ಪಣಸೋಲಿಯಲ್ಲಿ ನೆಟ್ವರ್ಕ್ ಬಾಗ್ಯ

Oct 26, 2025 - 08:48
 0  46
ಪಣಸೋಲಿಯಲ್ಲಿ ನೆಟ್ವರ್ಕ್ ಬಾಗ್ಯ

ಆಪ್ತ ನ್ಯೂಸ್ ಜೋಯಿಡಾ:
ತಾಲೂಕಿನ ಪಣಸೋಲಿಯಲ್ಲಿ ಕಳೆದ ಎರಡು ತಿಂಗಳು ಗಳಿಂದ ಬಿಎಸ್ಎನ್ಎಲ್ 4G ನೆಟ್ವರ್ಕ್ ಬಂದಾಗಿತ್ತು. ಸಾರ್ವಜನಿಕರ ತೀವ್ರವಾದ ಪ್ರತಿಭಟನೆಯ ನಂತರ ಶನಿವಾರ ಸಾಯಂಕಾಲ 5 30 ರ ವೇಳೆಗೆ ನೆಟ್ವರ್ಕ್ ಪುನಃ ಪ್ರಾರಂಭವಾಗಿದೆ. ಇದರಿಂದ ಸ್ಥಳೀಯರು ತುಂಬಾ ಸಂತಸ ವ್ಯಕ್ತಪಡಿಸಿ ನಮ್ಮ ಬೇಡಿಕೆಯನ್ನು ಗಮನಿಸಿದ ಮಾಧ್ಯಮದವರನ್ನು ಮತ್ತು ಮಾಧ್ಯಮದ ವರದಿ ಗಮನಿಸಿದ ಇಲಾಖೆ ಯವರನ್ನು ಅಭಿನಂದಿಸಿದ್ದಾರೆ.
ದೂರವಾಣಿ ಗ್ರಾಹಕರಿಗೆ ತೊಂದರೆ ಆಗದಂತೆ ಬಾರತ ಸಂಚಾರ ನಿಗಮ ತನ್ನ ಕೆಲಸವನ್ನು ಶ್ರದ್ದೆಯಿಂದ ಮಾಡಬೇಕು. ಜನತೆ ಇಲಾಖೆಯ ನೆಟ್ವರ್ಕ್ ಉಪಯೋಗ ಮಾಡಿದ್ದಕ್ಕೆ ಹಣ ತುಂಬುತ್ತಾರೆ. ಉಚಿತವಾಗಿ ಬಳಕೆ ಮಾಡುತ್ತಿಲ್ಲ ಜನತೆ ಬಳಕೆ ಮಾಡಿದಾಗ ಮಾತ್ರ ತಮಗೆ ಸಂಬಳ ಸಿಗುತ್ತದೆ ಎನ್ನುವುದನ್ನು ತಿಳಿದು ತಮ್ಮ ವೃತ್ತಿಯಲ್ಲಿ ಶಿಸ್ತನ್ನು ಅಳವಡಿಸಿ ಕೊಂಡರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು ಪಣಸೋಲಿ ಗ್ರಾಹಕರು ಇಲಾಖೆಗೆ ಕಿವಿಮಾತು ಹೇಳಿದ್ದಾರೆ. 
ಆದರೆ  ಬಿಎಸ್ಎನ್ಎಲ್ ಇಲಾಖೆ ಅಣಶಿಯಲ್ಲಿ 4G ಅಳವಡಿಕೆ ಕೆಲಸ ಮಾಡದೇ ಇರುವುದನ್ನು ಗಮನಿಸಿ ಸ್ಥಳೀಯರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗಮನಕ್ಕೆ ತಮ್ಮ ಸಮಸ್ಯೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0