ಕ್ಯಾದಗಿಯಲ್ಲಿ ಬೃಹತ್ ಸಭೆ, ತೀವ್ರ ಆಕ್ರೋಶ, ಪ್ರಶ್ನೆಗಳ ಸುರಿಮಳೆ, ಅರಣ್ಯ ಕಛೇರಿಗೆ ಮುತ್ತಿಗೆೆ
ಆಪ್ತ ನ್ಯೂಸ್ ಸಿದ್ದಾಪುರ:
ಅರಣ್ಯ ಹಕ್ಕು ಕಾಯಿದೆಗೆ ಮಾನ್ಯತೆ ನೀಡದೇ ಮತ್ತು ನೀತಿ ನಿಯಮ ಉಲ್ಲಂಘಿಸಿ ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ಸರ್ವಾಧಿಕಾರ ಪ್ರವ್ರತ್ತೀ ಕುರಿತು ಬೃಹತ್ ಸಂಖ್ಯೆಯ ಅರಣ್ಯವಾಸಿಗಳು ಕ್ಯಾದಗಿ ಅರಣ್ಯ ಕಛೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಇಲಾಖೆಯ ತಪ್ಪಾದ ನೀತಿ, ನಿಯಮಕ್ಕೆ ಅರಣ್ಯ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆ ಮೂಲಕ ಇಲಾಖೆಯ ಪ್ರವ್ರತ್ತೀಯನ್ನು ಖಂಡಿಸುವ ಘಟನೆ ಕ್ಯಾದಗಿ ವಲಯ ಅರಣ್ಯ ಕಛೇರಿ ಆವರಣದಲ್ಲಿ ಜರುಗಿದವು.
ಸಿದ್ದಾಪುರ ತಾಲೂಕಿನ ಕ್ಯಾದಗಿ ವಲಯ ಅರಣ್ಯ ಕಛೇರಿಯ ಆವರಣದಲ್ಲಿ ಇಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಅರಣ್ಯ ಅಧಿಕಾರಿಯೊಂದಿಗೆ ಸಮಾಲೋಚನೆ ಸಭೆಯಲ್ಲಿ ಮೇಲಿನ ಘಟನೆಗಳು ಜರುಗಿದವು .
ಕಾನೂನು ವಿಧಿ ವಿಧಾನ ಅನುಸರಿಸದೇ ಅರಣ್ಯ ಹಕ್ಕು ಕಾಯಿದೆಯಲ್ಲಿನ ಅರ್ಜಿ ಪುನರ್ ಪರಿಶೀಲಿಸುವ ಹಂತದಲ್ಲಿ ಬಲ ಪ್ರಯೋಗದಿಂದ ಅರಣ್ಯ ಇಲಾಖೆಯೂ ಜಂಟಿ ತೆರವು ಕಾರ್ಯಚರಣೆ ಇಲ್ಲದೇ, ಎಕಾಂಗಿಯಾಗಿ ಇತ್ತೀಚಿಗೆ ಅರಣ್ಯವಾಸಿಗಳನ್ನು ಹೊರಹಾಕುವ ಕ್ರಮಕ್ಕೆ ಅರಣ್ಯವಾಸಿಗಳಿಂದ ತೀವ್ರ ತರಾಟೆಗೊಳಗಾದರು.
ಸಭೆಯಲ್ಲಿ ಹಾಜರಿದ್ದ ತಹಶೀಲ್ದಾರ ಎಮ್ ಆರ್ ಕುಲಕರ್ಣಿ ಮತ್ತು ಸಿಪಿಐ ಸೀತಾರಾಮ ಮದ್ಯ ಪ್ರವೇಶಿಸಿ ಮಾತನಾಡಿದರು. ಸಭೆಯಲ್ಲಿ ಹಾಜರಿದ್ದ ಎಸಿಎಫ್ ಪವಿತ್ರಾ ಮತ್ತು ಆರ್ ಎಫ್ ಓ ಮಹೇಶ್ ದೇವಡಿಗ ಅವರಿಗೆ ಉತ್ತರಿಸಲಾಗದ ಪ್ರಶ್ನೇಗಳ ಮೇಲೆ ಪ್ರಶ್ನೇ ಅರಣ್ಯವಾಸಿಗಳಿಂದ ಕೇಳಿಬಂದವು. ಕೆಲವು ಕಾಲ ಆವರಣ ಸಂಪೂರ್ಣ ಘೋಷಣೆಯಿಂದ ಅರಣ್ಯವಾಸಿಗಳು ಆಕ್ರೋಶ ವ್ಯಕ್ತ ಪಡಿಸಿರುವುದು ಹೋರಾಟದ ಕಾವೂ ಹೆಚ್ಚಿಸಿದವು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಪ್ರಾಸ್ತವಿಕ ಮಾತನಾಡಿದರು, ಕೆ ಟಿ ನಾಯ್ಕ ಕ್ಯಾದಗಿ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ಮಹೇಶ ನಾಯ್ಕ ಕಾನಕ್ಕಿ, ಬಿಡಿ ನಾಯ್ಕ ಹರಕನಳ್ಳಿ, ರಾಮಕೃಷ್ಣ ನಾಯ್ಕ ತ್ಯಾಗಲಿಮನೆ, ದಿನೇಶ ನಾಯ್ಕ ಬೇಡ್ಕಣಿ, ಸುನೀಲ ನಾಯ್ಕ ಸಂಪಖAಡ, ನೆಹರು ನಾಯ್ಕ, ಶಿವಾನಂದ ಜೋಗಿ, ಚಂದ್ರ ಶಾನಭಾಗ,ರಪೀಕ್ ಗೌಡಳ್ಳಿ, ಹರಿ ನಾಯ್ಕ ಓಂಕಾರ, ಮೋಹನ ಕಾನಳ್ಳಿ, ಉಮೇಶ ಬೇಡ್ಕಣಿ, ಗೋವಿಂದ ಗೌಡ, ಶಿವಪ್ಪ ನಾಯ್ಕ, ಧನಂಜಯ ನಾಯ್ಕ, ಸಂಕೇತ ಹಲಗೇರಿ, ನಾಗರಾಜ ಮರಾಠಿ, ಲಕ್ಷö್ಮಣ ನಾಯ್ಕ, ಬಾಬು ಮರಾಠಿ ಮುಂತಾದವರು ನೇತೃತ್ವವಹಿಸಿದರು
ಅರಣ್ಯವಾಸಿಗಳಿಂದ ಕಾನೂನಾತ್ಮಕ ಸಂಘರ್ಷ:
ಕಂದಾಯ, ಪೋಲಿಸ್, ಸ್ಥಳೀಯ ಸಂಸ್ಥೆ ಮತ್ತು ಪಂಚನಾಮೆ ಇಲ್ಲದೇ ತೆರವುಗೊಳಿಸುವ ಸಂದರ್ಭದಲ್ಲಿನ ನೀತಿ,ನಿಯಮ ಜಾರಿ ಮಾಡದೇ ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ಕಾನೂನುಬಾಹಿರವೆಂದು ಸೇರಿದ ಅರಣ್ಯವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರು. ಮೌಲ್ಯಯುತ ಬೆಳೆ ನಾಶಪಡಿಸಲು ಅವಕಾಶವಿಲ್ಲ, ಬೆಳೆ ಹರಾಜು ಮಾಡಿಲ್ಲ, ಅಮಾನವೀಯ ರೀತಿಯ ಅಡಿಕೆ ಗಿಡ ಕಡಿದಿರುವುದು ಹಾಗೂ ಜಂಟಿ ಸರ್ವೆ ವಿಲ್ಲದೇ ಒಕ್ಕಲೆಬ್ಬಿಸಿದ ಅರಣ್ಯ ಇಲಾಖೆಯ ಕೃತ್ಯವನ್ನು ಅರಣ್ಯವಾಸಿಗಳಿಂದ ಕಾನೂನು ಸಂಘರ್ಷಕ್ಕೆ ಸಂಭAದಿಸಿದ ಪ್ರಶ್ನೇಗಳನ್ನು ವ್ಯಕ್ತಪಡಿಸುತ್ತಾ ತೀರ್ವ ಆಕ್ರೋಶ ವ್ಯಕ್ತವಾದವು.
ಮರ ಕಡಿದವರನ್ನು ಹಾಜರುಪಡಿಸಿ :
ಮಾನವೀಯ ಮೌಲ್ಯಕ್ಕೂ ಮೀರಿ ಬೆಳೆದಿರುವಂತ ಅಡಿಕೆ ಗಿಡ ಕಡಿದು ನಾಶಪಡಿಸಿದ ಅರಣ್ಯ ಸಿಬ್ಬಂಧಿಗಳನ್ನ ಸಭೆಯ ಮುಂದೆ ಹಾಜರಪಡಿಸಲು ಬೃಹತ್ ಸಂಖ್ಯೆಯಲ್ಲಿ ಸೇರಿದ ಅರಣ್ಯವಾಸಿಗಳು ಆಗ್ರಹ ಮಾಡಿದರು. ಅಲ್ಲದೇ, ಹಾಜರುಪಡಿಸದೇ ಇರುವಂತ ಸಂದರ್ಭದಲ್ಲಿ ಅರಣ್ಯವಾಸಿಗಳು ಅರಣ್ಯ ಕಛೇರಿಗೆ ನುಗ್ಗಲು ಪ್ರಯತ್ನೀಸಿ ಕೆಲವು ಕಾಲ ಸಭೆಯು ಉದ್ವೀಗ್ನ ಪರಿಸ್ಥಿತ ಉಂಟಾಗಿದ್ದು, ಹೋರಾಟಗಾರರ ಪ್ರಮುಖರ ಮಧ್ಯಸ್ಥಿಕೆಯಲ್ಲಿ ವಾತಾವರಣ ತಿಳಿಗೊಳಿಸಲಾಯಿತು.
ತೀರ್ಮಾನಗಳು:
ಮುಂದಿನ ಹದೀನೈದು ದಿನಗಳಲ್ಲಿ ಸಿದ್ದಾಪುರ ತಾಲೂಕಿನ ವ್ಯಾಪ್ತಿಯಲ್ಲಿನ ಅರಣ್ಯವಾಸಿಗಳ ಸಮಸ್ಯೆಗಳನ್ನ ಸಮಗ್ರವಾಗಿ ಚರ್ಚಿಸಲು ಹಿರಿಯ ಅರಣ್ಯ ಅಧಿಕಾರಿಯೊಂದಿಗೆ ಸಿದ್ದಾಪುರದಲ್ಲಿ ಸಭೆ ಸಂಘಟಿಸಲು ಉಪಸ್ಥಿತರಿದ್ದ ತಹಶೀಲ್ದಾರ ಎಮ್ ಆರ್ ಕುಲಕರ್ಣಿ, ಎಸಿಎಫ್ ಪವಿತ್ರ ಮತ್ತು ಆರ್ ಎಫ್ ಓ ಮಹೇಶ ದೇವಡಿಗ ಸಭೆಗೆ ಆಶ್ವಾಸನೆ ನೀಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



