ಜೋಯಿಡಾದಲ್ಲಿ ಕನ್ನಡ ಹಬ್ಬ ಹೇಗೆ ನಡೀತು ಗೊತ್ತಾ?
ಆಪ್ತ ನ್ಯೂಸ್ ಜೋಯಿಡಾ:
ಕನ್ನಡ ನಾಡೇ ಬಲುಚಂದ ಕನ್ನಡ ನುಡಿಯೇ ಶ್ರೀಗಂದ ಎಂದು ಕನ್ನಡ ಕಣ್ಮಣಿಗಳು ಕನ್ನಡ ನಾಡು ನುಡಿಯ ಬಗ್ಗೆ ಹರಸುವ ದಿನ ಕನ್ನಡ ರಾಜ್ಯೋತ್ಸವದ ಈ ದಿನ ತಾಲೂಕಿನಲ್ಲಿ ಸಂಭ್ರಮ ಕಂಡು ಬರುತ್ತಿದೆ
ಎಲ್ಲೆಲ್ಲೂ ಸೊಬಗಿನ ಸುಂದರತೆ ಮನೆ ಮಾಡಿದೆ ದೀಪಾಲಂಕಾರ ನೋಟ ಸರಕಾರಿ ಕಟ್ಟಡ ಗಳಿಗೆ ಸುಂದರತೆ ಹೆಚ್ಚಿಸಿದೆ ಮಳೆ ಯ ನಡುವೆಯೂ ಅಲ್ಲಲ್ಲಿ ರಂಗೋಲಿ ಸಂಭ್ರಮಕ್ಕೆ ಕಳೆ ತಂದಿದೆ.
ಈ ಸುಂದರ ದಿನ ತಾಲೂಕಿನ ಪ್ರಮುಖ ಕೇಂದ್ರ ತಾಲೂಕಾ ಸೌದದಲ್ಲಿ ತಹಶೀಲ್ದಾರ ಮಂಜುನಾಥ ಮುನ್ನೊಳ್ಳಿ, ಕಾರ್ಯನಿರ್ವಹಣಾಧಿಕಾರಿ ಎನ್ ಭಾರತಿ ಸೇರಿದಂತೆ ಎಲ್ಲ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಇಲಾಖೆಯ ಇತರ ಸಿಬ್ಬಂದಿಗಳ ಸಮ್ಮುಖದಲ್ಲಿ ನಾಡದೇವಿ ಭುವನೇಶ್ವರಿಗೆ ಗಣ್ಯರು ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿದರು.
ನಂತರ ನಾಡದೇವಿ (ಕನ್ನಡಾಂಬೆ) ಭುವನೇಶ್ವರಿ ದೇವಿಯ ಮೆರವಣಿಗೆಗೆ ತಹಸೀಲ್ದಾರ ಮಂಜುನಾಥ ಮುನ್ನೊಳ್ಳಿ ಕಾ ನಿ ಅಧಿಕಾರಿ ಎನ್ ಭಾರತಿ ಚಾಲನೆ ನೀಡಿದರು. ತಾಲೂಕಾ ಕೇಂದ್ರದ ಪ್ರಮುಖ ಬೀದಿಗಳಲ್ಲಿ ನಾಡ ದೇವಿಯ ಹಿಂದೆ ವಿವಿಧ ಇಲಾಖೆಗಳ ಸ್ತಬ್ದ ಚಿತ್ರಗಳು ಸಾಗುತ್ತಾ ನೋಡುಗರ ಕಣ್ ಮನ ಸೆಳೆದವು. ವಿವಿಧ ಶಾಲೆ ಕಾಲೇಜಿನ ವಿದ್ಯಾರ್ಥಿಗಳು ಭವ್ಯ ಮೆರವಣಿಗೆಯಲ್ಲಿ ಸಾಗಿ ಬಂದರು.
ಜೋಯಿಡಾದ ಶಿವಾಜಿ ವೃತ್ತದಲ್ಲಿ ಜೋಯಿಡಾದ ಸಮಸ್ತ ಜನರು ಸೇರಿ ಪ್ರತಿ ವರ್ಷದಂತೆ ವಿನೋದ ಮಿರಾಶಿ ಅವರಿಂದ ಭುವನೇಶ್ವರಿಗೆ ಪೂಜೆ ಸಲ್ಲಿಸಿ ನಾಡ ಉತ್ಸವದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ತಹಸೀಲ್ದಾರಕಚೇರಿಯ ಮುಖ್ಯ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.
What's Your Reaction?
Like
0
Dislike
0
Love
0
Funny
0
Angry
1
Sad
0
Wow
0



