ಆರೆಸ್ಸೆಸ್ ಎಂದರೆ ಹಿಂದೂ ರಾಷ್ಟ್ರದ ಪರಮವೈಭವ: ಕೃಷ್ಣ ನರೇಗಲ್

ಆಪ್ತ ನ್ಯೂಸ್ ಯಲ್ಲಾಪುರ:
ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜದ ಶಕ್ತಿ. ಇಂದು ತನ್ನದೇ ಆದ ಸಂಘಟಿತ ಶಕ್ತಿಯಿಂದ ಬೆಳೆದು ನಿಂತಿದೆ. ಆರೆಸ್ಸೆಸ್ ಎಂದರೆ ಹಿಂದೂ ರಾಷ್ಟ್ರದ ಪರಮವೈಭವ. ರಾಷ್ಟ್ರ ನಿರ್ಮಾಣದ ಅಭ್ಯುದಯದ ಕನಸನ್ನು ನನಸಾಗಿಸಲು ಹಗಲಿರುಳು ಪರಿಶ್ರಮಪಡುವುದು ಆರೆಸ್ಸೆಸ್ ಎಂದು ದಾಂಡೇಲಿ ಜಿಲ್ಲಾ ಪ್ರಚಾರಕ ಕೃಷ್ಣ ನರೇಗಲ್ ಅಭಿಪ್ರಾಯಪಟ್ಟರು.
ರವಿವಾರ ಸಾಯಂಕಾಲ ವಜ್ರಳ್ಳಿಯ ಸರ್ವೋದಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವಜ್ರಳ್ಳಿ ರಾ.ಸ್ವ.ಸಂಘದ ಮಂಡಲ ಉತ್ಸವದಲ್ಲಿ ಬೌದ್ಧಿಕ ನೀಡಿದರು.
ದೇಹ ಮನಸ್ಸು ಜಾಗೃತಗೊಳಿಸುವ ವಿಚಾರಗಳ ಸಮನ್ವಯತೆಯಿಂದ ದೇಶ ಕಟ್ಟುವ ಬದುಕಿನ ಭಾಗವು ಸಂಘಟನೆಯ ಮೂಲ ಧ್ಯೇಯವವೇ ಆಗಿದೆ . ಸಂಘವನ್ನು ಕಟ್ಟಿ ಬೆಳೆಸಿದ ಅನೇಕ ಧೀಮಂತರು ಅನೇಕ ಶ್ರಮ ಇದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗತಿ ವಿಧಿಗಳು, ಸಾಮಾಜಿಕ ಸಾಮರಸ್ಯ ಕಾಪಾಡುವುದು, ಗೋರಕ್ಷಣೆ, ಹೀಗೆ ಹತ್ತು ಹಲವು ಕಾರ್ಯದಲ್ಲಿ ತನ್ನನ್ನು ತಾನು ಸಮರ್ಥವಾಗಿ ಸಮರ್ಪಿಸಿಕೊಳ್ಳುವುದು. ಸಮಾಜದ ಸಂಕಟದ ಸಂದರ್ಭದಲ್ಲಿ ಆರೆಸ್ಸೆಸ್ ತಕ್ಷಣ ನೆರವಾಗುವುದು ಕೂಡಾ ದೇಶಸೇವೆಯ ಪ್ರಜ್ಞೆಯ ಭಾಗವೇ ಆಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ರಾಮಮಂದಿರ ರಾಷ್ಟ್ರ ಮಂದಿರ ವಾದುದು ಕಾರ್ಯಕರ್ತರ ಸಂಘಟಿತದ ಫಲ. ಹಿಂದೂ ಸಮಾಜದವರು ಪ್ರಕೃತಿ ಆರಾಧಕರು. ಆದುದರಿಂದ ನಮ್ಮ ಜೀವನಶೈಲಿ ಸಮೃದ್ಧವಾಗಿದೆ. ಬದುಕಿನಲ್ಲಿ ವ್ಯಕ್ತಿ ಭಾವನೆಗಳಿಗೆ,ಕುಟುಂಬದ ಸಂಬಂಧಗಳಿಗೆ ಗೌರವ ಕೊಡುವ ಶಿಷ್ಟಾಚಾರ ನಮ್ಮದು . ಪರಿವರ್ತನೆಯು ನಮ್ಮ ವ್ಯಕ್ತಿತ್ವದ ಸಮಗ್ರತೆಯ ಅವಲೋಕನದ ಆಶಯಗಳನ್ನು ಬಿಂಬಿಸಬೇಕು ಎಂದರು.ಉತ್ಸವದಲ್ಲಿ ಉಪನ್ಯಾಸಕ ಡಾ. ಡಿ.ಕೆ.ಗಾಂವ್ಕಾರ ಮಾತನಾಡಿ ಭೂಮಿಯನ್ನು ತಾಯಿ ಎಂದು ನಂಬಿ ಪೂಜಿಸುವ ಪರಂಪರೆ ನಮ್ಮದು. ತಾಯಿಯ ಮೂಲಕ ದೇಶಪ್ರೇಮದ ಸಂಘಟನೆ ಭಕ್ತಿ. ಆತ್ಮ ಸಂತೋಷಕ್ಕಾಗಿ ರಾಷ್ಟ್ರೀಯ ಕಲ್ಪನೆ ಮೂಡಬೇಕು. ಇಡೀ ದೇಶದ ರಕ್ಷಣೆಯ ಜವಾಬ್ದಾರಿ ನಮ್ಮದು. ಅಂತರಾಳದ ಸಂರಕ್ಷಣೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡುಗೆ ದೊಡ್ಡದು ಎಂದರು. ವಜ್ರಳ್ಳಿಯ ವಜ್ರೇಶ್ವರಿ ದೇವಸ್ಥಾನದವರೆಗೆ ರಾಷ್ಟ್ರೀಯ ಸ್ವಯಂಸೇವಕರ ಆಕರ್ಷಕ ಪಥಸಂಚಲನ ನಡೆಯಿತು.
ರಸ್ತೆಯುದ್ದಕ್ಕೂ ಸ್ಥಳೀಯರು ರಂಗೋಲಿ, ಹೂವಿನ ಅಲಂಕಾರ,ಪುಷ್ಪಾರ್ಚನೆಯೊಂದಿಗೆ ಪಥಸಂಚಲನವನ್ನು ಸ್ವಾಗತಿಸಿದರು.
What's Your Reaction?






