ಸಂಕಲ್ಪೋತ್ಸವದಲ್ಲಿ ಸಾತೊಡ್ಡಿ ಹಾಗೂ ಬಿದ್ರೆಮನೆಗೆ ಸಂಕಲ್ಪ ಪ್ರಶಸ್ತಿ ಪ್ರದಾನ
ಆಪ್ತ ನ್ಯೂಸ್ ಯಲ್ಲಾಪುರ:
ಜೀವನ ಹಬ್ಬ ಸಂಸ್ಕೃತಿ ಸುಗ್ಗಿ ಸಂಕಲ್ಪ ಉತ್ಸವದಲ್ಲಿ ಇಂದು ನ.೨ ಸಂಜೆ ೪.೩೦ ರಿಂದ ಭಗವದ್ಗೀತೆ ಪಠಣ, ೪.೪೫ ರಿಂದ ಬೀಸಗೋಡ ವೀರಾಂಜನೇಯ ಮಹಿಳಾ ತಾಳಮದ್ದಲೆಕೂಟದಿಂದ ಲವ ಕುಶ ತಾಳಮದ್ದಲೆ, ೬ ರಿಂದ ಗಣಪತಿ ಹೆಗಡೆ ಗೋಪಿ ಹಡೀನಬಾಳು ಇವರಿಂದ ಮೋಕ್ಷದಾತ ಶ್ರೀರಾಮ ಹರಿಕೀರ್ತನೆ ೭ ಗಂಟೆಗೆ ಶಿರಳಗಿ ಭ್ರಹ್ಮಾನಂದ ಭಾರತೀ ಸ್ವಾಮೀಗಳವರ ವಾಶೀರ್ವಚನ ನಡೆಯಲಿದೆ.
ಶಾಸಕ ಸುನೀಲ್ ಕುಮಾರ್ ಕಾರ್ಕಳ, ದಿನಕರ ಶೆಟ್ಟಿ, ಭೀಮಣ್ಣ ನಾಯ್ಕ್, ಸುವರ್ಣ ನ್ಯೂಸ್ ನ ಪ್ರಶಾಂತ ನಾತು, ಕೆನರಾ ಎಕ್ಸ್ಲೆನ್ಸ್ ಸಂಸ್ಥೆಯ ಅಧ್ಯಕ್ಷ ಡಾ.ಜಿ.ಜಿ.ಹೆಗಡೆ ಕುಮಟಾ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಡಿಎಫ್ಓ ಹರ್ಷಬಾನು, ಸಹಕಾರಿ ಉಮೇಶ ಭಾಗ್ವತ್ ಪಾಲ್ಗೊಳ್ಳಲಿದ್ದಾರೆ. ರಾತ್ರಿ ೮ ರಿಂದ ಕವಿರತ್ನ ಕಾಳಿದಾಸ ಯಕ್ಷಗಾನ ನಡೆಯಲಿದೆ.
ಪತ್ರಿಕಾರಂಗ: ಸಾತೊಡ್ಡಿ, ಬಿದ್ರೆಮನೆಗೆ ಸಂಕಲ್ಪ ಪ್ರಶಸ್ತಿ ಪ್ರದಾನ.
