ಇಲಾಖೆಯ 27 ವರ್ಷ ವನವಾಸಕ್ಕೆ ಬೃಹತ್ ವಿರೋಧ : ಅರಣ್ಯವಾಸಿಯ ಒಕ್ಕಲೆಬ್ಬಿಸುವ ಪ್ರಕ್ರಿಯೆ ಆದೇಶ ಸ್ಥಗಿತಕ್ಕೆ ಆಗ್ರಹ
ಆಪ್ತ ನ್ಯೂಸ್ ಮುಂಡಗೋಡ:
ಜಿಲ್ಲಾದ್ಯಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಮೇಲೆ, ೧೯೯೮ ರಲ್ಲಿ ಅಂದರೇ, ೨೭ ವರ್ಷಗಳ ಹಿಂದೆ ದಾಖಲಿಸಿದ ಕ್ರಿಮಿನಲ್ ಪ್ರಕರಣದ ಆಧಾರದ ಮೇಲೆ ಇತ್ತೀಚಿಗೆ ಅರಣ್ಯ ಇಲಾಖೆಯು ಜರುಗಿಸುತ್ತಿರುವ ತಾಂತ್ರಿಕ ದೋಷದಿಂದ ಕೂಡಿದ ಒಕ್ಕಲೆಬ್ಬಿಸುವ ಪ್ರಕ್ರಿಯೆ ನೀತಿ ಮತ್ತು ಆದೇಶಕ್ಕೆ ಅರಣ್ಯವಾಸಿಗಳಿಂದ ಬೃಹತ್ ಸಂಖ್ಯೆಯ ಅರಣ್ಯವಾಸಿಗಳಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅರಣ್ಯ ಅಧಿಕಾರಿಗಳ ಕಾನೂನು ವಿರೋಧಿ ಕೃತ್ಯಕ್ಕೆ ತೀವ್ರ ಖಂಡನೆ, ಕಛೇರಿ ಮುತ್ತಿಗೆ ಹಾಕಿ ತೀವ್ರ ಪ್ರತಿವಾಧ ವ್ಯಕ್ತವಾದ ಘಟನೆ ಜರುಗಿದವು.
ಇಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಬೃಹತ್/ ಸಹಸ್ರಾರು ಸಂಖ್ಯೆಯ ಅರಣ್ಯವಾಸಿಗಳು ಮುಂಡಗೋಡ/ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಆವರಣದಲ್ಲಿ ಹಿರಿಯ ಅರಣ್ಯಾಧಿಕಾರಿ ರವಿ ಹುಳಕೊಟಿ ಅವರೊಂದಿಗೆ ಜರುಗಿದ ಸಮಾಲೋಚನಾ ಸಭೆಯಲ್ಲಿ ಮೇಲಿನ ನಡವಳಿಕೆಗಳು ಜರುಗಿದವು.
ಜಿಲ್ಲಾದ್ಯಂತ ಅನಾಧಿಕಾಲದಿಂದ, ಅನಧೀಕೃತವಾಗಿ ವಾಸ್ತವ್ಯ ಮತ್ತು ಸಾಗುವಳಿ ಮಾಡಿರುವಂತ ಅರಣ್ಯವಾಸಿಗಳ ಮೇಲೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯ ಪ್ರಾಧಿಕಾರದಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವ ವಿಚಾರಣೆಯ ಕಾನೂನಾತ್ಮಕ ನೋಟಿಸ್ ನೀಡುತ್ತೀರುವ ಹಿನ್ನಲೆಯಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಕಾನೂನು ಬಾಹಿರವಾಗಿ ಅರಣ್ಯವಾಸಿಗಳಿಗೆ ಮಾಹಿತಿ ನೀಡುವುದು ಮತ್ತು ಕಾನೂನು ವ್ಯತಿರಿಕ್ತವಾಗಿ ಅರಣ್ಯವಾಸಿಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಹೋರಾಟಗಾರರ ಪ್ರಮುಖರು ವಿಶ್ಲೇಶಿಸಿದರು.
ಕ್ರಿಮಿನಲ್ ಪ್ರಕರಣ ದಾಖಲಿಸಿ ೨೭ ವರ್ಷಗಳ ನಂತರ ಅರಣ್ಯ ಇಲಾಖೆಯು ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಚಾಲನೇ ನೀಡುತ್ತೀರುವ ಕುರಿತು ಹಾಗೂ ಅರಣ್ಯ ಇಲಾಖೆ ವನವಾಸದಲ್ಲಿ ಇದ್ದಿರುವ ಕುರಿತು ಅರಣ್ಯ ಹಕ್ಕು ಕಾಯಿದೆ ಅರ್ಜಿ ವಿಚಾರಣೆ ಹಂತದಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗುಸುತ್ತಿರುವುದು ಪದೇ ಪದೇ ಸಾಗುವಳಿ ಅರಣ್ಯವಾಸಿಗಳಿಗೆ ಆತಂಕ ಉಂಟುಮಾಡುವ ಹಲವಾರು ಪ್ರಶ್ನೇಗಳ ಸವಾಲುಗಳು ಅರಣ್ಯಾಧಿಕಾರಿಗಳಿಗೆ ಅರಣ್ಯವಾಸಿಗಳು ಸಂಘಟಿಸುವ ಕಾರ್ಯ ಜರುಗಿದವು.
