ಸುವರ್ಣ ಪಥ ಸಂಚಿಕೆ ವೀಕ್ಷಿಸಿದ ಆರ್ ವಿ ದೇಶಪಾಂಡೆ
ಆಪ್ತ ನ್ಯೂಸ್ ಜೋಯಿಡಾ:
ಜೋಯಿಡಾಕ್ಕೆ ಪ್ರಗತಿ ಪರಿಶೀಲನಾ ಸಭೆಗೆ ಶಾಸಕ ಆರ್ ವಿ ದೇಶಪಾಂಡೆ ಅವರು ಬಂದಾಗ ಅವರಿಗೆ ಸುವರ್ಣ ಸಂಭ್ರಮ ವಿಶೇಷಾಂಕ ಸಂಚಿಕೆ "ಸುವರ್ಣ ಪಥ"ವನ್ನು ಜೋಯಿಡಾ ತಾಲೂಕಿನ ಕಾರ್ಯನಿರತ ಪತ್ರಕರ್ತರು ನೀಡಿದರು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸ್ಥಾಪನೆಗೊಂಡು ಐವತ್ತು ವಸಂತಗಳು ಕಳೆದ ಹಿನ್ನೆಲೆಯಲ್ಲಿ ಜನವರಿ 28 ರಂದು ಹೊನ್ನಾವರದಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ಸುಂದರವಾಗಿ ನಡೆಯಿತು. ಅಂದಿನ ಕಾರ್ಯಕ್ರಮದಲ್ಲಿ ಶಾಸಕ ಆರ್ ವಿ ದೇಶಪಾಂಡೆ ಭಾಗವಹಿಸಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದ ಅವರು ಅಂದು ಬಂದಿರಲಿಲ್ಲ. ಅದರ ಸವಿನೆನಪಿಗಾಗಿ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ ಜೋಯಿಡಾ ತಾಲೂಕಾ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯರು ಗೌರವಯುತವಾಗಿ ಸುವರ್ಣ ಪಥ ಸಂಚಿಕೆ ನೀಡಿದರು.
ಸುವರ್ಣ ಪಥ ಸಂಚಿಕೆ ನೋಡಿದ ದೇಶಪಾಂಡೆ ಅವರು ಪುಟತಿರುವಿ ಅನೇಕ ಸಂದರ್ಭಗಳಲ್ಲಿ ತಾವು ಬಾಗವಸಿದ ಫೋಟೋಗಳನ್ನು ನೋಡಿ ಸಂತಸದ ಸಂದರ್ಭದ ನೆನಪು ಮಾಡಿದರು. ಜೊತೆಗೆ ಸಂಘ ಸ್ಥಾಪನೆಗೆ ಕಾರಣಿಕರ್ತರಾದ ಜಿ ಎಸ್ ಹೆಗಡೆ ಅಜ್ಜಿಬಳ ಅವರನ್ನು ಸ್ಮರಿಸಿದರು.
ಐವತ್ತು ವರ್ಷಗಳ ಹಿಂದಿನ ಫೋಟೊದಲ್ಲಿ ಅಜ್ಜಿಬಳರನ್ನು ಗುರುತಿಸಿ ನೋಡಿ ಉತ್ತಮ ಸಂಚಿಕೆ ಎಂದರು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಜೋಯಿಡಾ ಅಧ್ಯಕ್ಷ ಸಂದೇಶ ದೇಸಾಯಿ, ಜಿಲ್ಲಾ ಕಾರ್ಯದರ್ಶಿ ಅನಂತ ದೇಸಾಯಿ, ತಾಲೂಕಾ ಸಂಘದ ಟಿ ಕೆ ದೇಸಾಯಿ, ಹರೀಶ್ ಭಟ್ ಮತ್ತು ಸುಭಾಸ್ ಗಾವುಡಾ ಇದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



