ಶಿರಸಿಯಲ್ಲಿ ನ.೧೧ ರಂದು ಸಮಾಲೋಚನೆ ಸಭೆ : ಸರ್ಕಾರದ ಆದೇಶ ಅರಣ್ಯ ಅಧಿಕಾರಿಯಿಂದ ಉಲ್ಲಂಘನೆ: ಒಕ್ಕಲೆಬ್ಬಿಸುವ ಪ್ರಕ್ರಿಯೆ ಸ್ಥಗಿತಕ್ಕೆ ಆಗ್ರಹ - ರವೀಂದ್ರ ನಾಯ್ಕ
ಆಪ್ತ ನ್ಯೂಸ್ ಕಾರವಾರ:
ಕಾನೂನು ಮತ್ತು ಸರ್ಕಾರದ ಆದೇಶ ಉಲ್ಲಂಘಿಸಿ, ರಾಜ್ಯದಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಮತ್ತು ಆದೇಶ ಜರುಗುತ್ತಿದೆ. ಕಾನೂನು ಉಲ್ಲಂಘನೆ ಮಾಡಿ ಅರಣ್ಯವಾಸಿಯನ್ನು ಹಿಂಸಿಸುವ ಅರಣ್ಯಾಧಿಕಾರಿಯ ತಪ್ಪು ನೀತಿಯಿಂದ ಅರಣ್ಯವಾಸಿಗಳಿಗೆ ಅನ್ಯಾಯ ಜರುಗುತ್ತಿದ್ದು, ಈ ಹಿನ್ನಲೆಯಲ್ಲಿ ಶಿರಸಿಯಲ್ಲಿ ನಂ.೧೧ ರಂದು ಸಮಾಲೋಚನೆ ಸಭೆ ಜರುಗಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವಿಂದ್ರ ನಾಯ್ಕ ಹೇಳಿದರು.
ಅವರು ಇಂದು ದಿ.೮ ರಂದು ಕಾರವಾರ ಪತ್ರಿಕಾ ಭವನದಲ್ಲಿ ವಿವಿಧ ಅರಣ್ಯಾಧಿಕಾರಿಗಳು ಕಾನೂನುಬಾಹಿರ ಒಕ್ಕಲೆಬ್ಬಿಸುವ ಪ್ರಕ್ರಿಯೆ ಹಾಗೂ ಒಕ್ಕಲೆಬ್ಬಿಸುವಿಕೆಯ ಆದೇಶದ ಪ್ರತಿಯನ್ನು ಪ್ರದರ್ಶೀಸುತ್ತಾ ಮೇಲಿನಂತೆ ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವ ಕಾನೂನು ಪ್ರಕ್ರಿಯೆ ಚಟುವಟಿಕೆ ಮತ್ತು ಸಾಗುವಳಿಗೆ ಆತಂಕ ಗೊಳಿಸಬಾರದು ಹಾಗೂ ಅರ್ಜಿ ಪರಿಶೀಲನಾ ಪ್ರಕ್ರಿಯೆ ಪೂರ್ಣ ಆಗುವವರೆಗೆ ಅದೀಬೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸತಕ್ಕದ್ದಲ್ಲ ಅಥವಾ ಯಾವೂದೇ ಪ್ರಕ್ರಿಯೆ ಜರುಗಿಸದಂತೆ ನಿರ್ದೇಶನ ನೀಡದ್ದಾಗ್ಯೂ ಅರಣ್ಯಾಧಿಕಾರಿಗಳು ರಾಜ್ಯಾದ್ಯಂತ ಸರ್ಕಾರದ ಆದೇಶ ಮತ್ತು ಕಾನೂನು ನಿರ್ಲಕ್ಷಿಸುವುದನ್ನು ಪ್ರಭಲವಾಗಿ ಖಂಡಿಸಿದರು.
