನ್ ಮಿಂಟಿ ಸಂತಾಪ
ಇಂದು ಇಟಗುಳಿ ಪಂಚಾಯತಿಯ ಮಾಜಿ ಅಧ್ಯಕ್ಷರಾಗಿದ್ದ ಗೀತಾ ಭೋವಿ ಅವರು ನಿಧನರಾಗಿರುವ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ.ಒಬ್ಬ ಗಟ್ಟಿಗಿತ್ತಿ ಮಹಿಳೆಯಾಗಿ ತಮ್ಮಲ್ಲಿರುವ ಗಟ್ಟಿತನದ ಮಾತಿನಿಂದಲೇ ಜನರಿಗೆ ಹತ್ತಿರವಾಗಿದ್ದ ಗೀತಾ ಭೋವಿ ಅವರು ಸದಾ ಸಾಮಾಜಿಕ ಕೆಲಸದಲ್ಲಿ ತೋಡಗಿ ಜನರ ಬಳಿ ಲವಲವಿಕೆಯಿಂದ ಇದ್ದವರು . ದುರಾದೃಷ್ಠವಶಾ ಅವರ ಈ ಅಕಾಲಿಕ ಮರಣದಿಂದ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ . ಅವರ ಈ ಮರಣದ ನೋವನ್ನು ಮರೆಯುವ ಶಕ್ತಿಯನ್ನು ಅವರ ಕುಟಂಬಕ್ಕೆ ಆಗಲಿ ಎಂದು ಭಗವಾನ್ ಬುದ್ದರಲ್ಲಿ ಪ್ರಾಥಿಸುತ್ತೇನೆ ಎಂದು ಭೀಮಘರ್ಜನೆ ಸಂಘಟನೆ ಜಿಲ್ಲಾದ್ಯಕ್ಷ ಅರ್ಜುನ ಮಿಂಟಿ ತಿಳಿಸಿದ್ದಾರೆ.

ಬಸವರಾಜ ದೊಡ್ಮನಿ ಸಂತಾಪ
ಆಘಾತಕಾರಿ ಘಟನೆ ಸಂಭವಿಸಿದೆ. ನಮಗೆಲ್ಲ ಸಹೋದರಿಯಂತಿದ ನಮ್ಮ ಪ್ರೀತಿಯ ಗೀತಕ್ಕನ ಅಕಾಲಿಕ ಮರಣ ಸಂಭವಿಸಿದ್ದು ನಮಗೆ ತುಂಬಲಾರದ ಅನ್ಯಾಯ ಸಂಭವಿಸಿದೆ, ದೇವರು ಎಂತಾ ಕಠೋರವಾಗಿದ್ದಾನೆ, ಊಹಿಸಲು ಸಾಧ್ಯವಿಲ್ಲ ಅವಳನ್ನು ಕಳೆದುಕೊಂಡು ಪಕ್ಷವು ಬಡವಾಗಿದೆ, ಪಕ್ಷದ ಬಗ್ಗೆ ಅವರಿಗಿದ್ದ ನಿಷ್ಠೆ, ಪ್ರಾಮಾಣಿಕತೆ, ಪ್ರಬುದ್ಧತೆ, ಮರೆಯಲು ಸಾಧ್ಯವಿಲ್ಲ, ಗೀತಕ್ಕ ಮತ್ತೊಮ್ಮೆ ಹುಟ್ಟಿ ಬಾ,ಅವರ  ಅಗಲಿಕೆಯ ನೊಂವನ್ನು ಭರಿಸುವಂತ ಶಕ್ತಿಯನ್ನು ಭಗವಂತನು  ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಉ.ಕ.ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗ ಅಧ್ಯಕ್ಷ ಬಸವರಾಜ ದೊಡ್ಮನಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0