ಪುಣಾಕ್ಕೆ ಹೋಗೋಲ್ಲ ಕರ್ನಾಟಕದ ಬಸ್! ಮಹಾರಾಷ್ಟ್ರದ ಈ ಬಸ್ಸೇ ಗತಿ!
ಜೊಯಿಡಾ ಮುಖಾಂತರ ಕಾರವಾರದಿಂದ ಮಹಾರಾಷ್ಟ್ರದ ಪೂಣಾಕ್ಕೆ ನೂತನವಾಗಿ ಬಸ್ ಸಂಚಾರ ಆರಂಭವಾಗಿದೆ. ಇದರಿಂದಾಗಿ ಜೋಯಿಡಾ, ರಾಮನಗರ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಜೋಯಿಡಾದ ಸಾರ್ವಜನಿಕರು ಸಂಭ್ರಮ ಆಚರಿಸುತ್ತಿದ್ದಾರೆ.

ಆಪ್ತ ನ್ಯೂಸ್ ಜೋಯಿಡಾ:
ಜೊಯಿಡಾ ಮುಖಾಂತರ ಕಾರವಾರದಿಂದ ಮಹಾರಾಷ್ಟ್ರದ ಪೂಣಾಕ್ಕೆ ನೂತನವಾಗಿ ಬಸ್ ಸಂಚಾರ ಆರಂಭವಾಗಿದೆ. ಇದರಿಂದಾಗಿ ಜೋಯಿಡಾ, ರಾಮನಗರ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಜೋಯಿಡಾದ ಸಾರ್ವಜನಿಕರು ಸಂಭ್ರಮ ಆಚರಿಸುತ್ತಿದ್ದಾರೆ.
ಈ ಹಿಂದೆ ಕಾರವಾರ ದಿಂದ ಬಿಡುತ್ತಿದ್ದ ಪಿಂಪ್ರಿ ಬಸ್ ನಿಲ್ಲಿಸಿರುವುದರಿಂದ ಈಗ ಪುಣಾ ಘಟಕದಿಂದ ಹೊಸ ಬಸ್ ಪ್ರಾರಂಬಿಸಲಾಗಿದೆ. ಈ ಬಸ್ಸು ಬೆಳಿಗ್ಗೆ 9 ಗಂಟೆಗೆ ಕಾರವಾರದಿಂದ ಹೊರಟು ಬೆಳಿಗ್ಗೆ 11 ಗಂಟೆಗೆ ಜೊಯಿಡಾ ತಲುಪುತ್ತದೆ.
ಕಾರವಾರದಿಂದ ಜೊಯಿಡಾ, ರಾಮನಗರ, ಬೆಳಗಾವಿ ಮೂಲಕ ಪಿಂಪ್ರಿ-ಪೂಣಾ ತನಕ ಹೋಗುವ ಈ ಬಸ್ಸಿನಿಂದಾಗಿ ಪ್ರಯಾಣಿಕರಿಗೆ ತುಂಬಾ ಅನುಕೂಲ ಆಗಲಿದೆ. ಇಂದು ಪ್ರಾರಂಭವಾದ ಬಸ್ಸಿಗೆ ಜೊಯಿಡಾ ಶಿವಾಜಿ ವೃತ್ತದಲ್ಲಿ ನೂರಾರು ಜನರು ಸೇರಿ ಗಾವಡೆವಾಡಾ ಗ್ರಾಮದ ಮಿರಾಶಿ ವಿನೋದರವರ ನೇತೃತ್ವದಲ್ಲಿ ಪೂಜೆ ನೆರವೇರಿಸಿದರು.
ಬೆಳಗಾವಿಯಿಂದ ಸಂಜೆ 5 ಗಂಟೆಗೆ ಹೊರವುವ ಈ ಬಸ್ ಜೋಯಿಡಾ ಮಾರ್ಗದ ಮೂಲಕ ಕಾರವಾರ ತನಕ ಸಂಚಾರ ಮಾಡಲಿದೆ. ಸಂಜೆಯ ವೇಳೆ ಸೇವೆ ನೀಡುವ ಈ ಬಸ್ ಇಂದಾಗಿ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ವಿನಯ ದೇಸಾಯಿ, ದೇವಿದಾಸ ದೇಸಾಯಿ, ಸುಭಾಷ ವೇಳಿಪ, ರಫಿಕ್ ಖಾಜಿ, ಆನಂದ ಪೋಕಳೆ, ಪ್ರಸನ್ನ ಗಾವಡಾ, ಸಂತೋಷ ಸಾವಂತ, ಮಾಬಳು ಕೂಂಡಲಕರ, ದತ್ತಾರಾಮ ದೇಸಾಯಿ, ದತ್ತಾ ಗಾವಡಾ, ಬಾಬುರಾವ್ ದೇಸಾಯಿ, ದಿವಾಕರ ಕುಂಡಲಕರ ಮುಂತಾದವರು ಇದ್ದರು.
What's Your Reaction?






