ಸುನೀಲ್ ಹೊನ್ನಾವರಗೆ ರಾಷ್ಟ್ರೀಯ ವನ್ಯ ಜೀವಿ ರಕ್ಷಕ ರತ್ನ ಪ್ರಶಸ್ತಿ

Dec 22, 2025 - 08:13
 0  42
ಸುನೀಲ್ ಹೊನ್ನಾವರಗೆ ರಾಷ್ಟ್ರೀಯ ವನ್ಯ ಜೀವಿ ರಕ್ಷಕ ರತ್ನ ಪ್ರಶಸ್ತಿ
ಆಪ್ತ ನ್ಯೂಸ್‌ ಶಿರಸಿ:
ಜಿಲ್ಲೆಯ ಪಾಳಾ ಶಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿರುವ ಸುನೀಲ್ ಆರ್. ಹೊನ್ನಾವರ ಅವರಿಗೆ ಗೋವಾದ ಮಡಗಾಂವನಲ್ಲಿ ಇತ್ತೀಚೆಗೆ ಜರುಗಿದ ರಾಷ್ಟ್ರ ಮಟ್ಟದ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ವನ್ಯ ಜೀವಿ ರಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
“ನೆನಪು ಫಾಂಡೇಶನ್ (ರಿ) ಕರ್ನಾಟಕ ಹಾಗೂ ಚಿರಾಯು ಕನ್ನಡ ವಾಹಿನಿ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲೆಯ ಸಿದ್ದಾಪುರದ ಸಮಾಜಿಕ ಸೇವಾಕಾರ್ಯಕರ್ತ ಇಲಿಯಾಸ ಇಬ್ರಾಹಿಂ ಸಾಬ ವಹಿಸಿದ್ದರು. ಪರಮಪೂಜ್ಯ ಮಲ್ಲಿಕಾರ್ಜುನ ಮುತ್ಯಾ ಅವರ ಸಾನಿಧ್ಯದಲ್ಲಿ. ಉದ್ಯಮಿಗಳಾದ ಕುಂದಗೋಳದ ವೈ.ಎನ್ ಪಲ್ಯದ್ ಹಾಗೂ ರಾಜ್ಯ/ ವಿವಿಧ ಜಿಲ್ಲೆಗಳ ಗಣ್ಯರು ಸಮ್ಮುಖದಲ್ಲಿ ಸುನಿಲ್ ಹೊನ್ನಾವರರವರಿಗೆ ಪ್ರಶಸ್ತಿಯನ್ನು ನೀಡಿ ಗೌರವ ಸಮರ್ಪಿಸಲಾಯಿತು.
ಸಿದ್ದಾಪುರದ ಶಿಕ್ಷಕಿ ರೀಟಾ ಡಿಸೋಜಾ, ರಾಜೀವ ಶಾನಬಾಗ ಮೋಹನ ಪಟಗಾರ, ಪ್ರಕಾಶ ಮೌರ್ಯ ಸೇರಿದಂತೆ ಇನ್ನು ಹಲವಾರು ಜನರು ಗೋವಾದಲ್ಲಿ ನಡೆದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಕುಂದಗೋಳ ಚಿರಾಯು ವಾಹಿನಿಯ ಮಂಜುನಾಥ ಶಿವಕ್ಕನವರ ನೇತೃತ್ವದಲ್ಲಿ ಈ ಸಮ್ಮೇಳನ ನಡೆಯಿತು.
ಸುನಿಲ್ ಹೊನ್ನವರರವರು ತಾಲೂಕಿನ ಹುಲೇಕಲ್ ವಲಯದ ವಾನಳ್ಳಿಯಲ್ಲಿ ೨೦೦೧ ರಿಂದ ಅರಣ್ಯ ರಕ್ಷಕರಾಗಿ ಕರ್ತವ್ಯ ಆರಂಭಿಸಿದ ಇವರು ೨೦೧೨ರಲ್ಲಿ ಬಡ್ತಿಹೊಂದಿ ಉಪವಲಯ ಅರಣ್ಯ ಅಧಿಕಾರಿಯಾಗಿ ಬನವಾಸಿ ವಲಯದ ದಾಸನಕೊಪ್ಪ/ ಎಕ್ಕಂಬಿ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ೨೦೨೪ರಿಂದ ಕಾತೂರ ವಲಯದ ಪಾಳ ಶಾಖೆಯಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಸುಮಾರು ಇದುವರೆಗು ಮೂರು ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಹಾವುಗಳನ್ನು ರಕ್ಷಿಸಿದ್ದಾರೆ.
ಇವರ ಈ ನೀಸ್ವಾರ್ಥ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ವನ್ಯ ಜೀವಿ ರಕ್ಷಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ ಎಂದು ಜಿಲ್ಲೆಯ ಕ್ಷತ್ರಿಯ ಮರಾಠಾ ಸಮುದಾಯದ ಮುಖಂಡ ಪಾಂಡರಂಗ ಪಾಟೀಲ್ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0