ನರಸಿಂಹ ಸಾತೊಡ್ಡಿ:
ಮೂರುವರೆ ದಶಕಗಳ ಕಾಲ ಪತ್ರಿಕೋದ್ಯಮದಲ್ಲೇ ನಿರಂತರ ತೊಡಗಿಕೊಂಡವರು ನರಸಿಂಹ ಸಾತೊಡ್ಡಿ.ಬಳಗಾರಿನಲ್ಲಿ ಹುಟ್ಟಿ ಸಾತೊಡ್ಡಿಯಲ್ಲಿ ಬೆಳೆದು ಅದೇ ನಾಮಾಂಕಿತದಲ್ಲಿ ಇವತ್ತು ಗುರುತಿಸಿಕೊಂಡು ಇವತ್ತು ಎಲ್ಲರ ಪ್ರೀತಿಯ ಪಾತ್ರರಾಗಿದ್ದಾರೆ.ಕಾಳಿ ಕೊಳ್ಳದಿಂದ ನಿರಾಶ್ರಿತರಾಗಿ ಬೇಡ್ತಿಕೊಳ್ಳದ ತಟದಲ್ಲಿ ಬದುಕು ಪ್ರಾರಂಭಿಸಿದ ಅವರು ಕಷ್ಟದ ಕಾಲದಲ್ಲಿ ಶಿಕ್ಷಣದಿಂದ ವಂಚಿತರಾಗದೇ ಓದಿ ಸ್ನಾತಕೋತ್ತರ ಪಧವಿ ಪಡೆದುಕೊಂಡರು.ಕಾಲೇಜು ಮೆಟ್ಟಿಲೇರುತ್ತಿದ್ದಂತೆ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಅವರು ಅಂದಿನಿಂದ ಇವತ್ತಿನ ವರೆಗೂ ಅದೇ ಪ್ರವೃತ್ತಿಯಲ್ಲಿ ಸಾಗಿ ಬಂದಿದ್ದಾರೆ.ವಿದ್ಯಾರ್ಥಿಯಾಗಿರುವಾಗಲೇ ಕೊಡಸಳ್ಳಿ ಯೋಜನೆ ವಿರುಧ್ದದ ಹೋರಾಟದಲ್ಲಿ ಧುಮುಕಿದ ಅಂದಿನಿಂದ ಹೋರಾಟವನ್ನೇ ಬದುಕಾಗಿಸಿಕೊಂಡು ಬಂದಿದ್ದಾರೆ.ಮಾರಕ ಯೋಜನೆ ವಿರುಧ್ದ ಯಾವತ್ತು ಅವರ ಧ್ವನಿ ಗಟ್ಟಿಯಾಗಿರುತ್ತದೆ.ಪತ್ರಿಕಾ ಕ್ಷೇತ್ರದಲ್ಲೂ ತನ್ನದೇ ಆದ ವಿಶಿಷ್ಠ ಬರವಣಿಗೆ ಮೈಗೂಡಿಸಿಕೊಂಡವರು.ತನಿಖಾ ವರದಿ, ರಾಜಕೀಯ ವಿಶ್ಲೇಷಣೆ ವರದಿಯ ಮೂಲಕ ಜಿಲ್ಲೆಯಲ್ಲಿ ಮನೆಮಾತಾಗಿದ್ದಾರೆ.ಉತ್ತಮ ಪತ್ರಕರ್ತರ ಪ್ರೇರಣೆ ಮಾರ್ಗದರ್ಶನ ಪಡೆದುಕೊಂಡು ತರಂಗ, ದಂತಹ ನಾಡಿನ ಅನೇಕ ಹೆಸರಾಂತ ವಿವಿಧ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ.ಧ್ಯೇಯನಿಷ್ಠ ದ ಮೂಲಕ ನಿರ್ಭಿತ ವರದಿಗಾರಿಕೆಗೆ ಇಳಿದು ಸಾಗುತ್ತ ಎರಡು ದಶಕಗಳಿಂದ ನಾಡಿನ ಹೆಸರಾಂತ ಉದಯವಾಣಿ ಪತ್ರಿಕೆಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.