ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾದ್ಯಕ್ಷರಾಗಿ ಗುರು ಅಡಿ
ಆಪ್ತ ನ್ಯೂಸ್ ಶಿರಸಿ:
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷರ ಹುದ್ದೆಯ ಚುನಾವಣೆ ಇಂದು ನಡೆಯಿತು. ಅದರ ಮತ ಎಣಿಕೆ ಕಾರ್ಯ ಕೂಡ ಮುಕ್ತಾಯವಾಗಿದ್ದು, ಹಿರಿಯ ಪತ್ರಕರ್ತ ಗುರು ಅಡಿ ಅವರು 9 ಮತಗಳ ಅಂತರದಿಂದ ಜಯಗಳಿಸುವ ಮೂಲಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾದ್ಯಕ್ಷರಾಗಿ ಆಯ್ಕೆಯಾದರು.
ಚಲಾವಣೆಗೊಂಡಿದ್ದ 112 ಮತಗಳ ಪೈಕಿ ಗುರು ಅಡಿಗೆ 59 ಹಾಗು ಪ್ರದೀಪ ಶೆಟ್ಟಿಗೆ 50 ಮತಗಳನ್ನು ಪಡೆದುಕೊಂಡರು. ಎರಡು ಮತ ಲ್ಯಾಪ್ಸ್ ಆಗಿದ್ದವು. ಹೀಗಾಗಿ ಗುರು ಅಡಿ 9 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಚುನಾವಣಾ ಅಧಿಕಾರಿಯಾಗಿ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಚುನಾವಣೆ ನಡೆಸಿಕೊಟ್ಟರು.
What's Your Reaction?
Like
0
Dislike
0
Love
0
Funny
0
Angry
1
Sad
0
Wow
0



