ರಾಜ್ಯೋತ್ಸವ ಸಂಭ್ರಮ: ಬೊಮ್ನಳ್ಳಿ ಸೇರಿ ಐವರು ಸಾಧಕರಿಗೆ  ಸನ್ಮಾನ

Oct 30, 2025 - 19:50
 0  45
ರಾಜ್ಯೋತ್ಸವ ಸಂಭ್ರಮ: ಬೊಮ್ನಳ್ಳಿ ಸೇರಿ ಐವರು ಸಾಧಕರಿಗೆ  ಸನ್ಮಾನ

ಆಪ್ತ ನ್ಯೂಸ್ ಶಿರಸಿ:

ಚಿತ್ರ ಕಲಾವಿದ, ವ್ಯಂಗ್ಯ ಚಿತ್ರದ ಮೂಲಕ ಹೆಸರುವಾಸಿಯಾಗಿರುವ ಜಿ ಎಂ ಬೊಮ್ನಳ್ಳಿ ಸೇರಿದಂತೆ ಐವರು ಸಾಧಕರನ್ನು ನವೆಂಬರ್ 1ರಂದು ತಾಲೂಕಾ ಆಡಳಿತದಿಂದ ನಡೆಯಲಿರುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿದೆ.

ಜೊತೆಗೆ ಗಣಪತಿ ಭಟ್ (ಪರಿಸರ), ಕದಂಬ ರತ್ನಾಕರ ನಾಯ್ಕ (ಸಾಹಿತ್ಯ),  ಶ್ರೀಮತಿ ಅನುರಾಧಾ ರಾಮಚಂದ್ರ ಹೆಗಡೆ (ಕಲೆ,ಭರತನಾಟ್ಯ) ಹಾಗು ಮಧುಕೇಶ್ವರ ಕೆ ನಾಯ್ಜ (ಕಲೆ ಸಂಸ್ಕ್ರತಿ) ಇವರನ್ನೂ ಕೂಡ ಸನ್ಮಾನಿಸಲಾಗುವುದು.

ಬೆಳಿಗ್ಗೆ 8.45 ಕ್ಕೆ ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢಶಾಲಾ ಮೈದಾನದಿಂದ ಕನ್ನಡಾಂಬೆಯ ಮೆರವಣಿಗೆ ನಡೆಯಲಿದ್ದು ಮೆರವಣಿಗೆಯಲ್ಲಿ 42 ಶಾಲಾ ತಂಡಗಳು ಹಾಗು 8 ರೂಪಕಗಳು ಭಾಗವಹಿಸಲಿವೆ ಎಂದು ತಾಲೂಕು ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿ ತಿಳಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0