ಅಡಿಕೆಯಿಂದ ಹೋಯ್ತು ಶಿಕ್ಷಕನ ಮಾನ
ಆಪ್ತ ನ್ಯೂಸ್ ಯಲ್ಲಾಪುರ:
ಯಲ್ಲಾಪುರದ ಪ್ರಸಿದ್ಧ ಗಾಯಕ ಹಾಗೂ ಉಮ್ಮಚ್ಗಿಯ ಶಿಕ್ಷಕರೊಬ್ಬರ ಮೇಲೆ ಅಡಿಕೆ ಕಳ್ಳತನ ಮಾಡಿದ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ ಈ ಶಿಕ್ಷಕರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಿಕ್ಷಕರ ಸಹೋದರರರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ.
ಯಲ್ಲಾಪುರ ತಾಲೂಕಿನ ಉಮ್ಮಚ್ಗಿಯ ಶಿಕ್ಷಕರಾಗಿರುವ ನಾಗಭೂಷಣ ಗಣಪತಿ ಹೆಗಡೆ ಅವರ ಸಹೋದರರ ತೋಟದಲ್ಲಿಯೇ ಅಡಿಕೆ ಕದ್ದು ಸಿಕ್ಕಿ ಬಿದ್ದಿದ್ದು, ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಅಲ್ಲದೇ ನಾಗಭೂಷಣ ಹೆಗಡೆ ಅವರಿಂದ ಜೀವ ಬೆದರಿಕೆಯಿರುವ ಬಗ್ಗೆ ಅವರ ಸಹೋದರರು ದೂರು ನೀಡಿದ್ದಾರೆ.
ಏನಿದು ಪ್ರಕರಣ?
ನಾರಾಯಣ ಗಣಪತಿ ಹೆಗಡೆಯಲ್ಲಾಪುರದ ಕಾನಗೋಡಿನ ಬಾಳೆಹದ್ದದಲ್ಲಿ ವಾಸವಾಗಿದ್ದಾರೆ. ಅವರ ತೋಟದಲ್ಲೇ ಅಡಿಕೆ ಕಳ್ಳತನ ನಡೆದಿರುವುದು ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಉಮ್ಮಚ್ಗಿಯಲ್ಲಿರುವ ನಾಗಭೂಷಣ ಗಣಪತಿ ಹೆಗಡೆ ಹಾಗೂ ಮಂಜುನಾಥ ಗಣಪತಿ ಹೆಗಡೆ ಇವರುಗಳೇ ಅಡಿಕೆಯನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲ, ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ ಎನ್ನುವುದು ಪ್ರಮುಖ ಆರೋಪ.
ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ,ನಾಗಭೂಷಣ ಗಣಪತಿ ಹೆಗಡೆ ಹಾಗೂ ಮಂಜುನಾಥ ಗಣಪತಿ ಹೆಗಡೆ ಸೇರಿ ನವೆಂಬರ್ 16ರಂದು ಯಲ್ಲಾಪುರ ತಾಲೂಕಿನ ಬಾಳೆಹದ್ದ ಕಾನಗೋಡು ಗ್ರಾಮದ ಸರ್ವೇ ನಂ 56/1ರಲ್ಲಿರುವ ಅಡಿಕೆ ತೋಟಕ್ಕೆ ಪ್ರವೇಶಿಸಿ ಅಡಿಕೆ ಕೊಯ್ದಿದ್ದಾರೆ.
ಜೊತೆಗೆ ಟಾಟಾ ಎಸ್ ವಾಹನದ ಮೂಲಕ ಅದನ್ನು ಸಾಗಿಸುವಾಗ ಸಹೋದರರರು ಇದನ್ನು ತಡೆದು ಪ್ರಶ್ನಿಸಿದ್ದಾರೆ. ಆಗ ಸಹೋದರ ನಾರಾಯಣ ಹೆಗಡೆ ಅವರಿಗೆ ನಾಗಭೂಷಣ ಹೆಗಡೆ ಅವರು `ಬೋ.. ಮಗ' ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ.. `ನೀನು ಯಾರಿಗೆ ಹುಟ್ಟಿದ್ದೀಯಾ ಎಂದು ಗೊತ್ತಿಲ್ಲ' ಎಂದು ಬೈದಿದ್ದಾರೆ.. ಜೊತೆಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಸಹೋದರರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಒಟ್ಟಿನಲ್ಲಿ ಅಡಿಕೆಯಿಂದಾಗಿ ಶಿಕ್ಷಕರು ಹಾಗೂ ಪ್ರಸಿದ್ಧ ಗಾಯಕರ ಮಾನಕ್ಕೆ ಕುಂದು ಬಂದಂತಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



