ಖಾನಗಾಂವ ಶಾಲೆಯಲ್ಲಿ ಸರಸ್ವತಿ ಪೂಜೆ ಯಶಸ್ವಿ ಸಂಪನ್ನ
ಆಪ್ತ ನ್ಯೂಸ್ ಜೋಯಿಡಾ:
ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಂಜೋಯಿಡಾ ಗ್ರಾಮದ ಕರಂಜೋಯಿಡಾ ಗ್ರಾಮದ ಖಾನಗಾಂವ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ದೀಪಾವಳಿಯ ಹಬ್ಬದ ನಿಮಿತ್ತ ಸರಸ್ವತಿ ಪೂಜಾ ಕಾರ್ಯಕ್ರಮ ಯಶಸ್ವಿ ಸಂಪನ್ನಗೊಂಡಿತು.
ನಿಸರ್ಗದ ವಸ್ತುಗಳಿಂದ ಮಾಡಿದ ಮಂಟಪದಲ್ಲಿ ವಿದ್ಯಾ ದೇವತೆಯಾದ ಸರಸ್ವತಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಭಕ್ತಿ,ಭಾವದಿಂದ ಆರತಿ, ಭಜನೆಯನ್ನು ಮಾಡಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು,ಪಾಲಕರು,ಪೋಷಕರು,ಊರಿನ ಹಿರಿಯರು, ಮಾತೆಯರು,ಗಣ್ಯರು,ಶಿಕ್ಷಣ ಪ್ರೇಮಿಗಳು,ಶಾಲೆಯ ಮಕ್ಕಳು, ಶಿಕ್ಷಕರು ಇದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



