೨೦ಕ್ಕೂ ಅಧಿಕ ಜನರ ಜೀವ ರಕ್ಷಿಸಿದ ಬಸ್ ಚಾಲಕ
ಆಪ್ತ ನ್ಯೂಸ್ ಯಲ್ಲಾಪುರ:
ಇಲ್ಲಿನ ಸಾರಿಗೆ ಸಂಸ್ಥೆಯ ಕಳಚೆ ಹಳ್ಳಿಗೆ ಹೋಗುವ ಬಸ್ಸು ಗಟಾರಕ್ಕಿಳಿದ ಘಟನೆ ನಡೆದಿದೆ.ಪ್ರಪಾತಕ್ಕಿಳಿಯುವದನ್ನು ತಪ್ಪಿಸಲು ಚಾಲಕ ಗಟಾರಕ್ಕಿಳಿಸಿದ್ದಾನೆ.ಯಲ್ಲಾಪುರದಿಂದ ಕಳಚೆಗೆ ಹೊರಟಿದ್ದ ಬಸ್ಸು ಕಳಚೆಯ ನೆಲೆಮನೆ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಬ್ರೆಕ್ ಫೇಲ್ ಆಯಿತೆನ್ನಲಾಗಿದೆ.ಒಂದು ಭಾಗದಲ್ಲಿ ಪ್ರಪಾತವಿದ್ದ ಕಾರಣ ರಸ್ತೆಯ ಇನ್ನೊಂದು ಬದಿಗೆ ಚಾಲಕ ಗಟಾರಕ್ಕಿಳಿಸಿದ ಎನ್ನಲಾಗಿದೆ.ಚಾಲಕನ ವಿವೇಚನೆಯಿಂದ ಆಗಬಹುದಾದ ಅವಘಡ ತಪ್ಪಿದೆ.ಬಸ್ಸಿನಲ್ಲಿ ೨೦ ಕ್ಕೂ ಅಧಿಕ ಪ್ರಯಾಣಿಕರಿದ್ದರು.ಯಾರಿಗೂ ಯಾವುದೇ ಗಾಯಗಳಾಗಿಲ್ಲ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0