ಸಮಾಲೋಚನೆ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ ಹಾಗೂ ವಲಯ ಅರಣ್ಯಾಧಿಕಾರಿ ವೀರೇಶ ಉಪಸ್ಥಿತರಿದ್ದರು. ಎಲ್ಲಾ ಲಿಂಗ ಕುನ್ನುರ್ ಪೋಲಿಸ್ ಅಧಿಕಾರಿಯ ನೇತೃತ್ವದಲ್ಲಿ ಬಿಗಿ ಬಂದೋಬಸ್ತ ಜರುಗಿತ್ತು. ತಾಲೂಕಾದ್ಯಕ್ಷ ಶಿವಾನಂದ ಜೋಗಿ, ಸಂಚಾಲಕರಾದ ಗಣಪತಿ ನಾಯ್ಕ ಬೆಡಸಗಾಂವ್, ಮಂಜುನಾಥ ನಾಯ್ಕ, ಸ್ವಾಮಿ ಹಿರೇಮಠ, ನೀಲಕಂಠ ಜಿಲ್ನೂರು, ಮಲ್ಲಿಕಾರ್ಜುನ್ ಓಣಿಕೇರಿ, ಮುನೇಶ್ವರ ಹನುಮಾಪುರ, ಶಂಬು ಕಾತೂರು, ವೀರಭದ್ರ, ನಾಗಪ್ಪ ಬಾಚಣಿಕೆ, ಜಗದೀಶ್ ಕೊಡಂಬಿ, ಶೇಖಯ್ಯ ಹಿರೇಮಠ ಗುಂಜಾವತಿ, ನಾನಾಸಾಬ, ಪ್ರಶಾಂತ್ ಜೈನ್ ಬೆಡಸಗಾಂವ್, ಶಿವಾಜಿ, ದೇವೇಂದ್ರ, ಪರಮೇಶ್ವರ ಗೌಡ ಸಾನವಳ್ಳಿ, ಚಿದಬಂರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ದಿನ ದಿನ ಸಾಯಿಸಬೇಡಿ
ಒಂದಿನ ಬೇಲಿ ತೆಗೆಯುವುದು. ಇನ್ನೋಂದು ದಿನ ಸಾಗುವಳಿಗೆ ಆತಂಕ ಮಾಡುವುದು, ಮತ್ತೋಂದು ದಿನ ನೋಟಿಸ್ ಬರುವುದು, ಅರಣ್ಯವಾಸಿಗಳಿಗೆ ಇತ್ತೀಚಿಗೆ ದಿನನಿತ್ಯ ಕಿರಿಕಿರಿಯಾಗಿದೆ ನೆಮ್ಮದಿಯಿಲ್ಲ, ಯಾವಾಗಾ ಬಂದು ಕಿತ್ತುಹಾಕುತ್ತಾರೆ ಎನ್ನುವ ಭಯ. ದಿನದಿನ ಸಮಸ್ಯೆಗಳಿಂದ ಸಾಯಿಸುವ ಬದಲು ಒಂದೇ ಸಲ ಬಂದು ಕಿತ್ತಾಕಿ ಬಿಟ್ಟು ಸಾಯಿಸಿಬಿಡಿ ಎಂದು ಅಳಲನ್ನು ದುಖಃ ಮತ್ತು ಆಕ್ರೂಶದಿಂದ ಸೇರಿದಂತ ಅರಣ್ಯವಾಸಿಗಳು ಭಾವನೆಗಳನ್ನು ವ್ಯಕ್ತಪಡಿಸಿದರು.
ಸರ್ಕಾರದ ಆದೇಶ ಮತ್ತು ಕಾನೂನು ನೀರ್ಲಕ್ಷ :
ಅರಣ್ಯ ಇಲಾಖೆಯು ೧೯೯೮ ರಲ್ಲಿ ಕ್ರೀಮಿನಲ್ ಪ್ರಕರಣ ದಾಖಲಿಸಿದ್ದು ಇರುತ್ತದೆ. ತದನಂತರ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಾಗುವಳಿ ಅರ್ಜಿ ವಿಚಾರಣೆ ಹಂತದಲ್ಲಿ ಒಕ್ಕಲೆಬ್ಬಿಸಬಾರದು ಎಂಬ ಕಾನೂನು ಮತ್ತು ಕೇಂದ್ರ ಸರ್ಕಾರದ ಅದೇಶ ಉಲ್ಲಂಘಿಸಿ ಅಲ್ಲದೇ, ೩ ಎಕರೆ ಸಾಗುವಳಿದಾರರಿಗೆ ರಕ್ಷಣೆ ನೀಡುವ ರಾಜ್ಯ ಸರ್ಕಾರದ ಸುತ್ತೋಲೆ ವ್ಯತಿರಿಕ್ತವಾಗಿ ನಿರ್ಲಕ್ಷೀಸುವುದನ್ನು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಭಲವಾಗಿ ಖಂಡಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



