ಒಂದು ವಾರದಲ್ಲಿ ತೆರವು ಮಾಡಿ, ಇಲ್ಲದಿದ್ದಲ್ಲಿ ಒಕ್ಕಲೆಬ್ಬಿಸಲು ಕಾನೂನು ಕ್ರಮ- ನೋಟಿಸ್ : ವಿಷ ಕೊಟ್ಟು ಒಕ್ಕಲೆಬ್ಬಿಸಿ ಸಂತ್ರಸ್ಥೆಯ ಅಳಲು
ಆಪ್ತ ನ್ಯೂಸ್ ಸಿದ್ದಾಪುರ:
ಭೂಮಿ ಬಿಡುವುದಾದರೇ, ಮೊದಲು ಒಂದು ತೊಟ್ಟು ವಿಷ ಕೊಡಿ ನಂತರ ನಮ್ಮನ್ನು ಒಕ್ಕಲೆಬ್ಬಿಸಲಿ - ಎಂಬ ವಿಷಾದದಿಂದ ಜೀವನಕ್ಕಾಗಿ ಮೂರು ತಲೆಮಾರಿನ ಅನಾಧಿಕಾಲದಿಂದ ಅರಣ್ಯ ಭೂಮಿ ಸಾಗುವಳಿ ಮಾಡಿದ ಕ್ಷೇತ್ರಕ್ಕೆ ಸಂಭAಧಿಸಿ ಅರಣ್ಯ ಇಲಾಖೆಯಿಂದ ಒಂದು ವಾರದಲ್ಲಿ ತೆರವು ಮಾಡಿ ಇಲ್ಲದಿದ್ದಲ್ಲಿ ಒಕ್ಕಲೆಬ್ಬಿಸಲು ಕಾನೂನು ಕ್ರಮ ಎಂಬ ನೋಟಿಸ್ ಪ್ರದರ್ಶಿಸುತ್ತಾ ನೊಂದು ನುಡಿದ ಅರಣ್ಯವಾಸಿಯ ಮಾತಿದು.
ಮನೆ ಕಟ್ಟಿಕೊಂಡು ೬೦ ವರ್ಷದೊಂದಿಗೆ ಅಷ್ಟೇ ವರ್ಷದ ತೆಂಗು ಅಡಿಕೆ ಗಿಡ ಬೆಳಸಿಕೊಂಡು ಈಗ ತೆರವು ಪಡಿಸಲು ನೋಟಿಸ್ ಪಡೆದಂತ ಕ್ಯಾದಗಿ ವಲಯದ ಇಟಗಿ ಶಾಖೆಯ ಸುತ್ತಲ ಮನೆ ಗ್ರಾಮದ ಗಾಲಮಾಂವ್ ದ ಅರಣ್ಯವಾಸಿ ಲಿಂಗ ಪುಟ್ಟ ನಾಯ್ಕ ಮತ್ತು ಧರ್ಮಪತ್ನಿ ಲೀಲಾವತಿ ಲಿಂಗ ನಾಯ್ಕ ಅವರು ಸಾಗುವಳಿ ಕ್ಷೇತ್ರಕ್ಕೆ ಅರಣ್ಯ ಅತಿಕ್ರಮಣ ಕ್ಷೇತ್ರಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಅವರ ನೇತೃತ್ವದ ನಿಯೋಗ ಭೇಟಿ ನೀಡಿದಂತ ಸಂದರ್ಭದಲ್ಲಿ ಅವರು ಮೇಲಿನಂತೆ ಹೇಳಿದರು.
ಸಿದ್ದಾಪುರ ತಾಲೂಕಿನ ವಾಜಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುತ್ತಲು ಮನೆ ಗ್ರಾಮದ ಅರಣ್ಯ ಸರ್ವೆ ನಂ ೬೪ ರಲ್ಲಿ ಲಿಂಗ ಪುಟ್ಟ ನಾಯ್ಕ, ಗಾಲಮಾಂವ್ ಅವರು ಅನಧೀಕೃತವಾಗಿ ಅರಣ್ಯ ಭೂಮಿ ಸ್ವಾದೀನ ಮಾಡಿರುವ ಮೂರು ಎಕರೆ ಹದಿನಾಲ್ಕು ಗುಂಟೆ ಪ್ರದೇಶವನ್ನು ಅರಣ್ಯ ಕಾಯಿದೆ ಅಡಿಯಲ್ಲಿ ಒಕ್ಕಲೆಬ್ಬಿಸುಲು ಸಿದ್ದಾಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆನರಾವ್ರತ್ತ ಶಿರಸಿಯವರ ಪ್ರಾಧಿಕಾರದಲ್ಲಿ ೨೦೧೨ ರಲ್ಲಿ ಅಂತಿಮ ಆದೇಶವಾಗಿತ್ತು. ಆದರೇ, ಅನಕ್ಷರಸ್ಥ ಕುಟುಂಬಕ್ಕೆ ಕಾನೂನಿನ ಅಜ್ಞಾನದಿಂದ ೧೯೭೮ ರ ಪೂರ್ವದ ಸಾಗುವಳಿ ಮತ್ತು ಗಿಡ ಮರಗಳಿದ್ದಾಗಲೂ ಮಂಜೂರಿ ಪ್ರಕ್ರಿಯೆಯಿಂದ ವಂಚಿತರಾಗಿದ್ದರು.
