ಶಿಕ್ಷಕಿ ಪ್ರೇಮಾವತಿ ಕೃಷ್ಣ ಭಟ್ಟರಿಗೆ ಶಿಕ್ಷಕ ರತ್ನ ರಾಜ್ಯಪ್ರಶಸ್ತಿ
ಆಪ್ತ ನ್ಯೂಸ್ ಯಲ್ಲಾಪುರ:
ಮಂಗಳೂರಿನ ಕಥಾ ಬಿಂದು ಪ್ರಕಾಶನ ಕೊಡುವ ರಾಜ್ಯಮಟ್ಟದ ಶಿಕ್ಷಕ ರತ್ನ ರಾಜ್ಯಪ್ರಶಸ್ತಿಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾನಗೋಡದ ಶಿಕ್ಷಕಿ ಪ್ರೇಮಾವತಿ ಕೃಷ್ಣ ಭಟ್ಟ ಇವರಿಗೆ ಲಭಿಸಿದೆ.
27 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಇವರು ಮಕ್ಕಳ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರಲ್ಲದೇ, ಪ್ರತಿಭಾ ಕಾರಂಜಿ ದೇಶಭಕ್ತಿಗೀತೆ ಮತ್ತು ಕಂಠಪಾಠ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿಯೂ ವಿಜೇತರಾಗಲು ಮಕ್ಕಳಿಗೆ ಮಾರ್ಗದರ್ಶನ ನೀಡಿ ಕಾರಣರಾಗಿದ್ದಾರೆ. ಅಲ್ಲದೇ ನಲಿ-ಕಲಿ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನೂ ಪಡೆದವರಾಗಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



