ಈ ಸಾರಿ ಲಾರಿಯನ್ನೇ ಕದ್ದೊಯ್ದ ಕಳ್ಳರು
ಆಪ್ತ ನ್ಯೂಸ್ ಶಿರಸಿ:
ಇಷ್ಟು ದಿನಗಳ ಕಾಲ ಶಿರಸಿಯಲ್ಲಿ ಬೈಕ್ ಕಳ್ಳತನವಾದ ವರದಿ ಕೇಳಿಬರುತ್ತಿದ್ದವು. ನಿಲ್ಲಿಸಿ ಇತ್ತ ಬೈಕ್ ಕ್ಷಣಾರ್ಧದಲ್ಲಿ ನಾಪತ್ತೆ ಆಗುತ್ತಿದ್ದವು. ಈ ಸಾರಿ ಕಳ್ಳರು ಅಪಡೇಟ್ ಆಗಿದ್ದಾರೆ. ಈ ಸಾರಿ ಲಾರಿಯನ್ನೇ ಕದ್ದುಕೊಂಡುಹೋಗಿದ್ದಾರೆ.
ನಗರದ ಹುಬ್ಬಳ್ಳಿ ರಸ್ತೆಯ ಚಿಪಗಿ ಚೆಕ್ ಪೋಸ್ಟನಿoದ ಕೂಗಳತೆ ದೂರದಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದು ನಿನ್ನೆ ರಾತ್ರಿ ಕಳವಾದ ಬಗ್ಗೆ ವರದಿಯಾಗಿದೆ.ಈ ಸ್ಥಳದಲ್ಲಿ ಸ್ಕೂಟಿ ಒಂದು ಬಿಟ್ಟು ಹೋಗಲಾಗಿದ್ದು ಘಟನೆಯ ಕುರಿತು ತನಿಖೆಯಿಂದ ತಿಳಿಯಬೇಕಾಗಿದೆ.
ಅಶೋಕ ಲೇಲ್ಯಾಂಡ್ ದೋಸ್ತ (KA-31 A 3695) ವಾಹನವನ್ನು ಕಳ್ಳರು ಕದ್ದುಕೊಂಡುಹೋಗಿದ್ದಾರೆ. ಕಾರ್ತಿಕ್ ಕುಮಾರ ಹುಡೈದ್ ಇವರಿಗೆ ಸೇರಿದ ವಾಹನವೇ ಕಳ್ಳತನವಾಗಿದೆ. ಗ್ರಾಪಂ ಸದಸ್ಯ ನವೀನ ಶೆಟ್ಟಿ ಈ ಬಗ್ಗೆ ಪೋಲಿಸರ ಗಮನಕ್ಕೆ ತಂದು ತನಿಖೆಗೆ ಆಗ್ರಹಿಸಿದ್ದಾರೆ.
ಕಳ್ಳರು ಕಳ್ಳತನದಲ್ಲಿ ನಿರತರಾಗಿದ್ದಾರೆ ಪೊಲೀಸರು ಮಾತ್ರ ನಗರ ಮಧ್ಯದ ಬೈಕ್ ಸವಾರರ ದಾಖಲೆ ಪರಿಶೀಲನೆ ಮಾಡುವಲ್ಲಿ ನಿರತರಾಗಿದ್ದಾರೆ. ಕಳ್ಳರನ್ನು ಹಿಡಿದು ಹೆಡೆಮುರಿ ಕಟ್ಟಬೇಕಿದ್ದ ಪೊಲೀಸರು ವಾಹನ ಸವಾರರ ದಾಖಲೆ ಪರಿಶೀಲಿಸಿ ದಂಡ ಹಾಕುವಲ್ಲಿ ನಿರತರಾಗಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



