ಕನ್ನಡ ರಾಜ್ಯೋತ್ಸವ: ಕನ್ನಡ ಧ್ವಜಾರೋಹಣ
ಆಪ್ತ ನ್ಯೂಸ್ ಯಲ್ಲಾಪುರ:
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ( ರಿ ) ತಾಲೂಕು ಸಮಿತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಧ್ವಜಾರೋಹಣ ಸಂಘದ ಕಛೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿಯವರು ಮಾತನಾಡಿ ಕನ್ನಡ ನಮ್ಮ ಮಾತೃಭಾಷೆ ಎಲ್ಲಿದ್ದರೂ ನಮ್ಮ ತನ ಬಿಡದೇ ಕನ್ನಡಾಭಿಮಾನ ತೋರಬೇಕು. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದ್ದು ಕನ್ನಡದ ಹಿರಿಮೆ. ಅನೇಕ ವಿದ್ವಾಂಸರು, ಸಾಹಿತಿಗಳು ಕನ್ನಡದ ಕೆಲಸ ಮಾಡುವ ಮೂಲಕ ರಾಜ್ಯಕ್ಕೆ ಹೆಸರನ್ನು ತಂದಿದ್ದಾರೆ ಎಂದರು.
ನಿವೃತ್ತ ನೌಕರ ಸಂಘದ ಅಧ್ಯಕ್ಷರಾದ ಎಸ್.ಎಲ್.ಜಾಲಿಸತ್ಗಿ ಮಾತನಾಡಿದರು. ಹೆಸ್ಕಾಂ ಶಾಖಾಧಿಕಾರಿ ಲಕ್ಷ್ಮಣ ಜೋಗಳೇಕರ, ಲೈನಮನ್ ಹುಸೇನಸಾಬ ಡೋಂಗ್ರಿಸಾಬ ಆನಂದಪುರ, ಸಂಘದ ಕಾರ್ಯದರ್ಶಿ ಮಕ್ಬೂಲ್ ಸೈಯದ್ ಅಲಿ, ಮಾರುತಿ ಗೋವೇಕರ, ಮಹಮ್ಮದ್ ಜಾಫರ್, ಪ್ರಶಾಂತ ಮಹೇಕರ, ಶಾಧಾಭ ಇಬ್ರಾಹಿಂ ಶೇಖ್, ಸಂಘದ ವ್ಯವಸ್ಥಾಪಕಿ ನಯನಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



