ಅ.12 ರಂದು ತೃತೀಯ ವರ್ಷದ ಓಪನ್ ರಾಪಿಡ್ ಚೆಸ್ ಟೂರ್ನಮೆಂಟ್

ಆಪ್ತ ನ್ಯೂಸ್ ಯಲ್ಲಾಪುರ:
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿಯ ಆಶ್ರಯದಲ್ಲಿ ತೃತೀಯ ವರ್ಷದ ಓಪನ್ ರಾಪಿಡ್ ಚೆಸ್ ಟೂರ್ನಮೆಂಟ್ ಪಟ್ಟಣದ ಎಪಿಎಂಸಿ ರೈತಸಭಾಭವನದಲ್ಲಿ ಅ.12 ರಂದು ಬೆಳಗ್ಗೆ 10.30 ರಿಂದ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ತಿಳಿಸಿದರು.
ಅವರು ರವಿವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದರು.ಬೆಳಿಗ್ಗೆ ೧೦.೩೦ ಕ್ಕೆ ಹೆಸ್ಕಾಂ ಅಧ್ಯಕ್ಷ ಸೈಯ್ಯದ್ ಅಜೀಮಪೀರ್ ಖಾದ್ರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್, ಹೆಸ್ಕಾಂ ತಾಂತ್ರಿಕ ನಿರ್ದೇಶಕ ಎಸ್ ಜಗದೀಶ್, ಡಿ ಎಫ್ ಒ ಹರ್ಷಭಾನು, ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರದ ಸಾಧಕರಾದ ರಾಘವೇಂದ್ರ ಕೋಟೆಮನೆ, ಜಯರಾಮ ಸಿದ್ದಿ, ಮಹೇಶ ನಾಯ್ಕ, ನಾಗೇಶ ಕೆ ಭಾಗ್ವತ್, ರಾಮು ನಾಯ್ಕ ಮುರಳಿ ಹೆಗಡೆ, ಜಪ್ಪುಲ್ಲಾ ಖಾನ್, ಎಂ ಜಗದೀಶ, ವೈ ಎಸ್ ಗೋಕುಲ್, ವೆಂಕಟೇಶ ನಾಯ್ಕ,ಮಂಜುನಾಥ ಅರೆಗುಳಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸಾಯಂಕಾಲ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಎಂ ಎಲ್ ಸಿ ಶಾಂತಾರಾಮ ಸಿದ್ದಿ ಬಹುಮಾನ ವಿತರಿಸಲಿದ್ದಾರೆ. ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಅಭಿನಂಧನಾ ಮಾತನಾಡಲಿದ್ದಾರೆ. ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಮೂರನೇಯ ಆವೃತ್ತಿಯ ಓಪನ ರಾಪಿಡ್ ಚೆಸ್ ಪಂದ್ಯಾವಳಿ ಮೂರು ವಿಭಾಗಳಲ್ಲಿ ಆಯೋಜಿಸಲಾಗಿದೆ. 12 ವರ್ಷ, 16 ವರ್ಷ,ದ ಒಳಗೆ ಹಾಗೂ 16 ವರ್ಷ ಮೇಲ್ಪಟ್ಟವರಿಗೆ ಈ ಪಂದ್ಯಾವಳಿಯಲ್ಲಿ 53 ಟ್ರೋಪಿಗಳನ್ನು ವಿಜೇತರಿಗೆ ವಿತರಿಸಲಾಗುವುದು. 8 ವರ್ಷ ವಯೊಮೀತಿಯ ಬಾಲಕರಿಗೆ 5 ಟ್ರೋಪಿ, ಬಾಲಕಿಯರಿಗೆ 5 ಟ್ರೋಪಿ, 12 ವರ್ಷ ವಯೊಮೀತಿಯ ಬಾಲಕರಿಗೆ 5 ಟ್ರೋಪಿ, ಬಾಲಕಿಯರಿಗೆ 5 ಟ್ರೋಪಿ, 14 ವರ್ಷ ವಯೊಮೀತಿಯ ಬಾಲಕರಿಗೆ 5 ಟ್ರೋಪಿ, ಬಾಲಕಿಯರಿಗೆ 5 ಟ್ರೋಪಿ, 16 ವರ್ಷ ವಯೊಮೀತಿಯವರಿಗೆ 3 ಟ್ರೋಪಿ, 16 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಬಹುಮಾನ 2000 ರೂ+ಟ್ರೋಪಿ, ದ್ವಿತೀಯ ಬಹುಮಾನ 1500 ರೂ + ಟ್ರೋಪಿ, ತೃತಿಯ ಬಹುಮಾನ 1000+ ಟ್ರೋಪಿ, ನಾಲ್ಕನೇ ಬಹುಮಾನ 750 ರೂ +ಟ್ರೋಫಿ, 5 ನೇ ಬಹುಮಾನ 500ರೂ+ಟ್ರೋಫಿ, 8 ವರ್ಷ ವಯೊಮೀತಿಯ ಉತ್ತಮ ಯಲ್ಲಾ ಪುರ ಟ್ರೋಪಿ, 10 ವರ್ಷ ವಯೊಮೀತಿಯ ಉತ್ತಮ ಯಲ್ಲಾಪುರ ಟ್ರೋಪಿ, 12 ವರ್ಷ ವಯೊಮೀತಿಯ ಉತ್ತಮ ಯಲ್ಲಾಪುರ ಟ್ರೋಪಿ, 14 ವರ್ಷ ವಯೊಮೀತಿಯ ಉತ್ತಮ ಯಲ್ಲಾಪುರ ಟ್ರೋಪಿ ಬಹುಮಾನ ನೀಡಲಾಗುವುದು ಎಂದಿ ತಿಳಿಸಿದರು.ಒಟ್ಟು ಮೊದಲ ಬಂದ 150 ಎಂಟ್ರಿಗಳಿಗೆ ಆಧ್ಯತೆ ನೀಡಲಾಗುವುದು. ವಯಸ್ಸಿನ ದೃಢೀಕರಣಕ್ಕಾಗಿ ಆಧಾರ ಕಾರ್ಡ, ಜನ್ಮ ದಾಖಲೆ ಕಡ್ಡಾಯವಾಗಿ ನೀಡುವುದು. ಪಂದ್ಯವು ಬೆಳಿಗ್ಗೆ 9.30 ರಿಂದ ಪ್ರಾರಂಭವಾಗುವುದು. ಮಾಹಿತಿ ಮತ್ತು ನೊಂದಣಿಗಾಗಿ ಆನಂದ ಸ್ವಾಮಿ 8762480128 ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರ ಸತೀಶ್ ಹೆಗಡೆ, ದಿನೇಶ ರೇವಣಕರ್ ಇದ್ದರು.
What's Your Reaction?






