ದೇವರ ಬಂಗಾರ ಕದ್ದವರು ಅಂದರ್

ಆಪ್ತ ನ್ಯೂಸ್ ಶಿರಸಿ:
ಶಿರಸಿ ತಾಲೂಕಿನ ಹುಲೇಕಲ್ ಹಂಚಾರ್ತಾ ಎಂಬಲ್ಲಿ ಸಪ್ಟೆಂಬರ್ 10ರಂದು ಮಧ್ಯರಾತ್ರಿ 01-15 ಗಂಟೆಯ ಸುಮಾರಿಗೆ ಚೌಡೇಶ್ವರಿ ದೇವಸ್ಥಾನದ ಸ್ಟೀಲಿನ ಬಾಗಿಲನ್ನು ಕಳ್ಳರು ತೆರೆದು ದೇವರ ಮೂರ್ತಿಯ ಮೇಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣ ಸೇರಿದಂತೆ ಒಟ್ಟೂ 2.31.400/-ರೂ ಮೌಲ್ಯದ ಆಭರಣಗಳನ್ನು ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ನಗದು ಹಣ 80,000/-ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಕಳ್ಳರನ್ನು ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಾಲಕುಮಾರ ತಂದೆ ವಾಸು ಕೆ, @ ಬಾಲರಾಜು ಸ್ವಾಮಿ, ಅಂತರಗಂಗೆ, ಭದ್ರಾವತಿ ಹಾಲಿ: ಬೆಂಗಳೂರು, ಮಹಮ್ಮದ್ ಅಲಿ ತಂದೆ ಅಲಿಕಾಕಾ @ ಜಯರಾಜ್, ಸಾ|| ಅಂತರಗಂಗೆ, ತಾ: ಭದ್ರಾವತಿ. ಜಿಲ್ಲೆ: ಶಿವಮೊಗ್ಗ ಇವರೇ ದೇವರ ಆಭರಣವನ್ನು ಕಳ್ಳತನ ಮಾಡಿದ್ದರು. ಇವರನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಆರೋಪಿತರಿಂದ ಸುಮಾರು 1,50,000/- ರೂ ಮೌಲ್ಯದ ಬೆಳ್ಳಿಯ ಆಭರಣ ಹಾಗೂ 60,000/- ರೂ ನಗದು ಹಣ ಜಪ್ತ ಪಡಿಸಿಕೊಂಡು, ಆರೋಪಿತರನ್ನು ಬಂಧಿಸಲಾಗಿದೆ. ಪರಶುರಾಮ ಮಾದೇವ ಶೆಟ್ಟಿ ಎಂಬುವವರು ದೂರು ನೀಡಿದ್ದರು.
DYSP ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ, ಪಿಎಸ್ಐಗಳಾದ ಸಂತೋಷ ಕುಮಾರ ಮತ್ತು ಅಶೋಕ ರಾಟೋಡ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. SP ದೀಪನ್ ಶ್ಲಾಘಿಸಿದ್ದಾರೆ.
What's Your Reaction?






