ಐರನ್ ಮ್ಯಾನ್ 70.3 ಟ್ರಯಾಥ್ಲಾನ್: ಶ್ರೀಲಂಕಾದಲ್ಲಿ ದೊಡ್ಮನೆ ಹುಡುಗನ ಸಾಧನೆ
ಆಪ್ತ ನ್ಯೂಸ್ ಸಿದ್ದಾಪುರ:
ಇತ್ತೀಚಿಗೆ ಶ್ರೀಲಂಕಾ ದ ಕೊಲೊಂಬೊ ದಲ್ಲಿ ನಡೆದ ಐರನ್ ಮ್ಯಾನ್ 70.3 (Ironman 70.3 Colombo) ಟ್ರಯಾಥ್ಲಾನ್ ಅನ್ನು ಶಶಿಭೂಷಣ ಹೆಗಡೆ ದೊಡ್ಮನೆಯವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಸ್ಪರ್ಧೆಯು 1.9 ಕಿಮೀ ಈಜು, 90 ಕಿಮೀ ಸೈಕ್ಲಿಂಗ್ ಮತ್ತು 21.1 ಕಿಮೀ ಓಟವನ್ನು ಒಳಗೊಂಡಿರುತ್ತದೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಈ ತರಹದ ಸಾಧಕರನ್ನು 'ಫಿಟ್ ಇಂಡಿಯಾ' ಅಭಿಯಾನದ ಅಡಿಯಲ್ಲಿ ಶ್ಲಾಘಿಸಿದ್ದರು,
ದಿನಾಂಕ 22 ಫೆಬ್ರವರಿ 2026 ರಂದು ಕೊಲೊಂಬ ದಲ್ಲಿ ನಡೆದ ironman 70.3 ಟ್ರಯಾಥ್ಲಾನ್ ಅನ್ನು ಶಶಿಭೂಷಣ ಹೆಗಡೆಯವರು ಒಟ್ಟು ಸಮಯ 6 ತಾಸು 48 ನಿಮಿಷದಲ್ಲಿ ಪೂರ್ತಿಗೊಳಿಸಿದರು,
ಅಷ್ಟಕ್ಕೂ ಈ ಐರನ್‌ಮ್ಯಾನ್ 70.3 ರ ಎಂದರೇನು,
ಐರನ್‌ಮ್ಯಾನ್ 70.3 (Ironman 70.3) ರೇಸ್, ಸ್ಪರ್ಧೆಯಲ್ಲಿ ಭಾಗವಹಿಸುವವರ ದೈಹಿಕ ಮತ್ತು ಮಾನಸಿಕ ಸ್ಥಿತಿಸ್ಥಾಪಕತೆಯನ್ನು ಪರೀಕ್ಷಿಸುವ ಒಂದು ಕಠಿಣ ಸವಾಲಿನ ಸ್ಪರ್ಧೆಯಾಗಿದೆ. ಈ ಸ್ಪರ್ಧೆ ಸಮುದ್ರದಲ್ಲಿ 1.9 ಕಿಲೋಮೀಟರ್ ಈಜು, 90 ಕಿಮೀ ಸೈಕ್ಲಿಂಗ್, 21.1 ಕಿಮೀ ಓಟವನ್ನು ಒಳಗೊಂಡಿರುತ್ತದೆ. ಇವೆಲ್ಲವನ್ನು ಪೂರ್ಣಗೊಳಿಸಿದವರು ಮಾತ್ರ ಈ ಸ್ಪರ್ಧೆಯಲ್ಲಿ ಗೆಲ್ಲಲು ಸಾಧ್ಯ.
ಶಶಿಭೂಷಣ ಅವರು ಐರನ್ ಮ್ಯಾನ್ ಟ್ರಯಥ್ಲಾನ್ ಪೂರ್ಣಗೊಳಿಸಿ ಫಿಟ್ನೆಸ್ ಜೊತೆಗೆ ಮಾನಸಿಕ ಸ್ಥೈರ್ಯವನ್ನು ಪ್ರದರ್ಶಿಸಿದ್ದಾರೆ.
ಐರನ್‌ಮ್ಯಾನ್ 70.3 ಸ್ಪರ್ಧೆಯನ್ನು ಹಾಫ್ ಐರನ್‌ಮ್ಯಾನ್ ಎಂದೂ ಕರೆಯುತ್ತಾರೆ. ಇದು ವಿಶ್ವದ ಅತ್ಯಂತ ಬೇಡಿಕೆಯ ಟ್ರಯಥ್ಲಾನ್‌ಗಳಲ್ಲಿ ಒಂದಾಗಿದೆ. ಇದರಲ್ಲಿರು 70.3 ಅದರ ದೂರವನ್ನು ಸೂಚಿಸುತ್ತದೆ.
ಇದು ಮೂರು ಸಹಿಷ್ಣುತಾ ವಿಭಾಗಗಳನ್ನು ಒಳಗೊಂಡಿದೆ:
ಸ್ಪರ್ಧಿಗಳ ದೈಹಿಕ ಸಹಿಷ್ಣುತೆ, ಮಾನಸಿಕ ಶಕ್ತಿ ಮತ್ತು ಶಿಸ್ತಿನ ತರಬೇತಿಯನ್ನು ಪರೀಕ್ಷಿಸುವ ಈ ಕಠಿಣ ಸ್ಪರ್ಧೆಯನ್ನು ವರ್ಲ್ಡ್ ಟ್ರಯಥ್ಲಾನ್ ಕಾರ್ಪೊರೇಷನ್ ಆಯೋಜಿಸುತ್ತದೆ. ಹಾಫ್ ಐರನ್ ಮ್ಯಾನ್, ಅಥವಾ ಐರನ್ ಮ್ಯಾನ್ 70.3, 113 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಇದು 1.9-ಕಿಲೋಮೀಟರ್ ಈಜು, 90-ಕಿಲೋಮೀಟರ್ ಸೈಕಲ್ ಮತ್ತು 21.1-ಕಿಲೋಮೀಟರ್ ಓಟವನ್ನು ಒಳಗೊಂಡಿದೆ. ಈ ರೇಸ್ ಅನ್ನು 8 ಗಂಟೆ 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಈ ಅವಧಿಯ ಒಳಗಾಗಿ ಸ್ಪರ್ಧೆಯನ್ನು ಪೂರ್ಣಗೊಳಿಸುವ ವ್ಯಕ್ತಿಗೆ ಐರನ್ ಮ್ಯಾನ್ ಎಂಬ ಬಿರುದನ್ನು ನೀಡಲಾಗುತ್ತದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0