ಬರವಣಿಗೆಯ ವಿಶಿಷ್ಠ ಶೈಲಿ ಮೂಲಕ ಗುರುತಿಸಿಕೊಂಡ ಇವರಿಗೆ ಪತ್ರಿಕೋಧ್ಯಮದಲ್ಲಿ ಕೊಡಮಾಡುವ ದಿ.ಅಜ್ಜಿಬಳ ದತ್ತಿನಿಧಿ ಪುರಸ್ಕಾರ ದೊರೆತಿದೆ.ಪರಿಸರ ಪ್ರಕೃತಿಯ ಮಡಿಲ ಸೇವೆ ಮಾಡುತ್ತ ಬದುಕನ್ನು ಈ ಕ್ಷೇತ್ರದಲ್ಲಿಯೂ ಶ್ರೀಗದಂತೆ ಸವಿಸಿದ ಇವರಿಗೆ ಶ್ರೀಗಂಧ ಹಾರ ಪ್ರಶಸ್ತಿಯ ಗೌರವವೂ ದೊರಕಿದೆ.ಭಾರತೀಯ ಕಿಸಾನ್ ಸಂಘ ಚಟುವಟಿಕೆ, ಶಾಲಾ ಆಡಳಿತ,ಪತ್ರಿಕಾ ಸಂಘದ ವಿವಿಧ ಹುದ್ದೆಗಳಲ್ಲಿ ಕಾಣಿಸಿಕೊಂಡಿದ್ದಾರೆ.ಪತ್ರಿಕೋಧ್ಯಮವನ್ನು ಉಸಿರಾಗಿಸಿಕೊಂಡು ಜನಮನ್ನಣೆಗೆ ಪಾತ್ರರಾಗಿ ಪತ್ರಿಕೋಧ್ಯಮವನ್ನು ನಿತ್ಯಕರ್ಮವಾಗಿಸಿಕೊಂಡು ಬದುಕು ಸಾಗಿಸಿಕೊಂಡು ಬಂದಿದ್ದಾರೆ.ಈ ನಿರಂತರತೆಯ ಸೇವೆಯೇ ಪತ್ರಿಕಾಕ್ಷೇತ್ರದಲ್ಲಿ ಅವರದ್ದೊಂದು ಮೈಲಿಗಲ್ಲು.ಮೂರುವರೇ ದಶಕದ ಪತ್ರಿಕಾರಂಗದಲ್ಲಿ ತೊಡಗಿಕೊಂಡು ಬಂದ ಇವರಿಗೆ ನಾಡಿನ ಹೆಸರಾಂತ ಸಂಕಲ್ಪ ಉತ್ಸವದಲ್ಲಿ ನ.೨ ಭಾನುವಾರ ಸಂಕಲ್ಪ ಪ್ರಶಸ್ತಿ" ಪ್ರಧಾನ ಮಾಡಲಾಗುತ್ತಿದೆ.
ಸುಬ್ರಾಯ ಬಿದ್ರೆಮನೆ:
ಗ್ರಾಮೀಣ ನೆಲೆಯ ಕವಿ, ಪತ್ರಕರ್ತ ಸುಬ್ರಾಯ ಬಿದ್ರೆಮನೆ ಕಳೆದ ಮೂರು ದಶಕಗಳಿಂದ ಬರಹದ ದಾರಿಯಲ್ಲಿ ತಮ್ಮದೇ ಆದ ಶೈಲಿಯ ಮೂಲಕ ಛಾಪು ಮೂಡಿಸಿದ್ದಾರೆ. ಕೃಷಿ ಪತ್ರಿಕೋದ್ಯಮ,ಸಾಹಿತ್ಯಿಕ ಚಟುವಟಿಕೆ ಬರವಣಿಗೆಯ ಇವರ ಆಸಕ್ತಿಯ ಕ್ಷೇತ್ರಗಳು.
ಯಾವುದೇ ಹೆಚ್ಚುಗಾರಿಕೆ ಇಲ್ಲದ ಸರಳತೆ,ಪ್ರೀತಿ ಆಪ್ತತೆಯ ಸ್ಪಂದನೆಯ ಒಡನಾಡಿಗಳು.
ಬಿದ್ರೆಮನೆ ಯಕ್ಷಗಾನ ಕಲೆಯ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದುಬಂದ ಇವರು ಕಲೆಯತ್ತ ವಾಳಿಲ್ಲ.ಯಕ್ಷಗಾನದ ಕುಟುಂಬದಿಂದಲೇ ಬಂದರೂ ಅಕ್ಷರದಾರಿಯ ಅರಸಿಹೊರಟ ಇವರಿಗೆ ಸಾಹಿತ್ಯಪ್ರೀತಿಯೇ ಎತ್ತರಕ್ಕೇರಿಸಿತು.
