ಶಿರಸಿ ಪೊಲೀಸರ ಕಾರ್ಯಾಚರಣೆ: 13 ಲಕ್ಷ ರೂ. ಮೌಲ್ಯದ ಬಂಗಾರ ಕಳವು ಪ್ರಕರಣ ಭೇದಿಸಿ ಅಂತರಾಜ್ಯ ಕಳ್ಳರ ಬಂಧನ
ಆಪ್ತ ನ್ಯೂಸ್ ಶಿರಸಿ:
ಗಮನವನ್ನು ಬೇರೆಡೆ ಸೆಳೆದು ಬಂಗಾರದ ಅಂಗಡಿಯಿಂದ ಲಕ್ಷಾಂತರ ಮೌಲ್ಯದ ಆಭರಣಗಳನ್ನು ಅಪಹರಿಸಿದ್ದ ಅಂತರಾಜ್ಯ ಕಳ್ಳರ ತಂಡವನ್ನು ಶಿರಸಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಸುಮಾರು ₹13 ಲಕ್ಷ ಮೌಲ್ಯದ ಬಂಗಾರದ ಆಭರಣ ಕಳವು ಪ್ರಕರಣವನ್ನು ಭೇದಿಸಿದ್ದಾರೆ.
ಬುರ್ಖಾಧಾರಿಗಳಾಗಿ ಬಂದು ಕಳ್ಳತನ
2025 ಡಿಸೆಂಬರ್ 16ರಂದು ಶಿರಸಿಯ ನಟರಾಜ ರಸ್ತೆಯ ಚಿಲುಮೆಕೆರೆ ಎದುರಿರುವ ಶ್ರೀ ದುರ್ಗಾ ಜ್ಯುವೆಲರಿ ವರ್ಕ್ಸ್ ಅಂಗಡಿಗೆ ಬುರ್ಖಾ ಧರಿಸಿ ಬಂದ ಕಳ್ಳರು, ಅಂಗಡಿಯ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆದು ಸುಮ್ಮನೆ ನೋಡುತ್ತಲೇ ಸುಮಾರು 13 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಅಂತರಾಜ್ಯ ಕಳ್ಳರ ಬಂಧನ
ಘಟನೆಯ ನಂತರ ತ್ವರಿತ ಕಾರ್ಯಪ್ರವೃತ್ತರಾದ ಶಿರಸಿ ನಗರ ಠಾಣೆ ಪೊಲೀಸರು ತನಿಖೆ ತೀವ್ರಗೊಳಿಸಿ, ಆಂಧ್ರಪ್ರದೇಶ ಮೂಲದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿತರನ್ನು:
-
ಅರ್ಷಿಯಾ ಅಲಿಯಾಸ್ ಖತೀಜಾ ಹುಸೇನ್ ಸಾಬ್
-
ಹಮೀದಾಬಿ ಸುಬಾನ್ ಸಾಬ್
-
ಸಲ್ಮಾ ಅಲಿಯಾಸ್ ಅಣ್ಣಮ್ಮ ಬಾಷಾ ಸಾಬ್
-
ಬಾಷಾ ಸಾಬ್ ನ್ಯನೇಸಾಬ್
ಎಂದು ಗುರುತಿಸಲಾಗಿದೆ.
ಬಂಗಾರ ಮತ್ತು ನಗದು ವಶ
ಬಂಧಿತರಿಂದ 28.078 ಗ್ರಾಂ ಬಂಗಾರದ ಆಭರಣಗಳು ಹಾಗೂ ₹40,000 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಆಭರಣಗಳ ಪತ್ತೆಗೆ ಮುಂದುವರಿದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ತಂಡದ ಶ್ಲಾಘನೀಯ ಕಾರ್ಯ
ಈ ಯಶಸ್ವಿ ಕಾರ್ಯಾಚರಣೆ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟಿಲ್ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಶಶಿಕಾಂತ ವರ್ಮಾ ಅವರ ಮೇಲ್ವಿಚಾರಣೆಯಲ್ಲಿ, ಹಾಗೂ ಪಿಎಸ್ಐಗಳಾದ ನಾಗಪ್ಪ ಬಿ ಮತ್ತು ನಾರಾಯಣ ರಾಠೋಡ ಅವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರಾಮಯ್ಯ ಪೂಜಾರಿ, ಸದ್ದಾಂ ಹುಸೇನ್, ಹನುಮಂತ ಮಕಾಪುರ, ಚನ್ನಬಸಪ್ಪ ಕ್ಯಾರಕಟ್ಟಿ, ಸುನಿಲ್ ಹಡಲಗೆ ಸೇರಿದಂತೆ ಹಲವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