ವಲಯ ಅರಣ್ಯಾಧಿಕಾರಿ ಕಛೇರಿ ಕ್ಯಾದಗಿ ವಲಯ ಅವರು ಡಿಸೆಂಬರ್ ೨೦ ರಂದು ನೋಟಿಸ್ ಹೊರಡಿಸಿದ ದಿನದಿಂದ ಒಂದುವಾರದ ಒಳಗೆ ಬೆಳೆದಂತ ೫೦ ರಿಂದ ೬೦ ವರ್ಷ ಬೆಳೆದಂತ ಅಡಿಕೆ ಹಾಗೂ ಇನ್ನೀತರ ಬಾಳೆ, ಮನೆ ಸ್ವತ್ತುಗಳನ್ನು ಸ್ವಇಛ್ಚೇಯಿಂದ ಸ್ವಂತ ಖರ್ಚಿನಲ್ಲಿ ತೆರವು ಮಾಡಲು ಆದೇಶ ನೀಡಿರುವುದು ಕುಟುಂಬವು ಅತಂತ್ರವಾಗುವ ಸ್ಥಿತಿಗೆ ಬಂದAತಾಗಿದೆ ಎಂದು ನಿಯೋಗವು ಅಭಿಪ್ರಾಯ ವ್ಯಕ್ತಪಡಿಸಿತ್ತು.
ನಿಯೋಗದಲ್ಲಿ ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ರಾಮಚಂದ್ರ ನಾಯ್ಕ ತ್ಯಾಗಲಿಮನೆ, ಕೆ ಬಿ ನಾಯ್ಕ ಸುತ್ತಮನೆ, ನಾರಾಯಣ ನಾಯ್ಕ ಗಾಳು ಮನೆ, ರಾಮಚಂದ್ರ ನಾಯ್ಕ ಮುಂಡಗೇತಗ್ಗು, ರವಿ ನಾಯ್ಕ , ಗೋವಿಂದ ಗೌಡ ಕಿಲವಳ್ಳೀ, ಗಣಪತಿ ಗೌಡ ಮಕ್ಕಿಗದ್ದೆ ಮುಂತಾದವರು ಉಪಸ್ಥತರಿದ್ದರು.
ವೇದಿಕೆಯಿಂದ ಕಾನೂನು ನೆರವು:
ಕಾನೂನಿನ ಅಜ್ಞಾನದಿಂದ ಅರಣ್ಯ ಭೂಮಿ ಸಾಗುವಳಿ ವಂಚಿತವಾಗುವ ಲಿಂಗ ಪುಟ್ಟ ನಾಯ್ಕ ಗಾಲಮಾಂವ್ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಕಬ್ಜ ಮತ್ತು ಸಾಗುವಳಿ ಇರುವ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದು ಇರುತ್ತದೆ. ಅರ್ಜಿ ಅರಣ್ಯ ಭೂಮಿ ಮಂಜೂರಿ ನೀರಿಕ್ಷೇಯಲ್ಲಿರುವ ಲಿಂಗ ಪುಟ್ಟ ನಾಯ್ಕ ಏಕಾಎಕಿ ವಲಯ ಕಛೇರಿಯಿಂದ ಒಕ್ಕಲೆಬ್ಬಿಸುವ ನೋಟಿಸ್ ಇಂದ ದಿಗ್ಭ್ರಾಂತಿಗೊಂಡಿರುವ ಸಂತ್ರಸ್ಥೆ ಕುಟುಂಬಕ್ಕೆ ಹೋರಾಟಗಾರರ ವೇದಿಕೆಯ ಸಂಪೂರ್ಣ ಕಾನೂನು ನೇರವು ನೀಡುವುದೆಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0



