ಫ್ರಿಡ್ಜ್ ದುರಸ್ತಿಗೆ ಮುಂದಾದ ಯುವಕನಿಗೆ ವಿದ್ಯುತ್ ಶಾಕ್; 21ರ ಹರೆಯದಲ್ಲೇ ದುರಂತ ಅಂತ್ಯ!

ಮನೆಯ ಜವಾಬ್ದಾರಿಗೆ ಹೆಗಲು ನೀಡುತ್ತಿದ್ದ ಯುವಕನ ಬದುಕು ಕ್ಷಣಾರ್ಧದಲ್ಲಿ ಅಂತ್ಯ – ವಿದ್ಯುತ್ ಅವಘಡಕ್ಕೆ ಬಲಿಯಾದ ಸಾಕೀಬ್

Nov 10, 2026 - 21:01
 0  342
ಫ್ರಿಡ್ಜ್ ದುರಸ್ತಿಗೆ ಮುಂದಾದ ಯುವಕನಿಗೆ ವಿದ್ಯುತ್ ಶಾಕ್; 21ರ ಹರೆಯದಲ್ಲೇ ದುರಂತ ಅಂತ್ಯ!

ಆಪ್ತ ನ್ಯೂಸ್ ಮುಂಡಗೋಡ:

ಮನೆಯ ಜವಾಬ್ದಾರಿಗೆ ನೆರವಾಗುವ ಉದ್ದೇಶದಿಂದ ದುಡಿಯುತ್ತಿದ್ದ 21 ವರ್ಷದ ಯುವಕನೊಬ್ಬ ಮನೆಯಲ್ಲಿದ್ದ ಫ್ರಿಡ್ಜ್ ದುರಸ್ತಿ ಮಾಡಲು ಮುಂದಾಗಿ ವಿದ್ಯುತ್ ಅವಘಡಕ್ಕೆ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಪಟ್ಟಣದ ಹಳೂರಿನಲ್ಲಿ ನಡೆದಿದೆ.

ಮೃತ ಯುವಕನನ್ನು ಕೆಎಸ್‌ಆರ್‌ಟಿಸಿ ಕಂಡಕ್ಟರ್ ಬಸೀರ್ ಬಂಡಿ ಅವರ ಪುತ್ರ ಸಾಕೀಬ್ ಬಸೀರ್ ಬಂಡಿ (21) ಎಂದು ಗುರುತಿಸಲಾಗಿದೆ.

ಮನೆಯಲ್ಲಿದ್ದ ಫ್ರಿಡ್ಜ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾಕೀಬ್ ಅದನ್ನು ತಾನೇ ದುರಸ್ತಿ ಮಾಡಲು ಮುಂದಾಗಿದ್ದ ಎನ್ನಲಾಗಿದೆ. ಈ ವೇಳೆ ಫ್ರಿಡ್ಜ್‌ನ ವಿದ್ಯುತ್ ತಂತಿಯಿಂದ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ತೀವ್ರ ಶಾಕ್ ತಗುಲಿದೆ. ಪರಿಣಾಮ ಸಾಕೀಬ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಕುಟುಂಬದ ಆಧಾರವಾಗಬೇಕಿದ್ದ ಯುವಕನ ದುರಂತ ಸಾವು

ಇನ್ನೂ ಬದುಕಿನಲ್ಲಿ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು, ಕುಟುಂಬಕ್ಕೆ ನೆರವಾಗುತ್ತಿದ್ದ ಯುವಕನ ಅಕಾಲಿಕ ಸಾವು ಕುಟುಂಬಸ್ಥರು ಹಾಗೂ ಸಂಬಂಧಿಕರನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ. ಮನೆಯಲ್ಲಿ ನಡೆದ ಈ ದುರಂತದಿಂದ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದ್ದು, ಹಳೂರು ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ.

ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0