ಪ್ರಕೃತಿ ವಿಸ್ಮಯ: ಒಂದೇ ಅಡಿಕೆಯಿಂದ ಹೊರಹೊಮ್ಮಿದ ಒಂಬತ್ತು ಸಸಿಗಳು!

Feb 25, 2026 - 11:16
 0  127
ಪ್ರಕೃತಿ ವಿಸ್ಮಯ: ಒಂದೇ ಅಡಿಕೆಯಿಂದ ಹೊರಹೊಮ್ಮಿದ ಒಂಬತ್ತು ಸಸಿಗಳು!

ಆಪ್ತ ನ್ಯೂಸ್ ಯಲ್ಲಾಪುರ:

ಪ್ರಕೃತಿಯ ಸೃಷ್ಟಿಯಲ್ಲಿ ಹತ್ತಾರು ಅಚ್ಚರಿಗಳು ಅಡಗಿರುತ್ತವೆ ಎಂಬುದಕ್ಕೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಇಲ್ಲಿನ ತೋಟವೊಂದರಲ್ಲಿ ಹಾಕಲಾಗಿದ್ದ ಕೇವಲ ಒಂದೇ ಒಂದು ಅಡಿಕೆಯಿಂದ ಬರೋಬ್ಬರಿ ಒಂಬತ್ತು ಸಸಿಗಳು ಮೊಳೆತು ಬರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಘಟನೆಯ ವಿವರ:

ಯಲ್ಲಾಪುರ ತಾಲೂಕಿನ ಉಮ್ಮಚಗಿ ಸಮೀಪದ ತಾರೆಹಳ್ಳಿಯ ನಿವಾಸಿ, ಪ್ರಗತಿಪರ ಕೃಷಿಕ ಕೃಷ್ಣಕೋಟಿ ದೇವಾಡಿಗ ಅವರ ತೋಟದಲ್ಲಿ ಈ ಅಪರೂಪದ ಪ್ರಕೃತಿ ವಿಸ್ಮಯ ಕಂಡುಬಂದಿದೆ. ಸಾಮಾನ್ಯವಾಗಿ ಒಂದು ಅಡಿಕೆ ಹಣ್ಣನ್ನು ಬಿತ್ತಿದಾಗ ಅದರಿಂದ ಒಂದು ಸಸಿ ಬರುವುದನ್ನು ನಾವು ನೋಡಿದ್ದೇವೆ. ಆದರೆ, ಕೃಷ್ಣಕೋಟಿ ಅವರು ಸಸಿ ಮಾಡಲು ಹಾಕಿದ್ದ ಒಂದು ಅಡಿಕೆಯಲ್ಲಿ ಒಂಬತ್ತು ಸಸಿಗಳು ಒಟ್ಟಾಗಿ ಚಿಗುರಿ ಹೊರಬಂದಿವೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0