ಸಾಹಿತ್ಯದ ದಾರಿಯಲ್ಲಿ ಸಾಗಿದ ಇವರು 'ಬೇಲಿ' ಕಥಾಸಂಕಲನ,'ಮೌನದ ಮಾತು' ಕವನಸಂಕಲನ, 'ಬೊಗಸೆ ತುಂಬ ಪ್ರೀತಿ' ಹನಿಗವಿತೆ ಸಂಕಲನ, 'ಹೊಸ ಭಾವದ ತೇರು"ನೀಳ್ಗವಿತೆ ಸಂಕಲನ ಗಳನ್ನುಪ್ರಕಟಿಸಿದರು. ನುಡಿಚಿತ್ರ, ಸಂದರ್ಶನ, ಕಥೆ, ಕವಿತೆ ಸಂವೇದನಾಶೀಲ ಪರಿಸರ ಪ್ರೀತಿಯ ಕಾಳಜಿಯ ಬಿಂಬಿಸುವ ಸೇರಿದಂತೆ ಸಾವಿರಾರು ಬರಹಗಳನ್ನು ಪತ್ರಿಕೆಗಳಲ್ಲಿ ಬರೆದರು.
ತಾಲೂಕು, ಜಿಲ್ಲಾ ಮಟ್ಟಗಳ ನೂರಾರು ಕವಿಗೋಷ್ಠಿ, ಸಮ್ಮೇಳನಗಳಲ್ಲಿ ಭಾಗವಹಿಸಿದ ಇವರು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಉತ್ತರಕನ್ನಡವನ್ನು
ಪ್ರತಿನಿಧಿಸಿದ್ದರು. ಧಾರವಾಡ ಹಾಗೂ ಕಾರವಾರ ಆಕಾಶವಾಣಿಗಳಲ್ಲಿ ಕವಿತೆ, ಚಿಂತನ, ಯಕ್ಷಗಾನ ಸೇರಿದಂತೆ ಹಲವು ಕಾರ್ಯಕ್ರಮ ನೀಡಿದ್ದಾರೆ. ಸಂಕಲ್ಪ ಉತ್ಸವ, ಕದಂಬ ಉತ್ಸವ, ಕರಾವಳಿ ಉತ್ಸವ, ಮಲೆನಾಡು ಉತ್ಸವ, ಗಡಿನಾಡು ಉತ್ಸವಗಳಲ್ಲಿ ಪಾಲ್ಗೊಂಡಿದ್ದಾರೆ. ಪತ್ರಕರ್ತರಾಗಿ ಕಳೆದ ಎರಡುವರೆ ದಶಕಗಳಿಂದ ನಾಡಿನ ವಿವಿಧ ದಿನ ಪತ್ರಿಕೆಗಳಲ್ಲಿ ದೈನಂದಿನ ವರದಿಗಾರಿಕೆ ಮತ್ತು ಸಾಮಾಜಿಕ ಜಾಗೃತಿಯ ಬರಹಗಳ ಮೂಲಕ ಪ್ರಚಲಿತರಾಗಿದ್ದಾರೆ. ಇವರು ಕವಿತ್ವ, ಬರಹ, ವರದಿಗಾರಿಕೆಯೊಂದಿಗೆ ಸಾಗಿ ಬಂದಿದ್ದಾರೆ. ಇವರ ಅಕ್ಷರಸೇವೆಯನ್ನು ಗುರುತಿಸಿದ ಸಂಕಲ್ಪ ಸಂಸ್ಥೆ ಸಂಕಲ್ಪೋತ್ಸವದಲ್ಲಿ ಈದಿನ "ಸಂಕಲ್ಪ ಪ್ರಶಸ್ತಿ"ಪ್ರಧಾನ ಮಾಡಲಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



