ಹವ್ಯಕ ಬ್ಯಾಡ್ಮಿಂಟನ್ ಲೀಗ್ 2025: ರೋರಿಂಗ್ ಲಯನ್ಸ್ ಚಾಂಪಿಯನ್

ಆಪ್ತ ನ್ಯೂಸ್ ಶಿರಸಿ:
ನಗರ ಅರಣ್ಯ ಭವನದಲ್ಲಿ ನಡೆದ ಹವ್ಯಕ ಬ್ಯಾಡ್ಮಿಂಟನ್ ಲೀಗ್ ನಲ್ಲಿ ರೋರಿಂಗ್ ಲಯನ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್ ಪಂದ್ಯದಲ್ಲಿ ರೋರಿಂಗ್ ಲಯನ್ಸ್ ತಂಡವು ಟೀಮ್ ಜಿ ತಂಡವನ್ನು ಸೋಲಿಸಿತು.
ಐದು ತಂಡಗಳ ಮೂಲಕ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಹವ್ಯಕ ಬಂಧುಗಳು ಈ ಬ್ಯಾಡ್ಮಿಂಟನ್ ಲೀಗ್ ನಲ್ಲಿ ಪಾಲ್ಗೊಂಡಿದ್ದರು. 9 ವಿಭಾಗಗಲ್ಲಿ ಸ್ಪರ್ಧೆ ನಡೆದಿತ್ತು. ಎರಡು ದಿನಗಳ ಪಂದ್ಯಾವಳಿಯಲ್ಲಿ ಅಂತಿಮವಾಗಿ ರೋರಿಂಗ್ ಲಯನ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.
ಫೈನಲ್ ಪಂದ್ಯದಲ್ಲಿ ರೋರಿಂಗ್ ಲಯನ್ಸ್ ತಂಡವು 5 - 3 ಅಂತರದಲ್ಲಿ ಜಯಭೇರಿ ಭಾರಿಸಿತು.
What's Your Reaction?






