ಕೆಡಿಸಿಸಿ ಬ್ಯಾಂಕ್ ಚುನಾವಣೆ: 11 ನಾಮಪತ್ರ ವಾಪಾಸ್, ಮೂವರು ಅವಿರೋಧ ಆಯ್ಕೆ

ಆಪ್ತ ನ್ಯೂಸ್ ಶಿರಸಿ:
ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ವೀಕೃತಗೊಂಡಿದ್ದ 44 ನಾಮಪತ್ರಗಳಲ್ಲಿ 11 ಅಭ್ಯರ್ಥಿಗಳು ಇಂದು ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಇದರಿಂದಾಗಿ 33 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಂತಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ, ಹೊನ್ನಾವರ ಮತ ಕ್ಷೇತ್ರದ ವಿ.ಕೆ.ವಿಶಾಲ ಹಾಗು ಅಂಕೋಲ ಮತ ಕ್ಷೇತ್ರದಿಂದ ಭೀರಣ್ಣ ಬೊಮ್ಮಯ್ಯ ನಾಯಕ ಅವಿರೋದವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಉಳಿದ 12 ಸ್ಥಾನಗಳಿಗೆ 30 ಅಭ್ಯರ್ಥಿಗಳ ನಡುವೆ ಚುನಾವಣೆ ನಡೆಯಲಿದೆ.
ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಹಿಂಪಡೆಯುವ ದಿನವಾದ ಇಂದು 11 ನಾಮಪತ್ರ ಹಿಂಪಡೆಯಲಾಗಿದೆ. ಮದ್ಯಾಹ್ನ ಮೂರು ಗಂಟೆಯವರೆಗೂ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿತ್ತು.
ಶಿರಸಿ ಮತ ಕ್ಷೇತ್ರದಿಂದ ಎಸ್ ಎನ್ ಹೆಗಡೆ, ಯಲ್ಲಾಪುರ ಮತ ಕ್ಷೇತ್ರದಿಂದ ರಾಮಕೃಷ್ಣ ನಾರಾಯಣ ಹೆಗಡೆ ಹಾಗೂ ಕಾರವಾರ ಮತ ಕ್ಷೇತ್ರದಿಂದ ಸುರೇಶ ರಾಮಾ ಪೆಡ್ನೇಕರ್, ಶಿರಸಿ ಮತ ಕ್ಷೇತ್ರದಿಂದ ಗಣಪತಿ ವೆಂಕಟರಮಣ ಜೋಶಿ, ಜೋಯಿಡಾ ಮತ ಕ್ಷೇತ್ರದಿಂದ ಶ್ರೀಕಾಂತ ಬಾವುರಾವ್ ದೇಸಾಯಿ, ಹೊನ್ನಾವರ ಮತ ಕ್ಷೇತ್ರದಿಂದ ನಾರಾಯಣ ಮಹಾಭಲೇಶ್ವರ ಹೆಗಡೆ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘದಿಂದ ರಾಮಚಂದ್ರ ಮಹಾಭಲೇಶ್ವರ ಹೆಗಡೆ, ಅಂಕೋಲ ಮತ ಕ್ಷೇತ್ರದಿಂದ ಗೋಪಾಲಕೃಷ್ಣ ರಾಮಚಂದ್ರ ನಾಯ್ಕ, ಶಿರಸಿ ಮತ ಕ್ಷೇತ್ರದಿಂದ ಬಾಲಚಂದ್ರ ಶಾಂತಾರಾಮ್ ಶಾಸ್ರ್ತಿ, ಸಹಕಾರಿ ಸಂಘ ಕ್ಷೇತ್ರದಿಂದ ವಿನಾಯಕ ರಾ ಹೆಗಡೆ ಹಾಗು ಹೊನ್ನಾವರ ಮತ ಕ್ಷೇತ್ರದಿಂದ ಶಿವಾನಂದ ರಾಮಚಂದ್ರ ಹೆಗಡೆ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಅಕ್ಟೊಬರ್ 25 ಕ್ಕೆ ಚುನಾವಣೆ ನಡೆಯಲಿದ್ದು, 30 ಅಭ್ಯರ್ಥಿಗಳ ಪೈಕಿ ಯಾರಿಗೆ ವಿಜಯಲಕ್ಷ್ಮಿ ಒಲಿಯಬಹುದು ಎನ್ನುವ ಕುತೂಹಲ ಇನ್ನಷ್ಟು ಹೆಚ್ಚಿದೆ.
What's Your Reaction?






