ಉತ್ತರ ಕನ್ನಡದಲ್ಲಿ ತಪ್ಪದ ಮಳೆಯ ಕಾಟ: ಹೈರಾಣಾದ ಜನಸಾಮಾನ್ಯರು
ಆಪ್ತ ನ್ಯೂಸ್ ಶಿರಸಿ:
ಉತ್ತರ ಕನ್ನಡ ಜಿಲ್ಲೆಯಲ್ಲಿ ದೀಪಾವಳಿ ಕಳೆದರೂ ಮಳೆ ಕಡಿಮೆಯಾಗಿಲ್ಲ. ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯ ಅಬ್ಬದ ಮುಂದುವರಿದಿದೆ. ಇದರಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಜನಜೀವನ ಅಸ್ತವ್ಯಸ್ತಗೊಂಡಿದೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ, ಹಳಿಯಾಳ, ದಾಂಡೇಲಿ ಅಲ್ಲದೆ ಕರಾವಳಿ ಪ್ರದೇಶಗಳಲ್ಲಿಯೂ ಕೂಡ ಮಳೆ ಸುರಿದಿದೆ. ನಾಡು ನಡುವೆ ಬಿಡುವು ನೀಡುವ ಮೂಲಕ ಮಳೆ ಸುರಿಯುತ್ತಿದ್ದರೂ, ಬರುವ ಮಳೆ ಅಬ್ಬರದ ಪ್ರತಾಪವನ್ನೇ ತೋರುತ್ತಿದೆ. ಇದರಿಂದಾಗಿ ಜನಸಾಮಾನ್ಯರು ಒದ್ದಾಡುವ ಹಾಗಾಗಿದೆ.
ಬಹುತೇಕ ಕಡೆಗಳಲ್ಲಿ ಬೆಳೆ ಇನ್ನೇನು ಕೈಗೆ ಬರುವ ಸಮಯ. ಭತ್ತ ಬಲಿಯುವ ಸಮಯ. ಅಡಿಕೆ ಬೆಳೆಯೂ ಕೈಗೆ ಸಿಗುವ ಹೊತ್ತು. ಆದರೆ ಈಗ ಸುರಿಯುತ್ತಿರುವ ಮಳೆ ಈ ಬೆಳೆಗಳಿಗೆ ತೊಂದರೆ ತಂದಿದ್ದು, ಬೆಳೆ ಹಾಳಾಗುವ ಹಂತ ತಲುಪಿದೆ. ಭತ್ತ ಕೊಳೆಯುತ್ತಿದ್ದರೆ, ಅಡಿಕೆ ಉದುರುವ ಹಂತ ತಲುಪಿದೆ. ಇದ್ರಿಂದ ಬೆಳೆಗಾರ ಸಮೂಹ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಹಾಗಾಗಿದೆ. ಮಳೆ ನಿಂತರೆ ಸಾಕಪ್ಪ ಎನ್ನುವ ಹಂತಕ್ಕೆ ಜನರು ಬಂದು ತಲುಪಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



