ಅಂಬಾಗಿರಿಯಲ್ಲಿ ಕರ್ಮಜಿಜ್ಞಾಸೆ ಚಕ್ರ ಗ್ರಹಣ ತಾಳಮದ್ದಲೆ

Nov 5, 2025 - 12:17
 0  38
ಅಂಬಾಗಿರಿಯಲ್ಲಿ ಕರ್ಮಜಿಜ್ಞಾಸೆ ಚಕ್ರ ಗ್ರಹಣ ತಾಳಮದ್ದಲೆ

ಆಪ್ತ ನ್ಯೂಸ್ ಶಿರಸಿ:

ಶಿರಸಿಯ ಅಂಬಾಗಿರಿಯ ಶ್ರೀ ಕಾಳಿಕಾಭವಾನಿ ಸಭಾಭವನದಲ್ಲಿ ನವೆಂಬರ್ ೮ರ ಶನಿವಾರ ಸಂಜೆ ೩.೩೦ರಿಂದ ೬.೩೦ವರೆಗೆ ಹೊಂಗಿರಣ ಪೌಂಡೇಶನ್(ರಿ) ಯಕ್ಷ ಶುಭೋಧಯ ಶಿರಸಿ ಅವರಿಂದ “ಕರ್ಮಜಿಜ್ಞಾಸೆ ಚಕ್ರ ಗ್ರಹಣ”ರಾಜ್ಯೋತ್ಸವ ತಾಳಮದ್ದಲೆ ನಡೆಯಲಿದೆ.
ಮುಮ್ಮೇಳದಲ್ಲಿ ಅರ್ಥದಾರಿಗಳಾಗಿ ಡಾ: ಜಿ. ಎ.ಹೆಗಡೆ ಸೋಂದಾ (ಭೀಷ್ಮನಾಗಿ) ಶಂಕರ ಭಟ್ಟ ಸಿದ್ಧಾಪುರ (ಕೃಷ ್ಣ) , ಸುಮಾ ಗಡಿಗೆಹೊಳೆ (ಅರ್ಜುನ) ಅರ್ಥವೈಭವದಿಂದ ಮಾತಿನ ಮಂಟಪವನ್ನು ನಿರ್ಮಿಸಲಿದ್ದಾರೆ. ಮುಮ್ಮೇಳದಲ್ಲಿ ಭಾಗವತರಾಗಿ ಶ್ರೀಪಾದ ಹೆಗಡೆ ಬಾಳೆಗದ್ದೆ, ಮದ್ದಲೆಯಲ್ಲಿ ಶ್ರೀಪಾದ ಭಟ್ಟ ಮೂಡಗಾರ್ ಮುದ ನೀಡಲಿದ್ದಾರೆ.
ರಾಜ್ಯೋತ್ಸವ ತಾಳಮದ್ದಲೆ ಅಂಗವಾಗಿ ಯಕ್ಷಕಲಾವಿದ, ನಾಟ್ಯಾಚಾರ್ಯ ಶಂಕರ ಭಟ್ಟ ಸಿದ್ದಾಪುರ ಅವರನ್ನು ಯಕ್ಷಶುಭೋದಯದ ಅಧ್ಯಕ್ಷ, ಯಕ್ಷಗಾನ ವಿದ್ವಾಂಸ ಡಾ: ಜಿ. ಎ. ಹೆಗಡೆ ಸೋಂದಾ ಅವರು ಸನ್ಮಾನಿಸಿ ಅಭಿನಂದಿಸಲಿದ್ದಾರೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ. ಎಂ. ಹೆಗಡೆ ಆಲ್ಮನೆ ಅಧ್ಯಕ್ಷರು, ಶ್ರೀ ರಾಮಕೃಷ್ಣ ಕಾಳಿಕಾಮಠ ಅಂಬಾಗಿರಿ ವಹಿಸಲಿದ್ದು ಕಲಾಸಕ್ತ ಯಕ್ಷಗಾನ ಪ್ರೇಕ್ಷಕರಿಗೆ ಸಂಘಟಕರು ಆದರದ ಸ್ವಾಗತವನ್ನು ಕೋರಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0