ಜನತಾ ಬಜಾರ್ ಚುನಾವಣೆ : ಶ್ರೀಪಾದ ಹೆಗಡೆ ಕಡವೆ ಬಣಕ್ಕೆ ಭರ್ಜರಿ ಜಯ
ಶಿರಸಿಯ ಪ್ರತಿಷ್ಠಿತ ' ಜನತಾ ಬಜಾರ್ ' ಸಂಸ್ಥೆಯ ಚುನಾವಣೆಯಲ್ಲಿ ಶ್ರೀಪಾದ ಹೆಗಡೆ ಕಡವೆ ಹಾಗೂ ತಿಮ್ಮಯ್ಯ ಹೆಗಡೆ ನೇತೃತ್ವದ ಬಣ ಭರ್ಜರಿ ಬಹುಮತದೊಂದಿಗೆ ವಿಜಯ ಸಾಧಿಸಿದೆ. 15 ರಲ್ಲಿ ಕೇವಲ 2 ಸ್ಥಾನ ಗೆದ್ದು ವಿರೋಧಿ ಬಣ ಮುಖಭಂಗ ಅನುಭವಿಸಿದೆ.

ಆಪ್ತ ನ್ಯೂಸ್ ಶಿರಸಿ :
ಶಿರಸಿಯ ಪ್ರತಿಷ್ಠಿತ ' ಜನತಾ ಬಜಾರ್ ' ಸಂಸ್ಥೆಯ ಚುನಾವಣೆಯಲ್ಲಿ ಶ್ರೀಪಾದ ಹೆಗಡೆ ಕಡವೆ ಹಾಗೂ ತಿಮ್ಮಯ್ಯ ಹೆಗಡೆ ನೇತೃತ್ವದ ಬಣ ಭರ್ಜರಿ ಬಹುಮತದೊಂದಿಗೆ ವಿಜಯ ಸಾಧಿಸಿದೆ. 15 ರಲ್ಲಿ ಕೇವಲ 2 ಸ್ಥಾನ ಗೆದ್ದು ವಿರೋಧಿ ಬಣ ಮುಖಭಂಗ ಅನುಭವಿಸಿದೆ.
ಇಂದು ನಗರದ ಟಿಆರ್.ಸಿ. ಸಂಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಕಡವೆ ತಂಡದಿಂದ ಸಾಮಾನ್ಯ ಕ್ಷೇತ್ರದಿಂದ ಶ್ರೀಪಾದ ಹೆಗಡೆ ಕಡವೆ ( 75 ಮತಗಳು), ತಿಮ್ಮಯ್ಯ ಹೆಗಡೆ (70), ಮಹಾಬಲೇಶ್ವರ ಹೆಗಡೆ ಕಾಜೀನಮನೆ (67) ಹಾಗೂ ದಿವಾಕರ ಹೆಗಡೆ ಟೊಣ್ಣೆಮನೆ (64) ಮತ್ತು ಸೊಸೈಟಿ ಪ್ರತಿನಿಧಿಗಳ ಕ್ಷೇತ್ರದಿಂದ ಟಿಆರ್ಸಿ ಸೊಸೈಟಿಯ ವಿಶ್ವಾಸ ಪುಂಡಲೀಕ ಬಲ್ಸೆ ( 9), ರಾಗಿಹೊಸಳ್ಳಿ ಸೊಸೈಟಿಯ ಮಧುಕೇಶ್ವರ ಹೆಗಡೆ ರಾಗಿಸಹೊಳ್ಳಿ ( 9 ), ಬಾಳೇಸರ ಸೊಸೈಟಿಯ ಚಂದ್ರಶೇಖರ ನಾರಾಯಣ ಹೆಗಡೆ ( 9) ಮತ್ತು ವಿರೋಧಿ ಬಣದಿಂದ ಕುಳವೆ ಸೊಸೈಟಿಯ ಪ್ರಸನ್ನ ಜೋಶಿ ( 8), ಕಾನಗೋಡ ಸೊಸೈಟಿಯಿಂದ ಅನಂತ ಹೆಗಡೆ ( 8) ಗೆಲುವು ಸಾಧಿಸಿದ್ದಾರೆ.
ಇದಕ್ಕೂ ಮೊದಲು ಕಡವೆ, ತಿಮ್ಮಯ್ಯ ಹೆಗಡೆ ತಂಡದಿಂದ ಪರಿಶಿಷ್ಟ ಜಾತಿಯಿಂದ ಬಾಪೂಜಿನಗರದ ನಂದಕುಮಾರ ಜೋಗಳೇಕರ್, ಹಿಂದುಳಿದ ವರ್ಗ ಅ ಸ್ಥಾನದಿಂದ ಚಂದ್ರಶೇಖರ ಮಡಿವಾಳ ಸಂಪಖಂಡ, ಬ ವರ್ಗದಿಂದ ಧನಜಂಯ ಗೌಡ, ಮಹಿಳಾ ಮೀಸಲಾತಿಯಿಂದ ಗೀತಾ ಭಟ್ ಹೊಸ್ಕೆರೆ, ಸುಚಿತ್ರಾ ಹೆಗಡೆ ಕಡವೆ, ಪರಿಶಿಷ್ಟ ಪಂಗಡದಿಂದ ನಾರಾಯಣ ಸಿದ್ಧಿ ಅವಿರೋಧವಾಗಿ ಆಯ್ಕೆಯಾಗಿದ್ದರು.
What's Your Reaction?