ಬೇಡ್ತಿ ವರದಾ ನದಿಜೋಡಣೆ ವಿರೋಧಿಸಿ ತುಂಬೇಬೀಡಿನಲ್ಲಿ ಬೃಹತ್ ಪ್ರತಿಭಟನೆ 

Oct 17, 2025 - 20:07
Oct 17, 2025 - 20:27
 0  80
ಬೇಡ್ತಿ ವರದಾ ನದಿಜೋಡಣೆ ವಿರೋಧಿಸಿ ತುಂಬೇಬೀಡಿನಲ್ಲಿ ಬೃಹತ್ ಪ್ರತಿಭಟನೆ 

ಆಪ್ತ ನ್ಯೂಸ್ ಯಲ್ಲಾಪುರ:


ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಅ 19 ರಂದು ರವಿವಾರ  ಬೇಡ್ತಿ ವರದಾ ನದಿ ಜೋಡಣೆ ವಿರೋಧಿಸಿ, ಬೈಕ್ ರ್ಯಾಲಿ ಮತ್ತು ಬೃಹತ್ ಜನ ಜಾಗೃತಿ ಸಮಾವೇಶ ಮಂಚಿಕೇರಿಯ ತುಂಬೇಬೀಡು ಶಾಲೆಯ ಹತ್ತಿರ ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ ೧೦.೩೦ ಕ್ಕೆ ನಡೆಯುವ ಸಭೆಯ ಸಾನ್ನಿದ್ಯವನ್ನು ಬೇಡ್ತಿ ಸಮಿತಿ ಗೌರವ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರು  ವಹಿಸಲಿದ್ದಾರೆ. ಸಮಿತಿಯ ಅಧ್ಯಕ್ಷ  ಆನಂತ್ ಹೆಗಡೆ ಆಶಿಸರ್, ತಜ್ಞರಾದ ಡಾ. ಕೇಶವ ಕೂರ್ಸೆ, ಬಾಲಚಂದ್ರ ಸಾಯಿಮನೆ, ಇವರು ಪಾಲ್ಗೊಂಡು ಯೋಜನೆಯ ಸಾಧಕ ಬಾದಕ,ಯೋಜನೆ ಎತ್ತ ಏನು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದಾರೆ. ಜಿಲ್ಲೆಯ ಮತ್ತು ಸ್ಥಾನಿಕ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 
ಅಂದು‌ ಬೆಳಿಗ್ಗೆ 9.30 ಕ್ಕೆ ಏಕಕಾಲದಲ್ಲಿ, ಯಲ್ಲಾಪುರ, ನಂದೊಳ್ಳಿ, ಚಂದುಗುಳಿ, ಮಾಗೋಡು, ಸೂರೇಮನೆ, ಮಳಲಗಾಂವ್, ಕುಂದರಗಿ, ಹಿತ್ಲಳ್ಳಿ ಉಮ್ಮಚಗಿ, ಮಂಚಿಕೇರಿಗಳಿಂದ, ಬೈಕ್ ಯಾಲಿ ಆರಂಭವಾಗಿ, 10-15 ಕ್ಕೆ  ತುಂಬೆಬೀಡು ಶಾಲೆಯ ಹತ್ತಿರ ತಲುಪಲಿದೆ. ಈ ಪ್ರತಿಭಟನಾ ಸಭೆಗೆ ಯುವ ಜನತೆ, ರೈತರು, ಮಾತೃಮಂಡಳಿ, ಸಹಕಾರಿ ಸಂಘ, ಪಂಚಾಯತ ಪ್ರತಿನಿಧಿಗಳು, ವನವಾಸಿ ಬಂಧುಗಳು, ಸ್ವಸಹಾಯ ಸಂಘಗಳು, ವ್ಯಾಪಾರಸ್ಥರು, ಕೃಷಿ ಕೂಲಿಕಾರರು, ಎಲ್ಲರೂ ಪ್ರತಿಭಟನಾ ಸಭೆಗೆ ಭಾಗವಹಿಸುವಂತೆ ಕೊಳ್ಳ ಸಂರಕ್ಷಣಾ ಸಮಿತಿಯ ಪ್ರಕಟಣೆ ತಿಳಿಸಿದೆ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0