ಸರ್ಕಾರವು ಅರಣ್ಯ ಒತ್ತುವರಿ ಮತ್ತು ಅರ್ಜಿದಾರನ ಪಟ್ಟಾ ಭೂಮಿ ಸೇರಿ ೩.೦೦ ಎಕರೆಗಿಂತ ಕಡಿಮೆ ಇರುವ ಒತ್ತುವರಿದಾರರನ್ನು ಮುಂದಿನ ಸೂಚನೆವರೆಗೆ ಒಕ್ಕಲೆಬ್ಬಿಸಬಾರದು ಹಾಗೂ ಎಪ್ರೀಲ್ ೨೭,೧೯೭೮ ರ ನಂತರ ೩.೦೦ ಎಕರೆವರೆಗೆ ಅರಣ್ಯ ಒತ್ತುವರಿ ಮಾಡಿರುವಂತ ಒತ್ತುದಾರರಿಗೆ ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆ ಪ್ಯಾಕೇಜ್ ಕಲ್ಪಿಸವ ಬಗ್ಗೆ ಸರ್ಕಾರದ ಹಂತದಲ್ಲಿ ಪರಿಶೀಲಿಸಲಾಗುವುದೆಂಬ ಸ್ಪಷ್ಟ ಸುತ್ತೋಲೆ ನೀಡಿದ್ದಾಗ್ಯೂ, ಕಾನೂನು ಬಾಹಿರ ಕೃತ್ಯ ಪದೇ ಪದೇ ಅರಣ್ಯಾಧಿಕಾರಿಗಳು ರಾಜ್ಯದಲ್ಲಿ ಪುನರಾವರ್ತನೆ ಜರುಗುತ್ತಿರುವ ಕುರಿತು ವಿಷಾದÀ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಸಹಿತ ಅರಣ್ಯ ಹಕ್ಕು ಜಾರಿ, ಮಂಜೂರಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಅರಣ್ಯವಾಸಿಗಳಿಗೆ ಆತಂಕಗೊಳ್ಳಿಸದAತೆ ರಾಜ್ಯ ಅರಣ್ಯ ಭೂಮಿ ಹಕ್ಕು ಉಸ್ತುವಾರಿ ಹಾಗೂ ಮುಖ್ಯಕಾರ್ಯದರ್ಶಿ ಅವರಿಗೆ ಎಪ್ರೀಲ್ ೧೦, ೨೦೧೫ ರಂದು ಲಿಖಿತ ನಿರ್ದೆಶನ ನೀಡಿದ್ದನ್ನು ರಾಜ್ಯದಲ್ಲಿ ಅರಣ್ಯಾಧಿಕಾರಿಗಳು ಪರಿಗಣಿಸದೇ ಇರುವುದು ಖೇದಕರವೆಂದು ಅವರು ತಿಳಿಸಿದರು.
ಅರಣ್ಯ ಇಲಾಖೆಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ:
ಅರಣ್ಯ ಹಕ್ಕು ಕಾಯಿದೆಯಲ್ಲಿನ ಅರ್ಜಿಗಳ ಮೇಲೆ ನೊಡಲ್ ಅಜೆನ್ಸಿ, ಸರ್ಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನ ವಿನಃ ಅರಣ್ಯ ಇಲಾಖೆಗೆ ಅರಣ್ಯ ಹಕ್ಕು ಕಾಯಿದೆಗೆ ಸಂಬAಧಿಸಿದ ಅಂಶಗಳ ಕುರಿತು ಅರ್ಜಿಗಳು ವಿಚಾರಣಾ ಹಂತದಲ್ಲಿ ಹಸ್ತಕ್ಷೇಪ ಮಾಡಲು ಅರಣ್ಯ ಇಲಾಖೆಗೆ ಅವಕಾಶವಿರುವುದಿಲ್ಲ. ಅರ್ಜಿ ಪರಿಶೀಲನಾ ಪ್ರಕ್ರಿಯೆ ಆಗುವವರೆಗೆ, ಒಕ್ಕಲೆಬ್ಬಿಸಬಾರದು ಎಂಬ ಸ್ಪಷ್ಟ ನಿರ್ಧೇಶನವಿದ್ದಾಗ, ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸುವ ಔಚಿತ್ಯವನ್ನು ಅವರು ಅರಣ್ಯ ಇಲಾಖೆಗೆ ಪ್ರಶ್ನಿಸಿದರು.
ನಮ್ಮದೂ ಸರೀನೋ.. ನಿಮ್ಮದೂ ಸರಿಯೋ ..?
ಕಾನೂನಾತ್ಮಕ ಅಂಶಗಳನ್ನ ಸ್ಪಷ್ಟೀಕರಿಸುವ ಕುರಿತು ಹೋರಾಟಗಾರರ ವೇದಿಕೆಯು ನ.೧೧ ಮುಂಜಾನೆ ೧೦.೩೦ ಗಂಟೆಗೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೆನರಾ ಸರ್ಕಲ್ ಶಿರಸಿ ಕಛೇರಿಯಲ್ಲಿ ಸೌಹಾರ್ಧಯುತ ಸಮಾಲೋಚನೆ ಸಭೆ ಜರುಗಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಯಕ ಇಬ್ರಾಹೀಂ ಗೌಡಳ್ಳೀ, ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗನೂರು, ರಾಜೇಶ್ ಮಿತ್ರ ನಾಯ್ಕ ಸಂಚಾಲಕ, ಅಮೋಜ್ , ಕಾಂಚನ ದೇಸಾಯಿ, ಕೆಂಚಲಯ್ಯ, ಮಾಬ್ಲೇಶ್ವÀವರ ಹೊನ್ನಳಕರ್ ಉಳವಿ, ಪ್ರಕಾಶ್ ಕೃಷ್ಣ ಆಚಾರಿ ಮತ್ತು ಪುಷ್ಪಾ ಆಚಾರಿ ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



