ಸ್ವದೇಶಿ ಬಳಸಿ ದೇಶ ಬೆಳೆಸಿ ಸೈಕಲ್ ಜಾಥಾ
ಆಪ್ತ ನ್ಯೂಸ್ ಯಲ್ಲಾಪುರ:
ಇಂದಿನ ಯುವಕರಿಗೆ ಪ್ರೇರಣೆ ಹಾಗೂ ಮಾದರಿಯಾಗುವಂತ ಕೆಲಸವನ್ನು ಈ ಸೈಕಲ್ ಜಾಥಾ ಮಾಡುತ್ತಿರುವುದು ಸಂತಸ. ಜಿಲ್ಲೆಗೆ ಅದರಲ್ಲೂ ನನ್ನ ಕ್ಷೇತ್ರಕ್ಕೆ ಬರಮಾಡಿಕೊಳ್ಳಲು ಸಂತೋಷವಾಗುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ್ ಹೇಳಿದರು.
ಅವರು ಅಂಕೋಲಾ ಬಸ್ ನಿಲ್ದಾಣ ವೃತ್ತದಲ್ಲಿ ಸ್ವದೇಶಿ ಬಳಸಿ ದೇಶ ಬೆಳೆಸಿ ಸೈಕಲ್ ಜಾಥಾ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ನಿವೃತ್ತರುಗಳಾದ ನಿಮಗಿರುವ ಕಾಳಜಿಯ ಬಗ್ಗೆ ಹೆಮ್ಮೆಯಾಗುತ್ತದೆ.ದೇಶದ ಭದ್ರತೆ ಭವಿಷ್ಯ ದೇಶಾಭಿಮಾನ, ಮತ್ತು ಸ್ವದೇಶಿ ಉತ್ಪನ್ನ ಬಳಕೆಯಲ್ಲಿ ಪ್ರತಿಯೊಬ್ಬರೂ ಚಿಂತಿಸಬೇಕು ಎಂದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾದ್ಯಕ್ಷ ಶಿವಾರಾಮ ಗಾಂವ್ಕಾರ್ ಕನಕನಹಳ್ಳಿ ಜಾಥಾವನ್ನು ಸ್ವಾಗತಿಸಿ ಮಾತನಾಡಿ ಇಂಥದ್ದೊಂದುಜಾಥಾ ಮೂಲಕ ಸ್ವದೇಶಿ ವಸ್ತು ಬಳಕೆ ಕಲ್ಪನೆಯನ್ನು ಜಾತಾ ತಂಡ ಮಾಡುತ್ತಾ ಬಂದಿದೆ. ನಮ್ಮ ಉತ್ಪನ್ನ ನಮ್ಮ ವಸ್ತುಗಳನ್ನು ಬಳಸುವ ಮೂಲಕ ಭಾರತವನ್ನು ಎತ್ತರಕ್ಕೆ ಒಯ್ಯುವ ಕೆಲಸವಾಗಬೇಕಿದೆ ಎಂದರು.
ಜಾಥಾ ತಂಡದ ಮುಖ್ಯಸ್ಥ ನಿವೃತ್ತ ಸೈನಿಕ ರಮೇಶ ಜಗತಾಪ್ ಜಾಥಾದ ಉದ್ದೇಶವನ್ನು ತಿಳಿಸಿದರು.
ಉತ್ತರ ಕನ್ನಡ ಜಿಲ್ಲಾ ಭಾರತೀಯ ಕಿಸಾನ್ ಸಂಘದ ವತಿಯಿಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ, ಕೋಶಾಧ್ಯಕ್ಷ ಗೋಪಾಲಕೃಷ್ಣ ಬಾಳೆಗದ್ದೆ, ಅಂಕೋಲಾ ತಾಲೂಕಾಧ್ಯಕ್ಷ ರಾಘವೇಂದ್ರ ಗಾಂವ್ಕಾರ್, ಕಾರ್ಯದರ್ಶಿ ಸಂತೋಷ ನಾಯ್ಕ್ ಅವರುಗಳು ಜಾಥಾದ ತಂಡದವರನ್ನು ಶಾಲು ಹಾಕಿ, ಮಾಲಾರ್ಪಣೆಗೈದು ಬರಮಾಡಿಕೊಂಡರು.
ತಂಡದ ಬ್ರಿಗೇಡಿಯರ್ ರವಿ ಮುನಿಸ್ವಾಮಿ,ನಿವೃತ್ತ ಮೇಜರ್ ಜನರಲ್ ಎ.ವಿ.ಕೆ ಮೋಹನ,ತೇರಿಗೆ ಇಲಾಖೆಯ ನಿವೃತ್ತ ಅಧಿಕಾರಿ ರಮೇಶ ನರಸಯ್ಯ, ನಿವೃತ್ತ ಪ್ರಾಚಾರ್ಯೆ ಮಿತ್ರಾ ಶೆಣೈ, ಸ್ಥಳಿಯ ಮುಖಂಡರಾದ ರಾಘು ಭಟ್ಟ ಸುಂಕಸಾಳ, ಸಂಜು ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಜಾಥಾದ ವ್ಯವಸ್ಥೆಯ ನೇತೃತ್ವ ವಹಿಸಿದ್ದ ಕಿಸಾನ್ ಸಂಘದ ಪ್ರದೇಶ ಕಾರ್ಯಕಾರಿಣಿ ಬಾ.ನಾ. ಮಾಧವ ಸ್ವಾಗತಿಸಿ ನಿರ್ವಹಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0



