ಪ್ರತಿಭಾವಂತ ವಿದ್ಯಾರ್ಥಿ ನಿತಿನ್ ಭಟ್ ಆತ್ಮಹತ್ಯೆ
ಆಪ್ತ ನ್ಯೂಸ್ ರಾಮನಗುಳಿ:
ಅಂಕೋಲಾ ತಾಲೂಕಿನ ಕಲ್ಲೇಶ್ವರದ ನಿತಿನ್ ರಾಘವೇಂದ್ರ ಭಟ್ (೨೦) ಬೆಂಗಳೂರಿನಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಈತ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ನ ಮೂರನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ.
ಕಲ್ಲೇಶ್ವರದ ರಾಘವೇಂದ್ರ ಭಟ್ ಹಾಗೂ ಕವಯಿತ್ರಿ ಸ್ಮಿತಾ ಭಟ್ ಅವರ ಪುತ್ರ ನಿತೀನ್ ಭಟ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆತ್ಮಹತ್ಯೆ ಕುರಿತಂತೆ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿತೀನ್ ಓದಿನ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿಯೂ ಮುಂದಿದ್ದ. ಈತನ ಸಾವು ಕುಟುಂಬಸ್ಥರನ್ನು, ಗ್ರಾಮಸ್ಥರನ್ನು ಹಾಗೂ ಆಪ್ತರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
6
Wow
0



