ಮುದ್ದಿಸಲು ಸಿಕ್ಕ ಚಿರತೆಮರಿ
Video Link https://youtube.com/shorts/MXHuraAI8BQ?feature=share

Video Link
https://youtube.com/shorts/MXHuraAI8BQ?feature=share
ಆಪ್ತ ನ್ಯೂಸ್ ಶಿರಸಿ:
ಶಿರಸಿ ತಾಲೂಕಿನ ಗೌಡಳ್ಳಿ ಹತ್ತಿರದ ಖಾನ ನಗರದ ರಸ್ತೆ ಬದಿಯಲ್ಲಿಯೇ ಚಿರತೆ ಮರಿ ಪ್ರತ್ಯಕ್ಷವಾಗಿದ್ದು ಈ ಮರಿಯನ್ನು ನೋಡಿದ ಜನರು ಪ್ರೀತಿಯಿಂದ ಮುಟ್ಟಿ ನೋಡುತ್ತ ಪೋಟೊ ಕ್ಲಿಕ್ಕಿಸುತ್ತಿರುವುದು ಕಂಡು ಬಂದಿದೆ. ಮೇಲ್ನೋಟಕ್ಕೆ ಈ ಚಿರತೆ ಹಸಿವಿನಿಂದ ಜನ ವಸತಿ ಪ್ರದೇಶಕ್ಕೆ ಆಗಮಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಗಾಯಗೊಂಡಿರಬಹುದು ಅಥವಾ ನಿತ್ರಾಣಗೊಂಡು ಮನುಷ್ಯರ ಕೈಗೆ ಸಿಗುತ್ತಿರಬಹುದು ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.
ಸ್ಥಳೀಯರು ಚಿರತೆ ಮರಿಯನ್ನು ಮುಟ್ಟಿ-ಮುದ್ದಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಬಹುದು
Link: https://youtube.com/shorts/MXHuraAI8BQ?feature=share
What's Your Reaction?






