ವಿಯೆಟ್ನಾಮಲ್ಲಿ ಚಿನ್ನ ಗೆದ್ದ ಕುಮಾರಿ ತನ್ಮಯಿ ಮತ್ತು ಸಂಗಡಿಗರು

Nov 19, 2025 - 16:30
 0  35
ವಿಯೆಟ್ನಾಮಲ್ಲಿ ಚಿನ್ನ ಗೆದ್ದ ಕುಮಾರಿ ತನ್ಮಯಿ ಮತ್ತು ಸಂಗಡಿಗರು
ಆಪ್ತ ನ್ಯೂಸ್‌ ಶಿರಸಿ:
ನವೆಂಬರ್ ೬ರಂದು ವಿಯೆಟ್ನಾಂನ ಮನೋಯಿಯಲ್ಲಿ ನಡೆದ India’s International Groove Fest 2025 ಡಾನ್ಸ ಸ್ಪರ್ಧೆಯಲ್ಲಿ ಗೆದ್ದು ಕುಮಾರಿ ತನ್ಮಯಿ ಮತ್ತು ತಂಡ ಪ್ರಥಮ ಸ್ಥಾನಕ್ಕೆ ಆಯ್ಕೆಯಾಗಿ ಬಂಗಾರದ ಪದಕ ಮತ್ತು ೩ ಲಕ್ಷ ರೂ ಪಡೆದರು. ಈ ತಂಡದ ಹೆಸರು Zuri Blaze. ಜಗತಿನಾದ್ಯಂತ ೨೦+ ರಾಷ್ಟ್ರಗಳಿಂದ ೨೩೫೦+ ಸ್ಪರ್ದಿಗಳು ಈ ಡಾನ್ಸ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 


ಕಾರ್ಯಕ್ರಮದ ಸಂಘಟಕರಾದ ಸಜೀದ ಭಾಯಿಯವರು ೧೩ ಸದಸ್ಯರಿರುವ ತನ್ಮಯಿ ತಂಡದ ಪ್ರತಿಯೊಬ್ಬರಿಗೂ ೫ ಲಕ್ಷ ರೂ ನಗದು ಬಹುಮಾನ ಕೊಡುವದಾಗಿ ಘೋಷಿಸಿದರು.

ಜಗತ್ತಪ್ರಸಿದ್ಧ ಕೋರಿಯೋಗ್ರಾಫರ್ ಫುಲ್ಲಾವ ಕಾಮಕರ್ ಮತು ವೈಭವ ಘುಗೆ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. IIGF ಸಂಸ್ಥಾಪಕಿ ಮೇಘಾ ಸಂಪತಿ ಕೂಡ ಭಾಗವಹಿಸಿದ್ದರು. Padnyaas Entertainment ತುಂಬಾ ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

ಓಮನಲ್ಲಿ ಪ್ರಸಿದ್ಧ ಕೋರಿಯೋಗ್ರಾಫರ್ ಡೆಲಿಶಸ್ ಸಹದೇವನ್ ಹರ್ಷಲ್ ಹಾಗೂ ನಿಕ್ಸನ್ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದರು.



ಕರಾಟೆಯಲ್ಲೂ, ಓದಿನಲ್ಲೂ ಮುಂದಿರುವ ಕುಮಾರಿ ತನ್ಮಯಿ ಮಸ್ಕತಲ್ಲಿ ೮ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈಗಾಗಲೇ ಮಸ್ಕತಲ್ಲಿ ಹಲವಾರು ಪದಕ ಪಡೆದು ಸಾಕಷ್ಟು ಜನಪ್ರಿಯತೆ ಗಳಿಸಿರುವ ತನ್ಮಯಿ, ರೇಖಾ ಭಟ್ ಮತ್ತುಸತ್ಯನಾರಾಯಣ ಭಟ್ ದಂಪತಿ ಮಗಳು. ಇವರು ಉದ್ಯೋಗದಲ್ಲಿದ್ದು ಸದ್ಯ ಮಸ್ಕತಲ್ಲಿ ವಾಸವಾಗಿದ್ದಾರೆ.

ಶಿರಸಿಯಲ್ಲಿ ನೆಲೆಸಿರುವ ಪ್ರಭಾ ಭಟ್ ಹಾಗೂಕೆ,ವಿ.ಭಟ್ ದಂಪತಿ ಮೊಮ್ಮಗಳ ಸಾಧನೆಯನ್ನು ಕೊಂಡಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0