ಮಾರುತಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನಡೆಯಿತು ನವರಾತ್ರಿ ಉತ್ಸವ

Oct 3, 2025 - 21:40
 0  65
ಮಾರುತಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನಡೆಯಿತು ನವರಾತ್ರಿ ಉತ್ಸವ

ಆಪ್ತ ನ್ಯೂಸ್ ಶಿರಸಿ:

ಶಿರಸಿಯ ಗಣೇಶನಗರದ ಮಾರುತಿ ದೇವಸ್ಥಾನದಲ್ಲಿ ಸತತ 11 ದಿನಗಳ ಕಾಲ ನವರಾತ್ರಿ ಉತ್ಸವವನ್ನು ಆಚರಿಸಲಾಯಿತು. ದಿನಾಲೂ ಸಂಜೆ 7.00 ಗಂಟೆಗೆ ಲಲಿತಾ ಸಹಸ್ರನಾಮ ಪಾರಾಯಣ ನಂತರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮಗಳನ್ನು ಮಾಡಲಾಯಿತು.
ದಿನಾಂಕ: 30-09-2025 ರಂದು ವಿಶೇಷವಾಗಿ ಸಂಜೆ 6.00 ಗಂಟೆಯಿಂದ ಸುಮಂಗಲಿಯರಿಂದ ಸಾಮೂಹಿಕ ಕುಂಕುಮಾರ್ಚನೆ ಪೂಜಾ ಕಾರ್ಯಕ್ರಮ ಅವತ್ತಿನ ದಿನದಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಬಂದು ದೇವರ ದರ್ಶನ ಪಡೆದರು. 
02-09-2025 ರಂದು ವಿಜಯದಶಮಿ ನಿಮಿತ್ತ ಸಂಜೆ 4.30 ಗಂಟೆಯಿಂದ ಗಣೇಶನಗರದ ಮುಖ್ಯ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು, ತದನಂತರ 9.00 ಗಂಟೆಗೆ ಮಹಾ ಮಂಗಳಾರತಿ, ಪ್ರಸಾದ ವಿತರಣೆಯ ಮೂಲಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲಾಯಿತು. ಈ ಕಾರ್ಯಕ್ರಮಗಳಿಗೆ ಸಹಕರಿಸಿದ ಎಲ್ಲಾ ಭಕ್ತವೃಂದಕ್ಕೆ ಆಡಳಿತ ಮಂಡಳಿಯ ಪರವಾಗಿ ಧನ್ಯವಾದಗಳನ್ನು ತಿಳಿಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0