ಪುಣ್ಯ ಕ್ಷೇತ್ರ ಉಳವಿಯಲ್ಲಿ ಜಯಂತೋತ್ಸವ

Oct 23, 2025 - 22:00
 0  17
ಪುಣ್ಯ ಕ್ಷೇತ್ರ ಉಳವಿಯಲ್ಲಿ ಜಯಂತೋತ್ಸವ

ಆಪ್ತ ನ್ಯೂಸ್ ಜೋಯಿಡಾ:

ಉಳವಿಯಲ್ಲಿ ಶ್ರೀ ಚನ್ನಬಸವಣ್ಣನವರ ಜಯಂತೋತ್ಸವವನ್ನು ಭಕ್ತಿ ಭಾವಗಳಿಂದ ಕಾರ್ತಿಕ ಪ್ರತಿಫದೆಯಂದು ಆಚರಿಸಲಾಯಿತು. ಮುಂಜಾನೆ ಷಟ್ ಸ್ಥಳ ದ್ವಜಾರೋಹಣ ನಡೆದ ನಂತರ ಶ್ರೀ ಮಠದಲ್ಲಿ ಶ್ರೀದೇವರ ತೊಟ್ಟಿಲು ಪೂಜೆ ಸಡಗರ ದಿಂದ ನಡೆದು ಭಕ್ತರು ತೊಟ್ಟಿಲು ತೂಗುವ ಮೂಲಕ ಸೇವೆ ನಡೆಸಿದರು. ಭಕ್ತರ ಸಮೂಹದ ನಡುವೆ ಗಣ್ಯರು ಜ್ಯೋತಿ ಬೆಳಗಿದರು ನಂತರ ಪಲ್ಲಕ್ಕಿ ಉತ್ಸವ ವಿಜೃಂಭಣೆ ಯಿಂದ ನಡೆಯಿತು.
ಚನ್ನ ಬಸವಣ್ಣನವರು ತಾಲೂಕಿನ ಉಳವಿಗೆ ತಮ್ಮ ವಚನ ಸಾಹಿತ್ಯದ ರಕ್ಷಣೆಗಾಗಿ 12ನೇ ಶತಮಾನದಲ್ಲಿ  ಬಂದರು. ಉಳವಿಯ ನಿಸರ್ಗ ಚನ್ನಬಸವಣ್ಣನವರಿಗೆ ತುಂಬಾ ಹಿಡಿಸಿತು. ತಮ್ಮ ವಚನ ಸಂರಕ್ಷಣೆಗೆ ಇದೇ ಜಾಗ ಸೂಕ್ತ ವೆಂದರಿತ ಅವರು ಇಲ್ಲಿಯೇ ಉಳಿವೆ ಎಂದರು. ಅವರ ಆ ನಿರ್ದಾರ ಇಂದು ಉಳಿವೆ ಎನ್ನುವದು ಪವಿತ್ರ ಕ್ಷೆತ್ರ ಉಳವಿ ಎಂದಾಗಿದೆ. ಉಳವಿಯಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಸೇರಿ ಅಣ್ಣ ಚನ್ನಬಸವಣ್ಣನವರ ಜಾತ್ರೆಯನ್ನು ಭಾರತ ಹುಣ್ಣಿಮೆಯ ಮಘಾ ನಕ್ಷತ್ರದಂದು ಆಚರಿಸುತ್ತಾರೆ. ಜನತೆ ಆಮೂಲಕ ಭಕ್ತಿ ಭಾವಗಳಿಂದ ಸಂಭ್ರಮಿಸುತ್ತಾರೆ. 
ಜಯಂತಿ ಕಾರ್ಯಕ್ರಮದಲ್ಲಿ ಉಳವಿ ದೇವಸ್ಥಾನದ ಅಧ್ಯಕ್ಷ ಸಂಜಯ ಕಿತ್ತೂರ, ಸದಸ್ಯ ವಿರೇಶ್ ಕಂಬಳಿ, ಉಳವಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್ ಮೊಕಾಶಿ, ವ್ಯವಸ್ಥಾಪಕ ಎಸ್ ಎಂ ಕಲ್ಮಠ ಶಾಸ್ತ್ರಿ, ಸಾಮಾಜಿಕ ಕಾರ್ಯಕರ್ತ ಗೋಪಾಲ ಭಟ್ ಶಿವಪುರ ಮತ್ತು ಆಡಳಿತ ಪ್ರಮುಖರು ಗ್ರಾಮಸ್ಥರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0